Showing posts with label ಆರೇನ ಮಾಡುವರು ಆರಿಂದಲೇನಹುದು purandara vittala AARENA MAADUVARU AARINDALENAHUDU. Show all posts
Showing posts with label ಆರೇನ ಮಾಡುವರು ಆರಿಂದಲೇನಹುದು purandara vittala AARENA MAADUVARU AARINDALENAHUDU. Show all posts

Monday, 6 September 2021

ಆರೇನ ಮಾಡುವರು ಆರಿಂದಲೇನಹುದು purandara vittala AARENA MAADUVARU AARINDALENAHUDU

(charana lyrics too differ)



ರಾಗ ಮುಖಾರಿ. ಝಂಪೆ ತಾಳ (raga, taala may differ in audio)
 
ಆರೇನು ಮಾಡುವರು ಆರಿಂದಲೇನಹುದು
ಪೂರ್ವ ಜನ್ಮದ ಕರ್ಮ ವಿಧಿ ಬೆನ್ನ ಬಿಡಿದು ||ಪ||

ಐದು ವರ್ಷದ ಹಸುಳೆ ವನವೆತ್ತ ತಪವೆತ್ತ
ಬೈದು ಮಲತಾಯಿಯಡವಿಗೆ ನೂಕಲು
ಸುಯ್ದು ಕೋಪಾಗ್ನಿಯಲಿ ಪುರ ಹೊರಟು ಪೋಪಾಗ
ಐದೆ ಪಿತರುಗಳಿದ್ದು ಏನು ಮಾಡಿದರು ||

ಪಾಪಿ ದುಶ್ಯಾಸನ ದ್ರೌಪದಿಯ ಸೀರೆಯ ಸೆಳೆದು
ಕೋಪದಿಂ ಮಾನಭಂಗವ ಮಾಡಲು
ಶ್ರೀಪತಿಯೆ ಕಾಯೆಂದು ಮೊರೆಯಿಡುವ ಸಮಯದಲಿ
ಭೂಪರೈವರು ಇದ್ದು ಏನು ಮಾಡಿದರು ||

ರಣದೊಳಗೆ ಅಭಿಮನ್ಯು ಚಕ್ರವ್ಯೂಹವ ಪೊಕ್ಕು
ಸೆಣಸಿ ಷಡುರಥರೊಡನೆ ಹೊಯ್ದಾಡಲು
ಅಣಕವಿಲ್ಲದೆ ಕಾದುತಸುವಳಿದು ಪೋಪಾಗ
ತ್ರಿಣಯಸಖಪಾರ್ಥರಿದ್ದೇನು ಮಾಡಿದರು ||

ನೃಪರೊಳಗೆ ಅತಿ ಶ್ರೇಷ್ಠ ಬಲವಂತ ಸಿರಿರಾಮ
ಅಪರಿಮಿತ ಶೌರಿ ಲಕ್ಷ್ಮಣ ದೇವರು
ಚಪಲಾಕ್ಷಿ ಸೀತೆಯೆನು ಖಳನು ಕದ್ದೊಯ್ವಾಗ
ನಿಪುಣರಿವರಿದ್ದು ಇನ್ನೇನು ಮಾಡಿದರು ||

ಬ್ರಹ್ಮಶಿರ ಶಿವನ ಕರವನು ಕಚ್ಚಿ ಕಾಡುತಿರೆ
ಸುಮ್ಮನೆ ಜಗವೆಲ್ಲ ತಿರುಗುತಿರಲು
ಬೊಮ್ಮ ಮೂರುತಿ ನಮ್ಮ ಪುರಂದರ ವಿಠಲನೆ
ನಿಮ್ಮ ಆಜ್ಞೆಯ ಮೀರಿ ಬದುಕಿ ಬಾಳುವರೆ ||
***

pallavi

Arindu (ArEna) mADuvaru ArindalEnahudu pUrva janmada karma vidhi benna biDidu

caraNam 1

aidu varSada hasuLe vanavetta tapavetta baidu malatAyiyaDavige nUkalu
suidu kOpAgniyalipura horaTu pOvAga aide pitarugaLiddu Enu mADidaru

caraNam 2

pApi dushyAsana draupadiya sIreya senedu gOpadim mAnabhangava mADalu
shrIpatiye kAyendu moreyiDuva samayadali bhUparaivu iddu Enu mADidaru

caraNam 3

raNadoLage abhimanyu cakra vyUha pokku seNasi SaDuratharoDane hoidADalu
aNakavillade kAdutasuvanidu pOvAga trNayasakhapArttariddEnu mADidaru

caraNam 4

nrparoLage ati shrESTa balavanta sirirAma aparimita shauri lakSmaNa dEvaru
capalAkSi sIteyenu gaLanu kaddoivAga nipuNarivariddu innEnu mADidaru

caraNam 5

brahmashira shivana karavanu kacci kADutire summane jagavella tirugutiralu
bomma mUruti namma purandara viTTalane nimma AgjneyamIri bALuvare
***

ಆರೇನ ಮಾಡುವರು ಆರಿಂದಲೇ
ನಹುದುಪೂರ್ವಜನ್ಮದ ಕರ್ಮವಿಧಿ ಬೆನ್ನಬಿಡದು ಪ

ಐದು ವರುಷದತರಳ ತಾನೆತ್ತ ತಪವೆತ್ತ |
ಬೈದು ಮಲತಾಯಿ ಅಡವಿಗೆ ನೂಕಲು ||
ಸುಯ್ದು ಕೋಪಾಗ್ನಿಯಲಿ ಪೊರಮಟ್ಟು ಪೋಪಾಗ |
ಐದೆ ಬಂಧುಗಳಿದ್ದು ಏನ ಮಾಡಿದರು1

ನೃಪರೊಳಗೆಅತಿ ಶ್ರೇಷ್ಠ ಬಲವಂತ ರಘುರಾಮ |
ಅಪರಿಮಿತ ಶೂರ ಲಕ್ಷ್ಮಣದೇವರು |
ಚಪಲಾಕ್ಷಿ ಸೀತೆಯನು ಖಳನು ಕದ್ದೊಯ್ವಾಗ |
ವಿಪರೀತ ವೀರರಿದ್ದೇನ ಮಾಡಿದರು ? 2

ಪಾಪಿ ದುಶ್ಯಾಸ ದ್ರೌಪದಿಯ ಸೀರೆಯ ಸೆಳೆದು |
ಕೋಪದಿಂ ಮಾನಭಂಗವ ಮಾಡಲು ||
ಆಪತ್ತು ಬೆನ್ನಟ್ಟಿ ಹಾ ಕೃಷ್ಣ | - ಎನುವಾಗ |
ಭೂಪತಿಗಳೈವರಿದ್ದೇನ ಮಾಡಿದರು ? 3

ರಣದೊಳಗೆ ಅಭಿಮನ್ಯು ಚಕ್ರವ್ಯೂಹವ ಪೊಕ್ಕು |
ಸೆಣಸಿ ಷಡುರಥದೊಡನೆ ಹೊಯ್ದಾಡಲು ||
ಅಣಕವಿಲ್ಲದೆ ಕಾದಿ ಅಸುವಳಿದು ಪೋಪಾಗ |
ತ್ರಿಣಯಸಖಿ ಪಾರ್ಥರಿದ್ದೇನ ಮಾಡಿದರು 4

ಬ್ರಹ್ಮಶಿರ ಕರಕಟ್ಟಿ ಶಿವನ ಪೀಡಿಸುತಿರಲು |
ಸುಮ್ಮನೇ ಜಗವನೆಲ್ಲವ ತಿರುಗಿದ ||
ಬೊಮ್ಮಮೂರುತಿಯಾದ ಪುರಂದರವಿಠಲನೇ
ನಮ್ಮಅಳವಲ್ಲ ವಿಧಿಮೀರಿ ಬಾಳುವರೆ5
********