Showing posts with label ಪಾವನೀ ಆವಹಿ ಮಾಂ gurujagannatha vittala. Show all posts
Showing posts with label ಪಾವನೀ ಆವಹಿ ಮಾಂ gurujagannatha vittala. Show all posts

Wednesday 1 September 2021

ಪಾವನೀ ಆವಹಿ ಮಾಂ ankita gurujagannatha vittala

 ..

ಪಾವನೀ ಆವಹಿ ಮಾಂ ಪ


ಪಾವನಿ ಪಾತಕಾರಣ್ಯ ಮಹಾ

ಪಾವಕÀ ನೀನಾದ್ಯೊ ಘನ್ನ ಆಹಾ

ಆವಕಾಲದಲ್ಲಿ ಭಾವಜಜನಕನ

ಸೇವೆಯೊಳಿರುವಂಥ ಭಾವ ಪಾಲಿಸೊ ದೇವ ಅ.ಪ


ಪ್ರಾಣಾದಿ ಪಂಚರೂಪಕನೆ ಸುರ

ಗಣ ಕರಾರ್ಚಿತ ಪಾದಯುಗನೆ ಗುಣ

ಗಣನಿಧಿ ಬಾರತೀಧವನೇ ಜಗ

ತ್ರಾಣ ಕಾರಣನೆ ಮಾರುತನೇ ಆಹಾ

ಕ್ಷೋಣಿಧರಕೃತ ಬಾಣ ವಂದಿತ ಚಾರು ಚ

ರಣ ವಂದಿಪೆ ಜಗತ್ಕಾರಣಕರ್ತನೇ 1


ಖದ್ಯೋತ ಶತ ನಿಭ ಚರಣಾ ಅನಾದ್ಯ

ವಿದ್ಯಾ ತಮೋ ಹರಣ ಸದ್ಯ

ವಿದ್ಯೋತ ವೇದಾಂತಾಭರಣಾ ಅನ

ವಧ್ಯ ಸ್ವಭಕ್ತಾಂತಃ ಕರಣಾ ಆಹಾ

ವಿದ್ಯಾರಮಣ ನೀನೆ ಸದ್ಯೋಜಾತಗೆ ಸು

ವಿದ್ಯಾ ಪೇಳಿದ್ಯೋ ಪ್ರದ್ಯುಮ್ನನ ತೋರಿಸೋ 2


ಶ್ರೀನಾಥನಿಗೆ ಪ್ರತೀಕಾ ಬಾಲ

ಭಾನುಕೋಟಿ ಪ್ರಕಾಶಾ ಏನು

ಕರುಣಾಳೊ ಭಕ್ತಾಭಿsಲಾಷಾ ಅನು

ಸಾರದಿ ಪೂರ್ತಿಪ ಈಶಾ ಆಹಾ

ಹನುಮದಾದಿರೂಪ ಘನವಾಗಿ ಧರಿಸಿ ನೀ

ವನಧಿ ಲಂಘಿಸಿ ಹರಿ ವನಿತೆಯ ತಂದಿತೆÀ್ತ 3


ಸೂತ್ರನಾಮಕ ಶುಭಗಾತ್ರಾ ಚಿತ್ರ

ಚಂiÀರ್i ಪಿತಾಮಹಪುತ್ರಾ ಗೋತ್ರ

ಧರಮುಖ ದ್ಯು ಸ್ವಕÀಲತ್ರಾ ಮಿತ್ರ

ತಾಡನ ಹರ್ತ ಅರ್ಥಗಾತ್ರಾ ಆಹಾ

ಸುತ್ರಾಮ ಮುಖ ತ್ರಿನೇತ್ರಾಂತ ಸುರಕೃತ

ಸ್ತೋತ್ರ ಪದಾಂಬುಜ ಮದಂತ್ರದಿ ನಿಲಿಸಯ್ಯಾ 4

ಘೋಟ ಖೇಟ ಕಂಠೀರವ ವದನಾ ಭವ

ಕಾಟ ತಪ್ಪಿಸಿ ಪೊರಿ ಎನ್ನಾ ಕಿಟ ಮ

ರ್ಕಟ ರೂಪನೆ ನಿನ್ನಾ ಭಕ್ತ

ಕೋಟಿಯೊಳಗೆ ಸೇರಿಸೆನ್ನಾ ಆಹಾ

ದಿಟ್ಟ ಮಹಿಮ ಗುರು ಜಗನ್ನಾಥ ವಿಠಲನ್ನ

ಮುಟ್ಟ ಭಜಿಪ ದಿವ್ಯ ದÀೃಷ್ಟಿಯ ಪಾಲಿಸೋ 5

***