ತುರುವು ಕಾಯಲು ಕಳುಹಿದಳು ತನ್ನಬಾಲನ ಗೋಪಿಯು ಮುದ್ದಿಸುತಿಹಳು ಪ
ಕರೆದು ಪಾಲನು ಕುಡಿಸುತಿಹಳು ನಿಂಬುಪರಿಮಳುಪ್ಪಿನಕಾಯ ಬುತ್ತಿ ಕಟ್ಟಿದಳುಸುರಭಿಯ ಮೊಸರು ಬೆಣ್ಣೆಯನು ದೋಸೆಸುರುಳಿ ಹೋಳಿಗೆ ಮಂಡಿಗೆಯ ಕಟ್ಟಿದಳುಸಂಡಿಗೆಯ ಕಟ್ಟಿದಳು 1
ಕರುಗಳೆಲ್ಲ ಕೂಡಿಸಿದಳು ನಿನ್ನಪರಿವಾರದವರು ಬಂದಾರೆ ನೋಡುನೀನು ಬಲರಾಮನು ಜೋಡು ಇಲ್ಲೇಯಮುನಾ ತೀರದಲ್ಲಿ ಆಡೋಹತ್ತಿರದಲ್ಲಿ ಆಡೋ 2
ಕೂಸಿಗೆ ಕುಂಚಿ ಹೊಚ್ಚಿದಳು ಬಿದ್ದಕೇಶಗಳೆಲ್ಲವು ತೀಡುತ್ತಲಿಹಳುಭೂಷಣಂಗಳ ಇಡುತಿಹಳುಇಂದಿರೇಶನ ಕೈಯ್ಯಲ್ಲಿ ಕೋಲು ಕೊಟ್ಟಿಹಳು(ಮುರಲಿ) ಕೊಳಲ ಕೊಟ್ಟಿಹಳು 3
****