Showing posts with label ಸಾಕು ಮಾಡಿರವ್ವ ರಂಗನ purandara vittala. Show all posts
Showing posts with label ಸಾಕು ಮಾಡಿರವ್ವ ರಂಗನ purandara vittala. Show all posts

Friday, 6 December 2019

ಸಾಕು ಮಾಡಿರವ್ವ ರಂಗನ purandara vittala

ಪುರಂದರದಾಸರು
ಸಾಕು ಮಾಡಿರವ್ವ ರಂಗನ | ಏಕೆ ದೂರುವಿರೆ? ಪ

ಬೆಟ್ಟು ಬಾಯೊಳಗಿಟ್ಟರೆ ರಂಗ - ಕಚ್ಚಲರಿಯನೆ |ಕಟ್ಟಿರುವೆಯನು ಕಂಡರೆ ಬವ್ವೆಂದು - ಚಿಟ್ಟನೆ ಚೀರುವನೆ ||ರಟ್ಟೆಯ ಹಿಡಿದು ನಡಸಲು ರಂಗ -ದಟ್ಟಡಿಇಕ್ಕುವನೆ |ಭ್ರಷ್ಟ ಮಾತುಗಳನೆಷ್ಟೋ ಕಲ್ಪಿಸಿ |ಪಟ್ಟ ಪಟ್ಟಿಗೆ ರಟ್ಟು ಮಾಡುವುದು 1

ಅರಿಯದಂತೆ ನೊರೆಹಾಲನು ಕುಡಿವನೆ -ಕರೆಕರೆಮಾಡುವನೆ |ಇರಲು ಮನೆಯೊಳಗೆ ಬರುತ ನಿಮ್ಮ ಮನೆ - ಮೊಸರನು ಸುರಿಯವನೆ ||ಸರಸಿಜಾಕ್ಷಿಯರೆ ಪರಿಪರಿಯಿಂದಲಿ |ಹರಲಿ ಮಾಡುವುದಿದು ತರವೇನಮ್ಮ 2

ಚಿಕ್ಕ ಚಿಕ್ಕ ಗೋವಕ್ಕಳ ಕೂಡ ಚೆಂಡನಾಡುವಾಗ |ಸಿಕ್ಕಿತೆನುತ ಬಹು ಚಕ್ಕಂದಾಡುತ |ಗಕ್ಕನೆ ಹೋಗಿ ಕೈಯಿಕ್ಕಿ ತೆಗೆದನೆ 3

ಮಾಲೆಗಂಬದೋಪಾದಿಯಲಿ ನೀವು ಬಹಳ ಬೆಳೆದಿರೀಗ |ನೀಲಕುಂತಳೆಯೆ ದಧಿಶೋಧಿಸಿ ಓಲಾಡುತ ಕಡೆವಾಗ ||ಬಾಲಕೃಷ್ಣನಿಗೆ ಜೋಲುವ ಕುಚಗಳು |ನಿಲುಕುವ ಬಗೆ ಹೇಗೆ? ||ಖೂಳಸೆಟವಿಯರು ಕಾಳವಾಗಿಹರು |ಕೇಳಿಕೇಳಿ ಬೇಸತ್ತಿಹೆನಮ್ಮ 4

ಫುಲ್ಲನಾಭನಿವ ಒಲ್ಲದನಾದರೆ ಎಲ್ಲ ಒಯ್ದಿಡಬೇಕೆ? |ಖುಲ್ಲತನದಿ ನೀವ್ ನಿಲ್ಲಗೊಡದಿಹಿರಿ ಗುಲ್ಲುತನವು ಸಾಕೆ ||-ಸಲ್ಲದು ಈ ನುಡಿ ಪುರಂದರವಿಠಲಗೆ |ಹಲ್ಲೊಳಗಾತನ ಇಟ್ಟಿರಬೇಡಿ 5
**********