ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ಹೇಳಿದರೇನು ಹೀನ ಮನಕ | ತಾನು ಎಚ್ಚರ ಹಿಡಿಯ ದನಕಾ ಪ
ಬೂದಿಯೊಳಗ ಹೋಮ ಮಾಡಿದಂತೆ | ಬೋಧಾನುಗೃಹ ಕಳವದು ಮರೆತಕೆ 1
ಹರಿ ಕೀರ್ತನೆ ಇರಲಿಲ್ಲಾ | ಬರಡು ಮಾತಿಗೆ ಸುಖ ಪಡುದಲ್ಲಾ 2
ಒಮ್ಮೆಯಾದರೂ ಹರಿ ಹರಿಯಂದು | ಝಮ್ಮೆನೆವೆ ಪಶ್ಚಾತಾಪ ಬಾರದೆಂದು 3
ಗಾಳಿಯಂತೆ ಓಡಾಡುವದು ನೋಡಿ | ಕಾಲೂರಿ ನಿಲ್ಲದು ಮತಿಗೇಡಿ 4
ತಂದೆ ಮಹಿಪತಿ ದಯವಾಗದನಕ | ಒಂದು ಹಿಡಿಯದು ಸ್ವಹಿತ ವಿವೇಕಾ 5
***