..
ವರದೇಂದ್ರ ವರದೇಂದ್ರ
ವರದಾಯಕ ಗುರು | ವರಗುಣಸಾಂದ್ರ ಪ
ಪಾವನ ಚರಿತ ವೃಂದಾವನ ಮಂದಿರ
ಕೋವಿದ ಜನ ಸುಸೇವಿತ ಸದಯ1
ಕಾಲಾಷಾಯಾಂಬರ | ಭೂಷಿತ ಎನ್ನಯ
ದೋಷಗಳೆಣಿಸದೆ ಪೋಷಿಸು ಸತತ 2
ಕಠಿಣ ಭವಾಂಬುಧಿ ಘಟಜ ಕುಟಿಲಮತ
ವಿಟಿಪಿ ಕುಠಾರಿ ಉತ್ಕಟ ಸನ್ಮಹಿಮ 3
ನತ ಸುರಕ್ಷಿತಿರುಹ | ಜಿತ ರತಿಪತಿ ಶರ
ಮತಿವರ ದಶಮತಿ ದುರಿತವಾರಿಧಿ ವಿಭು 4
ಹೇಮೋದರ ವಿತ ಶಾಮಸುಂದರನ
ಪ್ರೇಮಪಾತ್ರ ಪುಣ್ಯಧಾಮ ಮಹಾತ್ಮ 5
***