Showing posts with label ದಮ್ಮಯ್ಯ ಸೆರಗ ಬಿಡೊ ಶ್ರೀಕೃಷ್ಣಯ್ಯ govinda. Show all posts
Showing posts with label ದಮ್ಮಯ್ಯ ಸೆರಗ ಬಿಡೊ ಶ್ರೀಕೃಷ್ಣಯ್ಯ govinda. Show all posts

Tuesday, 12 November 2019

ದಮ್ಮಯ್ಯ ಸೆರಗ ಬಿಡೊ ಶ್ರೀಕೃಷ್ಣಯ್ಯ ankita govinda

by ಗೋವಿಂದದಾಸ
ದಮ್ಮಯ್ಯ ಸೆರಗ ಬಿಡೊ | ಶ್ರೀಕೃಷ್ಣಯ್ಯ | ಕರಮುಗಿವೆ |ಸಮ್ಮತವಲ್ಲಿದು ನಿನಗೆ | ನಿನ್ನಮ್ಮನೊಳ್ ಪೇಳುವೆ ಹೀಗೆ ||ಧರ್ಮವೆ ಪತಿವ್ರತ ಕರ್ಮಕೆ ಎನ್ನಯ |ಅಮ್ಮನು ಕೇಳಿದರ್ ಸುಮ್ಮನೆ ಇರುವಳೆ 1

ಸುಮನಸರು | ತೋಷಿಪರೆ |ನಿನ್ನ ರಮಣಿಯು ತಾನ್ ಕೋಪಿಸಳೇ ||ಸಮವೆಂದೂ ಪೇಳುವನೇ | ಎನ್ನ ರಮಣನಿದ ತಾಳುವನೇ |ಭ್ರಮಿತ ಕೋಪದಿ ಎನ್ನ | ಯಮನೆಡೆಗಟ್ಟನೇ |ಸಮಯವಲ್ಲಿದು ಕೇಳ್ | ಕಮಲದಳಾಕ್ಷನೆ 2

ಇಂದೆನ್ನ ಕುಲವೆರಡೂ |ತಾವ್ ಹೊಂದದೆ ದುರ್ಗತಿ ಜರದೂ |ನಿಂದೆಗೆ ನಾ ಗುರಿಯಾಗಿ |ಯಮಬಂಧಕೇ ಸಿಲುಕೆನೆ ಪೋಗಿ |ಇಂದೆನ್ನಯ ವ್ರತ ಕುಂದದ ತೆರದಲೀಚಂದದಿ ಪೊgÉ UÉೂೀವಿಂದದಾಸನ ಪ್ರಿಯಾ3
*********