Showing posts with label ಏನು ಬಂದ್ಯೋ ಜೀವವೆ ಶರೀರದೊಳು ವ್ಯರ್ಥವಾಗಿ hayavadana ENU BANDYO JEEVAVE SHAREERADOLU VYARTHAVAAGI. Show all posts
Showing posts with label ಏನು ಬಂದ್ಯೋ ಜೀವವೆ ಶರೀರದೊಳು ವ್ಯರ್ಥವಾಗಿ hayavadana ENU BANDYO JEEVAVE SHAREERADOLU VYARTHAVAAGI. Show all posts

Saturday, 11 December 2021

ಏನು ಬಂದ್ಯೋ ಜೀವವೆ ಶರೀರದೊಳು ವ್ಯರ್ಥವಾಗಿ ankita hayavadana ENU BANDYO JEEVAVE SHAREERADOLU VYARTHAVAAGI

ಏನು ಬಂದ್ಯೋ ಜೀವವೆ ಶರೀರದೊಳು ವ್ಯರ್ಥವಾಗಿ ಪ.

ದಾನಧರ್ಮ ಮಾಡಲಿಲ್ಲ ದಯಬುದ್ಧಿ ಪುಟ್ಟಲಿಲ್ಲಜ್ಞÁನವರಿತು ಹರಿಪೂಜೆ ಮಾಡಲಿಲ್ಲಜ್ಞಾನಿ ಸುಜ್ಞಾನಿಗಳಸನ್ನಿಧಿಯಲ್ಲಿರಲಿಲ್ಲ ನಿರ್ಮಲಮನದಲಿ ಒಂದುದಿನವಿರಲಿಲ್ಲ 1

ಸತಿ ಪುರುಷರು ನಾವು ಸಂತೋಷದಿಂದಿರಲಿಲ್ಲಯತಿಯಾಗಿ ತೀರ್ಥಯಾತ್ರೆ ಮಾಡಲಿಲ್ಲಶ್ರುತಿಶಾಸ್ತ್ರ ಪುರಾಣಗಳ ಕಿವಿಗೊಟ್ಟು ಕೇಳಲಿಲ್ಲಮೃತವಾಗೋಕಾಲ ಬಂತು ಬರಿದೆ ಮುಪ್ಪಾದೆನಲ್ಲ 2

ಉಂಡು ಸುಖಿ ಅಲ್ಲ ಉಟ್ಟು ತೊಟ್ಟು ಪರಿಣಾಮ ಇಲ್ಲಕೊಂಡು ಕೊಟ್ಟು ಹರಿಸೇವೆ ಮಾಡಲಿಲ್ಲದುಂಡು ನಾಯಿಯಂತೆ ಮನೆಮನೆಗಳ ತಿರುಗಿ ಕೆಟ್ಟೆಮೊಂಡಜೋಗಿಗುಣಂಗಳ ಬಿಡಿಸೊ ಹಯವದನ 3

***