ಕಾಖಂಡಕಿ ಶ್ರೀ ಕೃಷ್ಣದಾಸರು
ಎಲ್ಲಿಂದೆಲ್ಯರುಳಿದ್ಯೋ ಎಲೆ ಮನವೆ ಪ
ಎಲ್ಲಿಂದೆಲ್ಯುರುಳಿದ್ಯೋ | ಎಲೆ ಮನವೇ | ಬಲ್ಲತನದಲಿಗಿಡ ಕೊನೆಯ ನೇರಿ ಬಿದ್ದಂತೆ 1
ದುರ್ಲಭ ನರದೇಹದಿ ಬಂದು | ಫುಲ್ಲನಾಭನ ನೆನೆಯದೆ | ಕ್ಷುಲ್ಲಗುಣದಲಿ ನಾನಾ ಹೀನ ಯೋನಿಯ ಮುಖಕ 2
ಅಗ್ರಜನ್ಮದಲಿ ಬಂದು ಸಂತರಾನುಗ್ರಹವ | ಪಡೆದುಕೊಳ್ಳದೆ | ವ್ಯಗ್ರಬುದ್ಧಿಯಲಿ ಅತಿ ಶೂದ್ರ ನಡುವಳಿವಿಡಿದು 3
ವರಗಳನು ಪಡಕೊಳ್ಳವೆ | ಶರೀರಾಭಿಮಾನಿ ಗೆಳೆತನ ಕಟ್ಟಿ ವಿಷಯಕ್ಕು 4
ತಂದೆ ಮಹಿಪತಿ ಸ್ವಾಮಿಯಾ ಮೊರೆ ಹೊಕ್ಕು | ಬಂದ ಸಾರ್ಥಕವ ಮಾಡು | ಇಂದಿನೆಚ್ಚರ ನಾಳೆ ಸಂಧಿಸಿದು ನಿಜದಿಂದ 5
***
No comments:
Post a Comment