ಮುದ್ದು ರಾಮರ ಬಂಟ ಬುದ್ಧಿವುಳ್ಳ ಹನುಮಂತ
ಹದ್ದಾಗಿ ಸಾರಿದ್ದಾನೆ ಆಕಾಶಕೆ
ನಿದ್ರೆ ಗೈವ ಸಮಯದಲಿ ಎದ್ದು ಬಾರೆಂದರೆ ಅ--
ಲ್ಲಿದ್ದ ರಕ್ಕಸರನೆಲ್ಲಾ ಗೆಲಿದಾತನೆ//೧
ದಾರಿ ದೂರವೆಂದು ದಾರಿಯನೆ ನಿರ್ಮಿಸಿದ
ಧೀರ ರಾಮರ ಬಂಟ ಹನುಮಂತ ನೆ ನೋಡಿ-
ಬಾರೆಂದರೆ ಪೋಗಿ ಲಂಕೆಯ ಸುಟ್ಟು ಬೇಗದಲಿ
ಮರನೇರಿಕೊಂಡಾತನೆ//೨//
ಆತನ ಮಾತಿಗೆ ಸೇತುವೆಯ ಕಟ್ಟಿಸಿದ
ಸೀತಾರಾಮರ ಬಂಟ ಹನುಮಂತ ನೆ
ಸೀತಾದೇವಮ್ಮನಿಗೆ ಪ್ರೀತಿಯ ಬಂಟನಾದ
ಮುಖ್ಯಪ್ರಾಣ ಹಯವದನನ ದೂತನೆ//
***
ಮುದ್ದುರಾಮರ ಬಂಟ ಬುದ್ಧಿವುಳ್ಳ ಹನುಮಂತಹದ್ದಾಗಿ ಹಾರಿದನೆ ಆಕಾಶಕೆ
ನಿದ್ರೆಗೈವ ಸಮಯದಲಿ ಎದ್ದು ಬಾರೆಂದರೆ ಅಲಿದ್ದÀ ರಕ್ಕಸರನೆಲ್ಲ ಗೆಲಿದಾತನೆ 1
ದಾರಿ ದೂರವೆಂದು ದಾರಿಯನೆ ನಿರ್ಮಿಸಿದಧೀರ ರಾಮರ ಬಂಟ ಹನುಮಂತನ ನೋಡಿ-ಬಾರೆಂದರೆ ಪೋಗಿ ಲಂಕೆಯ ಸುಟ್ಟು ಬೇಗದಲಿಮರನೇರಿಕೊಂಡಾತನೆ2
ಆತನ ಮಾತಿಗೆ ಸೇತುವೆಯ ಕಟ್ಟಿಸಿದಸೀತಾರಾಮರ ಬಂಟ ಹನುಮಂತನೆಸೀತಾದೇವಮ್ಮನಿಗೆ ಪ್ರೀತಿಯ ಬಂಟನಾದಮುಖ್ಯ ಪ್ರಾಣ ಹಯವದನನ ದೂತನೆ 3
***