Showing posts with label ದಯವಿರಲಿ ದಯವಿರಲಿ ದಾಮೋದರ gopala vittala DAYAVIRALI DAYAVIRALI DAMODARA. Show all posts
Showing posts with label ದಯವಿರಲಿ ದಯವಿರಲಿ ದಾಮೋದರ gopala vittala DAYAVIRALI DAYAVIRALI DAMODARA. Show all posts

Tuesday, 31 December 2019

ದಯವಿರಲಿ ದಯವಿರಲಿ ದಾಮೋದರ ankita gopala vittala DAYAVIRALI DAYAVIRALI DAMODARA



ದಯವಿರಲಿ ದಯವಿರಲಿ ದಾಮೋದರ                      ।।ಪ॥
ಸಯವಾಗಿ ಬಿಡದೆನ್ನ ಸಾಕುವ ಶ್ರೀಕ್ರಷ್ಣ                     ।।ಅ.ಪ॥ 

ಹೋಗಿ ಬರುವೆನಯ್ಯ ಹೋದ ಹಾಂಗೆಲ್ಲ 
ಸಾಗುವವನಲ್ಲನಾ ನಿನ್ನ ಬಿಟ್ಟು 
ತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲೆ ನಿಲ್ಲುವುದು 
ಹ್ಯಾಗೆ ನೀ ನಡೆದಂತೆ ಹಾಗೆ ನಾ ನಡಕೊಂಬೆ            ।।೧।।

ಇದ್ದಲ್ಲೆ ಎನ್ನನುದ್ಧರಿಪ ಶಕ್ತಿ ಅ-
ಸಾಧ್ಯ ನಿನಗೆಂದು ನಾ ಬಂದವನಲ್ಲ 
ನದ್ಯಾದಿ ಕ್ಷೇತ್ರಮೂರ್ತಿಗಳಲ್ಲ್ಲಿ ನಿಜ ಜ್ಞಾನ 
ವೃದ್ಧ ಜನರ ಹುಡುಕಿ ನಿನ್ನ ತಿಳಿಯಲು ಬಂದೆ             ।।೨।।

ಸತತ ಇದ್ದಲ್ಲೆ ಎನ್ನ ಸಲಹೊ ಅವರೊಳಗಾಗಿ
ಅತಿಶಯವು ಉಂಟು ವಿಭೂತಿಯಲ್ಲಿ 
ಗತಿಯು ಸಾಧನಕೆ ಅಭಿವ್ಯಕ್ತ ಸಂದರ್ಶನದಿ 
ಸ್ಮೃತಿಗೆ ವಿಶೇಷ ಮಾರುತಿರಮಣ ನಿನ್ನ                    ।।೩।।

ನೋಡಿದೆನೆ ನಾ ನಿನ್ನ ನೋಡದೆ ಎಂದೆಂದು 
ಪಾಡಿದೆನೆ ಆರಾರು ಪಾಡದೊಂದು 
ಮಾಡಿದೆನೆ ಅರ್ಚನೆಯ ಮೀಸಲಾದುದು ಒಂದು 
ಮೂಢಮತಿಯಲಿ ಮುಂದೆ ನಿಂದೆ ಕೈಮುಗಿದು            ।।೪।।

ಬಂದೆನೊ ನಾನಿಲ್ಲಿ ಬಹುಜನ್ಮದ ಸುಕೃತ-
ದಿಂದ ನಿನ್ನ ಬಳಿಗೆ ಇಂದಿರೇಶ 
ಒಂದು ಮಾತ್ರವು ಇಟ್ಟು ಸಕಲವು ಅರ್ಪಿಸಿದೆ 
ಬಂಧನ ಬಡಿವ ಭಕುತಿಯು ಜ್ಞಾನ ನೀಡುವುದು           ।।೫।।

ಬಿನ್ನಪವ ಕೇಳು ಸ್ವಾಮಿ ಎನ್ನನೋಬ್ಬನ್ನೆ ಅಲ್ಲ 
ಎನ್ನ ಹೊಂದಿ ನಡೆವ ವೈಷ್ಣವರನ 
ಇನ್ನವರಿಗೆ ಬಾಹೊ ದುಷ್ಕರ್ಮಗಳ ಕೆಡಿಸಿ 
ಘನಗತಿಗೈದಿಸುವ ಭಕುತಿ ಕೊಡು ಕರುನಾಡಿ             ।।೬।।

ರಾಜರಾಜೇಶ್ವರ ರಾಜೀವದಳನಯನ 
ಮೂಜಗದೊಡೆಯ ಮುಕುಂದಾನಂದ 
ಈ ಜೀವಕೀ ದೇಹ ಬಂದದ್ದಕ್ಕು ಎನಗತಿ ನಿ 
ರ್ವ್ಯಾಜದಿ ಸುರಗಂಗೆ ಸ್ನಾನವನು ಮಾಡಿಸೊ              ।।೭।।

ಎನಗೆ ಆವುದು ಒಲ್ಲೆ ಎಲ್ಲೆಲ್ಲಿ ಪೋದರು 
ಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನವ ಕೊಡೊ 
ಚಿನುಮಯ ಮೂರುತಿ ಗೋಪಾಲವಿಠಲ 
ಘನಕರುಣಿ ಮಧ್ವಮುನಿ ಮನಮಂದಿರನಿವಾಸ             ।।೮।।
***

ರಾಗ :  ಬಿಲಹರಿ  ತಾಳ : ಝಂಪೆ (raga tala may differ in audio)

Dayavirali dayavirali damodara ||pa||

Sayavagi bidadenna sakuva srikrashna ||a.pa||

Hogi baruvenayya hoda hangella
Saguvavanallana ninna bittu
Tugi tottilu konege sthaladalle nilluvudu
Hyage ni nadedante hage na nadakombe ||1||

Iddalle ennanuddharipa Sakti a-
Sadhya ninagendu na bandavanalla
Nadyadi kshetramurtigalallli nija j~jana
Vruddha janara huduki ninna tiliyalu bande ||2||

Satata iddalle enna salaho avarolagagi
Atisayavu untu vibutiyalli
Gatiyu sadhanake abivyakta sandarsanadi
Smrutige visesha marutiramana ninna ||3||

Nodidene na ninna nodade endendu
Padidene araru padadondu
Madidene archaneya misaladudu ondu
Mudhamatiyali munde ninde kaimugidu ||4||

Bandeno nanilli bahujanmada sukruta-
Dinda ninna balige indiresa
Ondu matravu ittu sakalavu arpiside
Bandhana badiva Bakutiyu j~jana niduvudu ||5||

Binnapava kelu svami ennanobbanne alla
Enna hondi nadeva vaishnavarana
Innavarige baho dushkarmagala kedisi
Ganagatigaidisuva Bakuti kodu karunadi ||6||

Rajarajesvara rajivadalanayana
Mujagadodeya mukundananda
I jivaki deha bandaddakku enagati ni
Rvyajadi suragange snanavanu madiso ||7||

Enage Avudu olle ellelli podaru
Kshana bidade ninna nolpa j~janava kodo
Cinumaya muruti gopalavithala
Ganakaruni madhvamuni manamandiranivasa ||8||
***


ಶ್ರೀ ಗೋಪಾಲದಾಸರ ಕೃತಿ

 ರಾಗ : ಸಿಂಧುಭೈರವಿ           ಖಂಡಛಾಪುತಾಳ 

ದಯವಿರಲಿ ದಯವಿರಲಿ ದಾಮೋದರ ॥ ಪ ॥
ಸಯವಾಗಿ ಬಿಡದೆನ್ನ ಸಾಕುವ ಕೃಷ್ಣ ॥ ಅ ಪ ॥

ಹೋಗುವಾ ಹಾದಿಯಲಿ ಹೋದ ಹಾಂಗೆಲ್ಲ ನಾ ।
ಸಾಗುವವನಲ್ಲ ನಿನ್ನಯ ಸ್ಮರಣೆಯನು ಬಿಟ್ಟು ॥
ತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲೆ ನಿಲುವಂತೆ ।
ಹ್ಯಾಂಗೆ ನಡೆಸುವಿ ಹಾಂಗೆ ನಡಕೊಂಬೆ ಸ್ವಾಮಿ ॥ 1 ॥

 ರಾಗ : ರಂಜಿನಿ 

ಇದ್ದಲ್ಲೆ ನೀ ಎನ್ನನುದ್ಧರಿಸುವ ಶಕ್ತಿ , ಅ - ।
ಸಾಧ್ಯ ನಿನಗೆಂದು ಬಂದವನಲ್ಲವೋ ॥
ನದ್ಯಾದಿಕ್ಷೇತ್ರಮೂರ್ತಿಗಳ ನಿಜಜ್ಞಾನ - ।
ವೃದ್ಧಜನರನು ಹುಡುಕಿ ನಿನ್ನ ತಿಳಿಯಲು ಬಂದೆ ॥ 2 ॥

 ರಾಗ : ಹಿಂದೋಳ 

ಸಾಧನಕೆ ಅಭಿವ್ಯಕ್ತ ವಿಶೇಷಮೂರುತಿ ನಿನ್ನ ।
ಪಾದಕಮಲವ ನಂಬಿ ಸುಖಿಸುತಿರುವೆ ॥
ಶೋಧಿಸೆನ್ನಯ ಸದನ ಬದಿಗ ನೀನಾಗಿದ್ದು ।
ಬಾದರಾಯಣಸ್ವಾಮಿ ಭಯದೂರ ಮಾಡಯ್ಯ ॥ 3 ॥

 ರಾಗ : ಪೂರ್ವಿಕಲ್ಯಾಣಿ 

ಬಂದೆನಾ ಬಹುಜನುಮದ ಸುಕೃತದ ಫಲದಿಂದ ।
ಬಿಂದುಮಾತ್ರವು ಇದ್ದು ಸಕಲ ನಿನಗರ್ಪಿಸಿದೆ ॥
ಇಂದಿರೇಶನೆ ನಿನ್ನ ಕಂದ ನಾನೆಂದು ।
ಬಂಧನವ ಕಡಿವ ಸದ್ಭಕುತಿ ಜ್ಞಾನವ ನೀಡೋ ॥ 4 ॥

 ರಾಗ : ಆನಂದಭೈರವಿ 

ನೋಡಿದೆನೆ ನಾ ನಿನ್ನ ನೋಡದ್ದು ಎಂದೆಂದು ।
ಪಾಡಿದೆನೆ ಆರಾರು ಪಾಡದ್ದೊಂದು ॥
ಮಾಡಿದೆನೆ ಅರ್ಚನೆ ಮೀಸಲಾದದ್ಧೊಂದು ।
ಮೂಢಮತಿಯಲಿ ನಿಂದೆ ಕೈಮುಗಿದು ನಿನ್ನ ಮುಂದೆ ॥ 5 ॥

 ರಾಗ : ನಾದನಾಮಕ್ರಿಯಾ 

ಬಿನ್ನಪವ ಕೇಳ್ ಸ್ವಾಮಿ ಎನ್ನನೊಬ್ಬನೆ ಅಲ್ಲ ।
ನಿನ್ನ ಪಾದವ ನಂಬಿ ನಡೆವ ಸುಜನರೆಲ್ಲ ॥
ಇನ್ನಿವರಿಗೆ ಬಾಹೋ ದುಷ್ಕರ್ಮಗಳ ಬಿಡಿಸಿ ।
ಚೆನ್ನಾಗಿ ಪಾಲಿಸಿ ಮುಕುತಿ ಕೊಡೋ ಸ್ವಾಮೀ ॥ 6 ॥

 ರಾಗ : ಸಿಂಧುಭೈರವಿ 

ಎನಗೆ ಆವುದು ಒಲ್ಲೆ ಎಲ್ಲೆಲ್ಲಿ ಹೋದರು ।
ಕ್ಷಣ ಬಿಡದಲೆ ನಿನ್ನ ನೋಡುವ ಜ್ಞಾನ ಕೊಡು ಸ್ವಾಮಿ ॥
ಚಿನುಮಯಮೂರುತಿ ಗೋಪಾಲವಿಠ್ಠಲ ।

ಘನ್ನಕರುಣಿಯೆ ಮಧ್ವಮುನಿಮಂದಿರವಾಸ ॥ 7 ॥
************


ದಯವಿರಲಿ ದಯವಿರಲಿ ದಾಮೋದರ ||ಪಲ್ಲವಿ||
ಸಯವಾಗಿ ಬಿಡದೆನ್ನ ಸಾಕುವ ಶ್ರೀಕೃಷ್ಣ ||ಅನು ಪಲ್ಲವಿ||

ಹೋಗುವ ಹಾದಿಯಲಿ ಹೋದ ಹಾಗೆಲ್ಲ ನಾ
ಸಾಗುವವ ನಾನಲ್ಲ ನಿನ್ನ ಸ್ಮರಣೆಯ ಬಿಟ್ಟು
ತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲೆ ನಿಲುವಂತೆ
ಹ್ಯಾಂಗೆ ನಡೆಸುವಿ ಹಾಂಗೆ ನಡಕೊಂಬೆ ಸ್ವಾಮಿ ||-೧-||

ಬಂದೆನೊ ನಾನಿಲ್ಲಿ ಬಹುಜನ್ಮದ ಸುಕೃತ-
ದಿಂದ ನಿನ್ನ ಬಳಿಗೆ ಇಂದಿರೇಶ
ಒಂದು ಮಾತ್ರವು ಬಿಟ್ಟು ಸಕಲವು ಅರ್ಪಿಸಿದೆ
ಬಂಧನವ ಕಡಿವ ಭಕುತಿಯು ಜ್ಞಾನ ಭಕುತಿ ಕೊಡು ಸ್ವಾಮಿ ||-೨-||

ಎನಗಾವುದೂ ಒಲ್ಲೆ ಎಲ್ಲೆಲ್ಲಿ ಹೋದರೂ
ಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನವ ಕೊಡೊ ಸ್ವಾಮಿ
ಚಿನುಮಯ ಮೂರುತಿ ಗೋಪಾಲವಿಠಲ
ಘನಕರುಣಿ ಮಧ್ವಮುನಿ ಮನಮಂದಿರವಾಸ ||-೩||

**********