RAO COLLECTIONS SONGS refer remember refresh render DEVARANAMA
..
ನೋಡಿ ಭಕ್ತಿಮಾಡಿ ಪಾಡಿರಿ ರೂಢಿಗೊಡೆಯ ದಾಸರಾ
ಕಾಡುವಾ ದುರಿತಂಗಳ ಓಡಿಸಿ ಸಲುಹುವರಾ ಪ
ನಂಬಿದೆ ಶರಣರ ಹಂಬಲ ನೀಡಲು ಸಂಭ್ರಮದಲಿ | ಇದೆ
ಸ್ತಂಭದಿ ನೆಲೆಸಿಹರಾ 1
ಇವರ ಕವನ ಶ್ರವಣ ಮನನಗಳಿಂದ |
ಲವತೀಶವಾಗದು ಜವನ ಭವನ ಬಂಧು 2
ಶ್ರೀಮಹೀವಲ್ಲಭ ಶಾಮಸುಂದರನ
ಪ್ರೇಮಕೆ ಪಾತ್ರಧರಾಮರ ದಾಸರಾ 3
***