Monday, 2 August 2021

ತುರುವು ಕಾಯಲು ಕಳುಹಿದಳು ತನ್ನಬಾಲನ ಗೋಪಿಯು ಮುದ್ದಿಸುತಿಹಳು ankita indiresha

ತುರುವು ಕಾಯಲು ಕಳುಹಿದಳು ತನ್ನಬಾಲನ ಗೋಪಿಯು ಮುದ್ದಿಸುತಿಹಳು ಪ

ಕರೆದು ಪಾಲನು ಕುಡಿಸುತಿಹಳು ನಿಂಬುಪರಿಮಳುಪ್ಪಿನಕಾಯ ಬುತ್ತಿ ಕಟ್ಟಿದಳುಸುರಭಿಯ ಮೊಸರು ಬೆಣ್ಣೆಯನು ದೋಸೆಸುರುಳಿ ಹೋಳಿಗೆ ಮಂಡಿಗೆಯ ಕಟ್ಟಿದಳುಸಂಡಿಗೆಯ ಕಟ್ಟಿದಳು 1

ಕರುಗಳೆಲ್ಲ ಕೂಡಿಸಿದಳು ನಿನ್ನಪರಿವಾರದವರು ಬಂದಾರೆ ನೋಡುನೀನು ಬಲರಾಮನು ಜೋಡು ಇಲ್ಲೇಯಮುನಾ ತೀರದಲ್ಲಿ ಆಡೋಹತ್ತಿರದಲ್ಲಿ ಆಡೋ 2

ಕೂಸಿಗೆ ಕುಂಚಿ ಹೊಚ್ಚಿದಳು ಬಿದ್ದಕೇಶಗಳೆಲ್ಲವು ತೀಡುತ್ತಲಿಹಳುಭೂಷಣಂಗಳ ಇಡುತಿಹಳುಇಂದಿರೇಶನ ಕೈಯ್ಯಲ್ಲಿ ಕೋಲು ಕೊಟ್ಟಿಹಳು(ಮುರಲಿ) ಕೊಳಲ ಕೊಟ್ಟಿಹಳು 3

****


No comments:

Post a Comment