Showing posts with label ನೋಡಿದೆ ನಾ ಧನ್ಯನಿಂದಿಗೆ ನೋಡಿದೆ ಗುರು ಮಾಧವ pranesha vittala madhava teertha stutih. Show all posts
Showing posts with label ನೋಡಿದೆ ನಾ ಧನ್ಯನಿಂದಿಗೆ ನೋಡಿದೆ ಗುರು ಮಾಧವ pranesha vittala madhava teertha stutih. Show all posts

Saturday, 1 May 2021

ನೋಡಿದೆ ನಾ ಧನ್ಯನಿಂದಿಗೆ ನೋಡಿದೆ ಗುರು ಮಾಧವ ankita pranesha vittala madhava teertha stutih

 ಶ್ರೀ ಮರುದಂಶ ಪ್ರಾಣೇಶದಾಸರು...

ರಾಗ : ಸೌರಾಷ್ಟ್ರ ತಾಳ : ಏಕ


ನೋಡಿದೆ ನಾ ಧನ್ಯನಿಂದಿಗೆ ।

ನೋಡಿದೆ ಗುರು ಮಾಧವತೀರ್ಥರ ವೃಂದಾವನವನು ।। ಪಲ್ಲವಿ ।।


ಗಂಗೆಗೇನು ಪ್ರಯೋಜನ ವಿಳೆಯೊಳಗೆ ಬಾಹದಕೆ ।

ಪಿಂಗಳಗೇನು ಜ್ಞಾನಿಗಳಗೇನು ।

ತುಂಗ ಮಹಿಮೆಯಿಂದ ಅಜ್ಞ ಜನರ ಪಾಪ ।

ಹಿಂಗಿಸಬೇಕೆಂಬುದಲ್ಲದೇ - ಮನವೇ ।। ಚರಣ ।।


ನರಹರಿ ಗುರು ಸುತ ವರದ ಅಕ್ಷೋಭ್ಯಮುನಿ ।

ಕರ ಪೂಜಿತಾರವಿಂದನಾಭರಲ್ಲಿ ।

" ಧರಾಧರಜ " ತೀರದಿ ಸತ್ಯ ಮುನಿಗಳಿಂದ ।

ನಿರುತಾರಾಧನೆ ಕೊಳುತಿರ್ಪರು - ಮನವೇ ।। ಚರಣ ।।

****


ಏನು ಇವರ ಬಣ್ಣಿಸಲು ಎನ್ನಿಂದೊಶವಲ್ಲ ।

ಆನತ ಜನರಿಗೆ ಕರುಣಿಸಿ ।

ಪ್ರಾಣೇಶವಿಠ್ಠಲನ ಧಾಮ ತೋರಿಸುವರು ।

ಕೇಸರಿಯ ನೊಲಿಸಿದ ಯತೀಶರಿವರೆಂದು ।। ಚರಣ ।।

***


nODide nA dhanyanindige |

nODide guru mAdhavatIrthara vRundAvanavanu || pa ||


gangegEnu prayOjana viLeyoLage bAhadake |

pingaLagEnu j~jAnigaLagEnu |

tunga mahimeynda aj~ja janara pApa |

hingisabEkeMbudalladE – manavE || 1 ||


narahari guru suta varada akShOByamuni |

kara pUjitAravindanABaralli |

” dharAdharaja ” tIradi satya munigaLinda |

nirutArAdhane koLutirparu – manavE || 2 ||


Enu ivara baNNisalu ennindoSavalla |

Anata janarige karuNisi |

prANESaviThThalana dhAma tOrisuvaru |

kEsariya nolisida yatISarivarendu || 3 ||

***