Showing posts with label ಎಲ್ಲಿಂದೆಲ್ಯರುಳಿದ್ಯೋ ಎಲೆ ಮನವೆ gurumahipati. Show all posts
Showing posts with label ಎಲ್ಲಿಂದೆಲ್ಯರುಳಿದ್ಯೋ ಎಲೆ ಮನವೆ gurumahipati. Show all posts

Wednesday 1 September 2021

ಎಲ್ಲಿಂದೆಲ್ಯರುಳಿದ್ಯೋ ಎಲೆ ಮನವೆ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಎಲ್ಲಿಂದೆಲ್ಯರುಳಿದ್ಯೋ ಎಲೆ ಮನವೆ ಪ 


ಎಲ್ಲಿಂದೆಲ್ಯುರುಳಿದ್ಯೋ | ಎಲೆ ಮನವೇ | ಬಲ್ಲತನದಲಿಗಿಡ ಕೊನೆಯ ನೇರಿ ಬಿದ್ದಂತೆ 1 

ದುರ್ಲಭ ನರದೇಹದಿ ಬಂದು | ಫುಲ್ಲನಾಭನ ನೆನೆಯದೆ | ಕ್ಷುಲ್ಲಗುಣದಲಿ ನಾನಾ ಹೀನ ಯೋನಿಯ ಮುಖಕ 2 

ಅಗ್ರಜನ್ಮದಲಿ ಬಂದು ಸಂತರಾನುಗ್ರಹವ | ಪಡೆದುಕೊಳ್ಳದೆ | ವ್ಯಗ್ರಬುದ್ಧಿಯಲಿ ಅತಿ ಶೂದ್ರ ನಡುವಳಿವಿಡಿದು 3 

ವರಗಳನು ಪಡಕೊಳ್ಳವೆ | ಶರೀರಾಭಿಮಾನಿ ಗೆಳೆತನ ಕಟ್ಟಿ ವಿಷಯಕ್ಕು 4 

ತಂದೆ ಮಹಿಪತಿ ಸ್ವಾಮಿಯಾ ಮೊರೆ ಹೊಕ್ಕು | ಬಂದ ಸಾರ್ಥಕವ ಮಾಡು | ಇಂದಿನೆಚ್ಚರ ನಾಳೆ ಸಂಧಿಸಿದು ನಿಜದಿಂದ 5

***