Showing posts with label ಜಲಧಿತಕ್ಕದೊ ನಿನ್ನಳಿಯಗೂ ನಿನಗೂ pranesha vittala. Show all posts
Showing posts with label ಜಲಧಿತಕ್ಕದೊ ನಿನ್ನಳಿಯಗೂ ನಿನಗೂ pranesha vittala. Show all posts

Monday, 11 November 2019

ಜಲಧಿತಕ್ಕದೊ ನಿನ್ನಳಿಯಗೂ ನಿನಗೂ ankita pranesha vittala

by ಪ್ರಾಣೇಶದಾಸರು
ಜಲಧಿತಕ್ಕದೊ ನಿನ್ನಳಿಯಗೂ ನಿನಗೂ |ಹಲವು ಬಗೆಯಿಂದಲಿ ಪರೀಕ್ಷಿಯನು ಮಾಡಿದರೆ ಪ

ಮೊದಲೆ ತಿಳದಷ್ಟು ನಿನ್ನ ಮಹತ್ಮಿ ವರ್ಣಿಸುವೆ |ತುದಿಗಂಡು ಬಲ್ಲೆನೇ ಅಧಮ ನಾನೂ ||ಎದುರಿಗಂಬುವದಾಡಿಕೊಂಡ ಬಗೆ ಬ್ಯಾರೆಲ್ಲೀ |ಮುದದಿಂದ ದಯಮಾಡಿ ಕೇಳೊ ರತ್ನಾಕರನೇ 1

ನಿನ್ನಿಂದ ಹುಟ್ಟಿಹುದು ವಿಷವು, ಗುರುವಿನ ಪತ್ನಿ |ಯನ್ನು ಸ್ವೀಕರಿಸಿದನು ನಿನ್ನ ಮಗನೂ ||ಘನ್ನತರ ಮಕರಾದಿಗಳು ನಿನ್ನ ಪರಿವಾರ |ಇನ್ನೆಷ್ಟು ಪೇಳಲಿ ಚರಿತ್ರ ಪಾರಾವಾರ 2

ನಿನ ಒಡಲಿಗೆಷ್ಟಾದರನ್ನ ಸಾಕೆನಿಸದೂ |ದಣಿದು ಬಂದವರಿಗಾಶ್ರಯವು ಕಾಣೇ ||ಉಣಲಿಕ್ಕೆ ಅನ್ನೆಂಬದೆಂಟನೆ ರಸದಂತೆ |ಘನಖ್ಯಾತಿ ದೂರದಲಿ ಬಳಿಗೆ ಬರಲಿಂತಿಹದು 3

ಪ್ರೀತಿಯಂ ಬಂದವರು, ಗ್ರಹಣ ವೈಧೃತಿ ವೇತೀ |ಪಾತದಲಿ ನಿನ ದರುಶನಾಗಬೇಕೂ ||ಭೂತ ಬಡದವರಂತೆ ನಿನ್ನ ಕಲ್ಲುಗಳಿಂದ |ಘಾತಿಸಲಿ ಬೇಕು ನೋಡಲ್ಕೆ ಬಹು ಸೋಜಿಗವು 4

ತುಳಿದದಕೆ ಹಿಗ್ಗಿದಿಯೋ ಬಹುಮಾನಿ ನೀನೆಲವೊ |ಲಲನಿ ಹಡದೇಳು ಶಿಶುಗಳ ಕೊಂದಳೂ ||ಬಲುಭಂಟಹಿರಿಯಮಗಗರಸುತನ ಕೊಡಲಿಲ್ಲ |ಇಳಿಯೊಳಗೆ ನೀ ಮಾಡಿದನ್ನ್ಯಾಯಕೆಣಿಯುಂಟೆ 5

ಸತಿಸಂಗ ಬಿಡಲೊಲ್ಲಿ ಪರ್ವಕಾಲಗಳಲ್ಲಿ |ಸುತಗೆ ಕಡಿಮೆದರಿಂದೆ ಆದಿ ಹ್ಯಾಗೊ ||ಪತಿವ್ರತಾ ಮಗಳಾದಳೊಂದೆ ಸುಗುಣದರಿಂದೆ |ಕ್ಷಿತಿಯೊಳನವರತ ಪೂಜಿಸಿಕೊಂಬಿ ಜನರಿಂದ 6

ಜಾಮಾತನಿಗೆ ಇಹವು ಮುಖವು ಹತ್ತೊಂಬತ್ತು |ಆ ಮಧ್ಯ ಗಜಲಪನದಂತೆ ಒಂದೂ ||ಭೂಮಿಯೊಳಗಾಶ್ಚರ್ಯ ತಾನೆ ಮಕ್ಕಳ ಪಡೆವ |ಈ ಮಗಳು ಬಹುಸುಖವ ಬಡುವಳಿವನಿಂದಲ್ಲಿ 7

ಬೆರಳು ಚೀಪುವನೋಡುಸುಳ್ಳಲ್ಲ ದಾನ |ಪುರುಷ ಬದುಕುವ ಚೋರತನದಿ ಜಾರಾ ||ತರುಣಿಯಾಗಿದ್ದ ನಿನ ಬಳಿಯಲ್ಲಿ ನೀ ಬಲ್ಲಿ |ತುರುಗಾಟವ ಕೊಡಲಿ ಕೊಂಡಡವಿಯೊಳಗಿರುವ 8

ಗುರುಸ್ವಾಮಿ ಪಿತ ಬ್ರಹ್ಮ ವಂಶದ್ರೋಹಿಗಳವನ |ಪರಿವಾರ ಮಕ್ಕಳಿಗೆ ಮಾವನಾದಾ ||ಉರುಗ ಶಯನಂಡಜಾಧಿಪ ವಹನ ನೀಲಾಂಗ |ಅರಿತನೃಪಋಷಿಗಳೊಳಗೊಬ್ಬರಿಗ್ಯು ಮಗನಲ್ಲ 9

ಕುಲಸೂತ್ರವಿಲ್ಲ ಒಂದೇ ರೂಪನಲ್ಲ ನಿ- |ಶ್ಚಲನಲ್ಲ ವತಿ ಕಠಿಣ ವಕ್ರವದನಾ ||ಬಲು ಕೋಪಿ ತಿರದುಂಬ ಸ್ತ್ರೀಯರಿಬ್ಬರ ಕೊಂದ |ಅಲವಜಾರನು, ಬತ್ತಲಿರುವ, ಕಲಹಕೆ ಪ್ರೀಯ 10

ಕೊಟ್ಟೆಲ್ಲ ಅವನಿಗೀ ಕನ್ನಿಕಿಯ ಸವತಿಯರು |ಎಷ್ಟೋ ಮಲಸುತರಿಹರದಕೆ ದಶ ಮಡೀ ||ಸಿಟ್ಟಾಗ ಬ್ಯಾಡವನ ವಾರ್ತಿ ಕೇಳಲು ಜನರು |ಬಿಟ್ಟು ಸಂಸಾರವೆಂದಿಂದಿಗೊಲ್ಲದಿಹರೂ 11

ನಿನ್ನ ಮಗಳವನಿತ್ತವನ ಮಗಳ ಮದಿವ್ಯಾದಿ |ಕನ್ಯ ವಿಕ್ರಯ ಪರಸ್ಪರವೆನಿಸಿತೂ ||ಇನ್ನೇಸೊ ನಿಮ್ಮ ನಿಮ್ಮಲ್ಲಿದ್ದ ನಡತಿಗಳು |ಅನ್ಯರಿದುಕೇಳಿಭಜಿಸರೊ ಶುದ್ಧ ಭಕುತಿಯಲೀ 12

ಏನಾದರೇನು ಶ್ರೀ ಪ್ರಾಣೇಶ ವಿಠಲನಿಗೆ |ನೀನೆಗತಿನಿರ್ದೋಷ ವಸ್ತುವೆಂದೂ ||ಶ್ರೀನಳಿನಭವಮುಖರುನಿತ್ಯವಂದಿಸುತಿಹರೊ |ನೀನವನ ಮಾವನಾದಿನ್ನು ಪೂಜಿತನಲ್ಲೆ 13
*******