Audio by Mrs. Nandini Sripad
ಶ್ರೀ ವಿಜಯದಾಸಾರ್ಯ ವಿರಚಿತ ಅಪಮೃತ್ಯು ನಿವಾರಣ ಸುಳಾದಿ
( ಜ್ಞಾನಿಗಳಾದ ಶ್ರೀವಿಜಯದಾಸಾರ್ಯರು , ಶ್ರೀಹರಿಯ ಕೃಪೆಗೆ ವಿಶೇಷ ಪಾತ್ರರಾಗಿದ್ದ , ಜ್ವರಪೀಡಿತನಾದ ಛಾಗಿ ಕೇಶವರಾಯರಿಗೆ ಒದಗಲಿರುವ ಅಪಮೃತ್ಯುವಿಗೆ ಕಾರಣವಾದ ವ್ಯಾಧಿಯನ್ನು ಪರಿಹರಿಸಿ , ಅಪಮೃತ್ಯುವು ಬಾರದಂತೆ ಮಾಡೆಂದು ಪ್ರಾರ್ಥಿಸುತ್ತಾ , ಜ್ವರಪರಿಹಾರಕನಾದ ರುದ್ರಾಂತರ್ಗತ ನಾರಸಿಂಹ ನನ್ನು ಭಕ್ತಿಯಿಂದ ಸ್ಮರಿಸುತ್ತಾ ಈ ಸುಳಾದಿಯನ್ನು ರಚಿಸಿದರು. )
ರಾಗ ಹಿಂದೋಳ
ಧ್ರುವತಾಳ
ರುದ್ರಾಂತರ್ಗತ ನಾರಸಿಂಹ ಮೃತ್ಯುನಿವಾರಿ
ಭದ್ರಫಲದಾಯಕ ದೋಷದೂರ
ಚಿದ್ರೂಪ ಚಿತ್ಪ್ರಕೃತಿ ತ್ರಿಲೋಕನಾಥ
ಅದ್ರಿಧರಿಸಿ ಗೋಕುಲ ಕಾಯ್ದ ವಿನೋದ
ನಿದ್ರಾರಹಿತ ನಿಗಮವಂದ್ಯ ಭಕ್ತಾನಂದ
ಉದ್ರೇಕ ತಂದು ಕೊಡುವ ಕಾಮಿತಾರ್ಥ
ಭದ್ರ ಪ್ರದಾಯಕ ದೋಷದೂರ
ಮುದ್ರೆ ಧರಿಸಿ ನಿನ್ನ ಭಕ್ತಿಯೆಂಬೋ ಗುಣ ಸ -
ಮುದ್ರದೊಳಗೆ ಲೋಲ್ಯಾಡುತಿಪ್ಪ
ಶೂದ್ರಗಾದರು ಆಶಾಭಂಗವಿಲ್ಲವೆಂದು ಮಹ -
ರುದ್ರಾದಿಗಳು ಪೇಳುತಿಪ್ಪರದಕೋ
ಕದ್ರುವೆ ಮಗ ವಾಸುಕಿಯಾ , ಗರುಡನ್ನ ಉ -
ಪದ್ರವ ಬಿಡಿಸಿ ನೀನೇ ಪಾಲಿಸಿದಂದು
ಕ್ಷುದ್ರ ದೇವತೆಗಳಿಗೆ ಈ ಪರಿ ಶಕ್ತಿಯುಂಟೆ
ಛಿದ್ರತನ ಎಣಿಸದಿರು ಪರಮ ಕರುಣೀ
ರೌದ್ರಮೂರುತಿ ಶಾಂತ ವಿಜಯವಿಠ್ಠಲ ನಿನ್ನ
ಸದೃಶ ದೇವನ ಕಾಣೆನೊ ಜಗತ್ತಿನೊಳಗೆ ॥ 1 ॥
ಮಟ್ಟತಾಳ
ಹರಿ ನಿನ್ನ ಸಂಕಲ್ಪ ಇದ್ದಂತೆ ಎನ್ನ
ಶರೀರದೊಳಗೆ ನಿಂದು ಸ್ತೋತ್ರ ಮಾಡಿಸಿಕೊಂಡೆ
ಅರಮರೆಯಿದಕಿಲ್ಲ ಶಾಶ್ವತ ವಾಕ್ಯವೆಂದು
ನೆರೆನಂಬಿದೆ ನಾನು ನಾನಾವಿಧದಲ್ಲಿ
ನರಗೆ ಬಂದಟ್ಟಿದ ವ್ಯಾಧಿಯು ನಿಲಲುಂಟೆ
ಪರಿಹರವಾಗುವುದು ಸಿದ್ಧವಾಯಿತು ಎನಗೆ
ಪುರಹರನುತಪಾದ ವಿಜಯವಿಠ್ಠಲರೇಯ
ನರಹರಿ ಎಂದೆನೆ ಭಯಹರವೊ ॥ 2 ॥
ತ್ರಿವಿಡಿತಾಳ
ಅನ್ಯಥಾ ಗತಿ ಕಾಣೆ ನಿನ್ನ ಪಾದವಲ್ಲದೆ
ಇನ್ನು ತ್ರಿಲೋಕದಲಿ ತಿರುವೆಂಗಳ
ಎನ್ನ ನುಡಿ ಪುಶಿ ಮಾಡಿ ಅಪಹಾಸ ಗೈಸಿದರೆ
ನಿನ್ನದಲ್ಲವೆ ಕೀರ್ತಿ ಅಪಕೀರ್ತಿಯು
ಪೆಣ್ಣಿನಾ ಮೊರೆ ಕೇಳಿ ಕಾಯಲಿಲ್ಲವೆ ನೀನು
ಮುನ್ನ ಪೇಳುವುದೇನು ವಿಸ್ತರಿಸಿ
ಬಣ್ಣಿಸಿದೆ ಬಹು ಬಗೆಯಿಂದ ಈ ಅಬಲೆಯು
ನಿನ್ನ ನಂಬಿಹಳಯ್ಯ ನೀನೇ ಬಲ್ಲೈ
ಧನ್ಯ ಜೀವನದಾಯ ಸುವಾಸತನವಿತ್ತು
ಮನ್ನಿಸುವುದು ಇವಳ ತುತಿಗೆ ಮೆಚ್ಚಿ
ಬೆನ್ನ ಬಿದ್ದವರನ್ನ ಒಪ್ಪಿಸಿ ಕೊಡಲುಂಟೆ
ಬಿನ್ನಹ ಮಾಡಿದೆ ಇಷ್ಟೇ ಮಾತ್ರ
ತನ್ನ ಪತಿಯ ಕೂಡ ತಾಂಬೂಲ ಮೆಲುವ ಸಂ -
ಪನ್ನ ಭಾಗ್ಯವ ಕೊಡು ಕಮಲನಾಭ
ಕನ್ಯೆ ಲಕುಮೀರಮಣ ವಿಜಯವಿಠ್ಠಲರೇಯ
ಘನ್ನಮಹಿಮ ನಿನ್ನ ವಾಕ್ಯ ಅಮೃತ ಸಿದ್ಧ ॥ 3 ॥
ಅಟ್ಟತಾಳ
ಆಳು ಗೆದ್ದರೆ ನೋಡು ಅರಸಗೆ ಜಯಪ್ರದ
ಆಳು ನುಡಿದದ್ದು ಅರಸು ನುಡಿದದ್ದು
ಏಳಲ ಮಾಡದೆ ಯಾದವ ಕುಲಮಣಿ
ಪಾಲಿಸಬೇಕಯ್ಯ ಪರಮ ಅನಿಮಿತ್ತ
ಮೂಲಬಾಂಧವ ಭಾಷೆ ಕೊಟ್ಟರೆ ತಪ್ಪದು
ಪಾಲಸಾಗರಶಾಯಿ ವಿಜಯವಿಠ್ಠಲರೇಯ
ಕಾಲ ಕರ್ಮ ಗುಣ ನಿನಗೆದಿರೆ ಸ್ವಾಮೀ ॥ 4 ॥
ಆದಿತಾಳ
ಅರ್ಥವಾದವಲ್ಲ ಮನಸು ಪೂರ್ವಕದಿಂದ
ಪ್ರಾರ್ಥನೆ ಮಾಡುವೆ ಅನಾದಿ ಬ್ರಹ್ಮಚಾರಿ
ಸ್ವಾರ್ಥಗೋಸುಗವಾಗಿ ಬೇಡಿಕೊಂಬುವನಲ್ಲ
ವ್ಯರ್ಥವಾಗ ಗೊಡದಿರು ವೇದದಲ್ಲಿ ಪೇಳಿದ
ಅರ್ಥ ಜ್ಞಾನಕ್ಕೆ ನಿತ್ಯ ಎಲ್ಲಿದ್ದರು ದೇವ
ಅರ್ಥಾತುರ ನೀನಲ್ಲ ಸಕಲ ಕಾಲದಲ್ಲಿ, ಸ -
ಮರ್ಥ ನೀನಹುದೋ ಸರ್ವೋತ್ತಮ, ಪರಹಿ -
ತಾರ್ಥವಾಗಲಿ ಇದೆ ಪುಶಿಯಾಗದಂತೆ ಕಾಯೊ
ಆರ್ತಿವಿದೂರ ನಮ್ಮ ವಿಜಯವಿಠ್ಠಲ ಕೃ -
ತಾರ್ಥನ್ನ ಮಾಡುವುದು ಮುದದಿಂದ ಒಲಿದು ಬಂದು ॥ 5 ॥
ಜತೆ
ಭಕುತರ ಭಾಗ್ಯವೆ ಅಪೇಕ್ಷಾ ಪೂರೈಸಿ
ಸುಖಕೊಡುವುದು ಬಿಡದೆ ವಿಜಯವಿಠ್ಠಲ ವೇಂಕಟ ॥
********
ಅಪಮೃತ್ಯು ನಿವಾರಣ ಸುಳಾದಿ Apamrutyu Nivarana Suladi
ಧ್ರುವತಾಳ
ರುದ್ರಾಂತರ್ಗತ ನಾರಸಿಂಹ ಮೃತ್ಯು ನಿವಾರಿ |
ಭದ್ರ ಫಲದಾಯಕ ದೋಷ ದೂರ |
ಚಿದ್ರೂಪ ಚಿತ್ಪ್ರಕೃತಿ ತ್ರಿಲೋಕನಾಥ |
ಅದ್ರಿ ಧರಿಸಿ ಗೋಕುಲ ಕಾಯ್ದ ವಿನೋದ |
ನಿದ್ರಾ ರಹಿತ ನಿಗಮ ವಂದ್ಯ ಭಕ್ತಾನಂದ |
ಉದ್ರೇಕಾ ತಂದು ಕೊಡುವ ಕಾಮಿತಾರ್ಥ |
ಭದ್ರ ಪ್ರದಾಯಕ ದೋಷ ದೂರ |
ಮುದ್ರೆ ಧರಿಸಿ ನಿನ್ನ ಭಕ್ತಿಯೆಂಬೋ ಗುಣ ಸ- |
ಮುದ್ರದೊಳಗೆ ಲೋಲಾಡುತಿಪ್ಪ
ಶೂದ್ರಗಾದರು ಆಶಾ | ಭಯವಿಲ್ಲವೆಂದು ಮಹ |
ರುದ್ರಾದಿಗಳು ಪೇಳುತಿಪ್ಪರಿದೆ ಕೋ |
ಕದ್ರುವೆ ಮಗ ವಾಸುಕಿಯಾ ಗರುಡನ್ನ ಉ- |
ಪದವ್ರ ಬಿಡಿಸಿ ನೀನೆ ಪಾಲಿಸಿದಂದು |
ಕ್ಷುದ್ರ ದೇವತೆಗಳಿಗೆ ಈ ಪರಿ ಶಕ್ತಿಯುಂಟೆ |
ಛಿದ್ರತನ ಎಣಿಸದಿರು ಪರಮ ಕರುಣೀ |
ರೌದ್ರ ಮೂರುತಿ ಶಾಂತ ವಿಜಯ ವಿಠ್ಠಲ | ನಿನ್ನ
ಸದೃಶ ದೇವನ ಕಾಣೆನೊ ಜಗತ್ತಿನೊಳು
|| 1 ||
ಮಟ್ಟತಾಳ
ಹರಿ ನಿನ್ನ ಸಂಕಲ್ಪ ಇದ್ದಂತೆ ಎನ್ನ |
ಶರೀರದೊಳಗೆ ನಿಂದು ಸ್ತೋತ್ರ ಮಾಡಿಸಿಕೊಂಡೆ |
ಅರೆ ಮರೆ ಇದಕಿಲ್ಲ ಶಾಶ್ವತ ವಾಕ್ಯವೆಂದು |
ನೆರೆ ನಂಬಿದೆ ನಾನು ನಾನಾ ವಿಧದಲ್ಲಿ |
ನರಗೆ ಬಂದಟ್ಟಿದ ವ್ಯಾಧಿಯು ನಿಲಲುಂಟೆ |
ಪರಿಹರವಾಗುವುದು ಸಿದ್ಧವಾಯಿತು ಎನಗೆ |
ಪುರ ಹರನುತಪಾದ ವಿಜಯ ವಿಠ್ಠಲರೇಯ |
ನರಹರಿ ಎಂದೆನೆ ಭಯಹರವೊ
|| 2 ||
ತ್ರಿವಿಡಿತಾಳ
ಅನ್ಯಥಾ ಗತಿ ಕಾಣೆ ನಿನ್ನ ಪಾದವಲ್ಲದೆ |
ಇನ್ನು ತ್ರಿಲೋಕದಲಿ ತಿರುವೆಂಗಳ |
ಎನ್ನ ನುಡಿ ಪುಶಿ ಮಾಡಿ ಅಪಹಾಸ ಗೈಸಿದರೆ |
ನಿನ್ನದಲ್ಲದೆ ಕೀರ್ತಿ ಅಪಕೀರ್ತಿಯು |
ಪೆಣ್ಣಿನಾ ಮೊರೆ ಕೇಳಿ ಕಾಯಲಿಲ್ಲವೆ ನೀನು |
ಮುನ್ನ ಪೇಳುವುದೇನು ವಿಸ್ತರಿಸಿ |
ಬಣ್ಣಿಸಿದೆ ಬಹು ಬಗೆಯಿಂದ ಈ ಅಬಲೆಯು |
ನಿನ್ನ ನಂಬಿಹಳಯ್ಯ ನೀನೆ ಬಲ್ಲೈ |
ಧನ್ಯ ಜೀವನದಾಯ ಸುವಾಸತನವಿತ್ತು |
ಮನ್ನಿಸುವುದು ಇವಳ ತುತಿಗೆ ಮೆಚ್ಚಿ |
ಬೆನ್ನ ಬಿದ್ದವರನ್ನ ಒಪ್ಪಿಸಿ ಕೊಡಲುಂಟೆ |
ಬಿನ್ನಹ ಮಾಡಿದೆ ಇಷ್ಟೆ ಮಾತ್ರ |
ತನ್ನ ಪತಿಯ ಕೊಡ ತಾಂಬೂಲ|
ಮೆಲುವ ಸಂಪನ್ನ ಭಾಗ್ಯವಕೊಡು ಕಮಲನಾಭ |
ಮೆಲುವ ಸಂಪನ್ನ ಭಾಗ್ಯವಕೊಡು ಕಮಲನಾಭ |
ಕನ್ಯ ಲಕುಮಿ ರಮಣ ವಿಜಯ ವಿಠ್ಠಲರೇಯ |
ಘನ್ನ ಮಹಿಮ ನಿನ್ನ ವಾಕ್ಯ ಅಮೃತ ಸಿದ್ಧ
|| 3 ||
ಅಟ್ಟತಾಳ
ಆಳು ಗೆದ್ದರೆ ನೋಡು ಅರಸಗೆ ಜಯಪ್ರದ |
ಆಳು ನುಡಿದದ್ದು ಅರಸು ನುಡಿದದ್ದು |
ಏಳಾಲ ಮಾಡದೆ ಯಾದವ ಕುಲ ಮಣಿ |
ಪಾಲಿಸಬೇಕಯ್ಯಾ ಪರಮ ಅನಿಮಿತ್ತ |
ಮೂಲ ಬಾಂಧವ ಭಾಷೆ ಕೊಟ್ಟರೆ ತಪ್ಪದು |
ಪಾಲ ಸಾಗರ ಶಾಯಿ ವಿಜಯ ವಿಠ್ಠಲರೇಯ |
ಕಾಲ ಕರ್ಮ ಗುಣ ನಿನಗಿದಿರೆ ಸ್ವಾಮೀ
|| 4 ||
ಆದಿತಾಳ
ಅರ್ಥವಾದವಲ್ಲ ಮನಸು ಪೂರ್ವಕದಿಂದ|
ಪ್ರಾರ್ಥನೆ ಮಾಡುವೆ ಅನಾದಿ ಬ್ರಹ್ಮಚಾರಿ|
ಸ್ವಾರ್ಥಗೋಸುಗವಾಗಿ| ಬೇಡಿಕೊಂಬುವನಲ್ಲ|
ವ್ಯರ್ಥವಾಗ ಗೊಡದಿರು ವೇದದಲ್ಲಿ ಪೇಳಿದ|
ಅರ್ಥ ಜ್ಞಾನಕ್ಕೆ ನಿತ್ಯ ಎಲ್ಲಿದ್ದರು ದೇವ|
ಅರ್ಥಾತುರ ನೀನಲ್ಲ ಸಕಲ |
ಕಾಲದಲ್ಲಿ, ಸಮರ್ಥ ನೀನಹುದೋ |
ಸರ್ವೋತ್ತಮ, ಪರಹಿತಾರ್ಥವಾಗಲಿ |
ಇದೆ ಪುಶಿಯಾಗದಂತೆ ಕಾಯೊ |
ಕಾಲದಲ್ಲಿ, ಸಮರ್ಥ ನೀನಹುದೋ |
ಸರ್ವೋತ್ತಮ, ಪರಹಿತಾರ್ಥವಾಗಲಿ |
ಇದೆ ಪುಶಿಯಾಗದಂತೆ ಕಾಯೊ |
ಆರ್ತ ವಿದೂರ ನಮ್ಮ ವಿಜಯ ವಿಠ್ಠಲ |
ಕೃತಾರ್ಥನ್ನ ಮಾಡುವುದು ಮುದದಿಂದ ಒಲಿದು ಬಂದು
ಕೃತಾರ್ಥನ್ನ ಮಾಡುವುದು ಮುದದಿಂದ ಒಲಿದು ಬಂದು
|| 5 ||
ಜತೆ
ಭಕುತರ ಭಾಗ್ಯವೇ ಅಪೇಕ್ಷಾ ಪೂರೈಸಿ
ಸುಖಕೊಡುವುದು ಬಿಡದೆ ವಿಜಯ ವಿಠ್ಠಲ ವೆಂಕಟ
|| 6 ||
*******