ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯಿ ಕಾಯಯ್ಯಾ | ಅನಾಥ ಬಂಧೋ ಪ
ಶರಣರ ದುರಿತಪಹರಣ ಸುಪಾವನ | ಚರಣನೆ ಕೌಸ್ತುಭಾಭರಣ ಹೇಮಾಂಬರಾ | ತರಣಿ ಶತ | ಕಿರಣ ವಿರಾಜಿತ ಕರುಣಾ ಸಿಂಧೋ 1
ವಾರಣಭಯ ನಿವಾರಣ ಸುರಜನ | ತಾರಣ ದೈತ್ಯ ವಿದಾರಣ ಸೃಷ್ಟಿಯೆ | ಕಾರಣ ಚಿತ್ಸುಖ ಪೂರಣ ಮುನಿಜನ | ಪ್ರೇರಣ ಫಣಿಮದ ಹಾರಣ ಧೀರಾ2
ಚಕೋರ ಸು | ಚಂದಿರ ಸ್ಮರಚಿತ ಸುಂದರ ಸದ್ಗುಣ | ಮಂದಿರ ವಿಧಿಹರ ವಂದ್ಯ ಮುಕಂದನೇ | ತಂದೆ ಮಹಿಪತಿ ನಂದನ ಪ್ರಾಣಾ 3
***