Showing posts with label ಏಕಾದಶಿ ವ್ರತ ಶೋಧಿಸಿ ಸಾಧಿಸಿ ಏಕಭಕುತಿಯಿಂದ vijaya vittala. Show all posts
Showing posts with label ಏಕಾದಶಿ ವ್ರತ ಶೋಧಿಸಿ ಸಾಧಿಸಿ ಏಕಭಕುತಿಯಿಂದ vijaya vittala. Show all posts

Wednesday 16 October 2019

ಏಕಾದಶಿ ವ್ರತ ಶೋಧಿಸಿ ಸಾಧಿಸಿ ಏಕಭಕುತಿಯಿಂದ ankita vijaya vittala

Song on Ekadashi
ಏಕಾದಶಿ ವ್ರತ ಶೋಧಿಸಿ ಸಾಧಿಸಿ ಏಕಭಕುತಿಯಿಂದ
ಮಾಡಿರೊ ಪಾಡಿರೊ |
ಲೋಕದೊಳಗೆ ಇದೆ ಬೀರುತಾ ಸಾರುತಾ ಶ್ರೀಕಾಂತನ ವೊಲಿಸಿ || ಪ ||
ದಶಮಿ ಏಕಾದಶಿ ದ್ವಾದಶಿ ದಿನತ್ರಯ |
ವಸುಧಿಯೊಳಗೆ ಮಹಾವ್ರತವೆಂದು ತಿಳಿದು ತ್ರಿ |
ದಶರೆಲ್ಲ ಕೈ ಕೊಂಡು ಮಾಡಿದರಂದು ರಂ |
ಜಿಸುವ ಸತ್ಕರ್ಮದಲ್ಲಿ |
ಬಿಸಜನಾಭನು ಲಕುಮಿಗೆ ಪೇಳಿದ ವ್ರತ |
ಹಸನಾಗಿ ಬೊಮ್ಮಗೆ ಅರಹು ಮಾಡಲು ದೇವ |
ಋಷಿಗೆ ಅಜನು ಪೇಳಲಾ ಮುನಿ ಬೀರಿದಾ
ದಶ ದಿಕ್ಕಿನೊಳಗೊಂದು || 1 ||

ಉದಯಕಾಲದೆಲೆದ್ದು ಸಂಸಾರಯಾತ್ರೆ ಎಂದು |
ಬದಿಯಲ್ಲಿದ್ದವರೆಲ್ಲ ಹರಿದಾಸ ದಾಸಿಯರು
ಹೃದಯದೊಳೀಪರಿ ಯೋಚಿಸಿ ಅಜ್ಞಾನ ಒಂದು ಕಡೆಗೆ ನೂಕಿ |
ಸದಮಲನಾಗಿ ಸ್ನಾನಾದಿಯ ಮಾಡಿ ಮ
ತ್ತದರ ತರುವಾಯ ದೇವತಾರ್ಚನೆ ಬಲು ವಿಧಿ ತಂತ್ರ ಸಾರದಿ
ಮುಗಿಸಿ ಶ್ರವಣ ಸಾರಾ ಹೃದಯರಿಂದಲಿ ಕೇಳಿ || 2 ||

ಸಂಧ್ಯಾವಂದನೆ ದಿವ್ಯ ಮಂಗಳಾರುತಿ
ಗೋವಿಂದನ ಚರಣಕೆ ಎತ್ತಿ ನಿರ್ಮಲ ಚಿತ್ತ |
ದಿಂದಲಿ ನಲಿವುತ ಹಿಗ್ಗಿ ಹಾರೈಸಿ ಆನಂದ ವಾರಿಧಿಯಲ್ಲಿ |
ಕುಂದದೆ ಸೂಸುತ ಗೆಳೆಯರ ಒಡಗೂಡಿ |
ತಂದು ಪುಷ್ಪಗಳಿಂದ ಮಂಟಪವ ವಿರಚಿಸಿ |
ನಂದನ ಕಂದ ಮುಕುಂದನ ಮಧ್ಯದಿ ಇಂದು ಸ್ಥಾಪಿಸಿ ತುತಿಸಿ || 3 ||

ಜ್ಞಾನಿಗಳೊಡನೆ ಕುಳ್ಳಿದ್ದು ಸುಜ್ಞಾನಿಗಳು ಶುದ್ಧ ಗಾ|
ಯನ ಮಾಡುತ ಹರಿಯ ಮಹಿಮಯನ್ನು
ಆನನ ಕೂಗುತ ಹಾಡುತ ಪಾಡುತ |
ಧ್ಯಾನವ ಗೈವುತಲಿ |
ಮಾನಸ ಪೂಜೆಯೊಳಗೆ ರಚಿಸಿ ಮೇಲೆ
ಕಾಣಬಾರದಂತೆ ಪ್ರಜೆದೊಳಗೆ ತೋರಿ |
ನಾನೆಂಬೊ ಅಹಂಕಾರ ತೊರೆದು
ಮಗುವಿನಂತೆ ಶ್ರೀನಿವಾಸನ ನೆನಸಿ || 4 ||

ತಾಳ ಝಾಗಟೆ ಮದ್ದಳೆ ತಂಬೂರಿ ಸಮ್ಮೇಳದಿಂದಲಿ
ಕೂಡಿ ಸೋಗು ವೈಯಾರದಿ |
ಕಾಲಲಿ ಗೆಜ್ಜೆಯ ಕಟ್ಟಿ |
ವಲಯಾಕಾರ |
ಮೇಲು ಚಪ್ಪಳೆಯಿಂದ |
ಬಾಲವೃದ್ಧರು ನಿಂದು ಕುಣಿಕುಣಿದಾಡಿ ಹಿ |
ಯಾಲಲಿ ಹರಿಯ ಸಂಕೀರ್ತನೆ ಕೀತರ್ಿಸಿ |
ಸೋಲದೆ ಘನಸ್ವರ ಸ್ವರದಿಂದಲಿ ಕೂಗಿ ವಿ |
ಶಾಲ ಭಕುತಿ ಒಲಿಸಿ || 5 ||

ಕಿರಿಬೆವರೊದಕ ಮೊಗದಿಂದಿಳಿಯಲು |
ಉರದಲಿ ಇದ್ದ ದೇವಗೆ ಅಭಿಷೇಚನೆ |
ಪರವಶವಾಗಿ ಮೈಮರೆದು ತಮ್ಮೊಳು ತಾವು |
ಕರದು ತಕರ್ೈಸುತಲಿ |
ಕಿರಿನಗೆಯಿಂದ ತೋಳುಗಳು ಅಲ್ಲಾಡಿಸಿ |
ಎರಡು ಭುಜವ ಚಪ್ಪರಿಸಿ ಏಕಾದಶಿ |
ದುರಿತ ರಾಸಿಗೆ ಪಾವಕನೆಂದು ಕೂಗಿ ಬೊಬ್ಬಿರಿದು ಬಿರಿದು ಸಾರಿ || 6 ||

ಮಧ್ಯ ಮಧ್ಯದಲಿ ಮಂಗಳಾರುತಿ ಎತ್ತಿ |
ಸದ್ವೈಷ್ಣವರುಗಳು ಹರಿ ಪರದೇವ
ಮಧ್ವರಾಯರೆ ಮೂರು ಲೋಕಕೆ ಗುರುಗಳು |
ಸಿದ್ಧಾಂತ ಮುನಿ ಸಮ್ಮತಾ |
ಈ ಧರೆಯೊಳಗಿದನೆ ಮಾಡದ ನರ ಮದ್ಯ ಮಾಂಸ
ಮಲ ಮೂತ್ರವನು ಕ್ರಿಮಿವ ಮನವು |
ಮೆದ್ದಾ ಸದ್ದೋಷಿ ಚಂಡಾಲ ವೀರ್ಯಕ್ಕೆ ಬಿದ್ದವ ನಿಜವೆನ್ನಿ || 7 ||

ಸಾಗರ ಮೊದಲಾದ ತೀರ್ಥಯಾತ್ರೆಯ ಫಲ |
ಭೂಗೋಳದೊಳಗುಳ್ಳ ದಾನ ಧರ್ಮದ ಫಲ |
ಆಗಮ ವೇದಾರ್ಥ ಓದಿ ಒಲಿಸಿದ ಫಲ |
ಯೋಗ ಮಾರ್ಗದ ಫಲವೊ |
ಭಾಗವತರ ಸಂಗಡ ಚತುರ್ದಶ ಝಾವ ಜಾಗರ
ಮಾಡಿದ ಮನುಜನ ಚರಣಕ್ಕೆ
ಬಾಗಿದವಗೆ ಇಂಥ ಫಲಪ್ರಾಪ್ತಿ ನಿರ್ದೋಷನಾಗುವ ವೈರಾಗ್ಯದಿ || 8 ||

ನಿತ್ಯಾ ನೈಮಿತ್ಯಕ ಮಾಡು ಮಾಡದಲಿರು |
ತತ್ವ ವಿಚಾರದಿ ಸುಖಿಸಿ ದ್ವಾದಶಿ ದಿನ ಹೊತ್ತು
ಪೋಗಾಡದೆ ಸದಾಚಾರ
ಸ್ಮೃತಿಯಂತೆ ಅತ್ಯಂತ ಪಂಡಿತ ಪಾವನ್ನ |
ಉತ್ತಮರೊಡಗೂಡಿ ಮೃಷ್ಟಾನ್ನ ಭುಂಜಿಸಿ |
ಮೃತ್ಯು ಜೈಸಿ ಸದ್ಗತಿಗೆ ಸತ್ಪಥಮಾಡು |
ಸತ್ಯ ಮೂರುತಿ ನಮ್ಮ ವಿಜಯವಿಠ್ಠಲರೇಯ |
ನಿತ್ಯ ಬಿಡದೆ ಕಾವಾ || 9 ||
***

Ekadasi vrata sodhisi sadhisi ekabakutiyinda
Madiro padiro |
Lokadolage ide biruta saruta srikamtana volisi || pa ||

Dasami ekadasi dvadasi dinatraya |
Vasudhiyolage mahavratavendu tilidu tri |
Dasarella kai kondu madidarandu ran |
Jisuva satkarmadalli |
Bisajanabanu lakumige pelida vrata |
Hasanagi bommage arahu madalu deva |
Rushige ajanu pelala muni birida
Dasa dikkinolagondu || 1 ||

Udayakaladeleddu samsarayatre endu |
Badiyalliddavarella haridasa dasiyaru
Hrudayadolipari yocisi aj~jana omdu kadege nuki |
Sadamalanagi snanadiya madi ma
Ttadara taruvaya devatarcane balu vidhi tanra saradi
Mugisi sravana sara hrudayarindali keli || 2 ||

Sandhyavandane divya mangalaruti
Govindana charanake etti nirmala chitta |
Dimdali nalivuta higgi haraisi Ananda varidhiyalli |
Kundade susuta geleyara odagudi |
Tandu pushpagalinda mantapava virachisi |
Nandana kanda mukundana madhyadi indu sthapisi tutisi || 3 ||

J~janigalodane kulliddu suj~janigalu Suddha ga|
Yana maduta hariya mahimayannu
Anana kuguta haduta paduta |
Dhyanava gaivutali |
Manasa pujeyolage rachisi mele
Kanabaradante prajedolage tori |
Nanembo ahankara toredu
Maguvinante srinivasana nenasi || 4 ||

Tala jagate maddale tamburi sammeladindali
Kudi sogu vaiyaradi |
Kalali gejjeya katti |
Valayakara |
Melu chappaaleyinda |
Balavruddharu nindu kunikunidadi hi |
Yalali hariya samnkirtane kitarsi |
Solade Ganasvara svaradindali kugi vi |
Sala Bakuti olisi || 5 ||

Kiribevarodaka mogadindiliyalu |
Uradali idda devage abishecane |
Paravasavagi maimaredu tammolu tavu |
Karadu takar;sutali |
Kirinageyinda tolugalu alladisi |
Eradu Bujava chapparisi ekadasi |
Durita rasige pavakanendu kugi bobbiridu biridu sari || 6 ||

Madhya madhyadali mangalaruti etti |
Sadvaishnavarugalu hari paradeva
Madhvarayare muru lokake gurugalu |
Siddhanta muni sammata |
I dhareyolagidane madada nara madya mamsa
Mala mutravanu krimiva manavu |
Medda saddoshi chandala viryakke biddava nijavenni || 7 ||

Sagara modalada tirthayatreya Pala |
Bugoladolagulla dana dharmada Pala |
Agama vedartha Odi olisida Pala |
Yoga margada Palavo |
Bagavatara sangada chaturdasa java jagara
Madida manujana charanakke
Bagidavage intha palaprapti nirdoshanaguva vairagyadi || 8 ||

Nitya naimityaka madu madadaliru |
Tatva vicharadi sukisi dvadasi dina hottu
Pogadade sadachara
Smrutiyante atyanta pandita pavanna |
Uttamarodagudi mrushtanna Bunjisi |
Mrutyu jaisi sadgatige satpathamadu |
Satya muruti namma vijayaviththalareya |
Nitya bidade kava || 9 ||
***