Showing posts with label ಗುರು ಮುಖ್ಯ ಪ್ರಾಣನ ಮಾನವರೆಲ್ಲ ಭಜಿಸಿರೋ neleyadikeshava. Show all posts
Showing posts with label ಗುರು ಮುಖ್ಯ ಪ್ರಾಣನ ಮಾನವರೆಲ್ಲ ಭಜಿಸಿರೋ neleyadikeshava. Show all posts

Tuesday, 28 September 2021

ಗುರು ಮುಖ್ಯ ಪ್ರಾಣನ ಮಾನವರೆಲ್ಲ ಭಜಿಸಿರೋ ankita neleyadikeshava

 ಗುರು ಮುಖ್ಯ ಪ್ರಾಣನ ಮಾನವರೆಲ್ಲ ಭಜಿಸಿರೋ ll ಪ ll


ಪರಮ ಪದವೀಯುವ ಗುರು ಮುಖ್ಯ ಪ್ರಾಣನ

ಧರೆಯೊಳಗುಳ್ಳ ಮಾನವರೆಲ್ಲ ಭಜಿಸಿರೋ ll ಅ ಪ ll


ಅಂದು ತ್ರೇತೆಯಲಿ ಹನುಮನಾಗಿ ಅವತರಿಸಿ

ಬಂದು ದಾಶರಥಿಯ ಪಾದಕೆರಗಿ

ಸಿಂಧುವನೆ ದಾಟಿ ಮುದ್ರಿಕೆಯಿತ್ತು ದಾನವರ

ವೃಂದ ಪಾರ ದಹಿಸಿ ಚೂಡಾಮಣಿಯ ತಂದವನ ll 1 ll


ದ್ವಾಪರಯುಗದಿ ಭೀಮಸೇನನೆನಿಸಿ

ಶ್ರೀಪತಿಯ ಪಾದ ಕಡು ಭಜಕನಾಗಿ

ಕೋಪಾವೇಶದಿ ದುಃಶಾಸನನು ಸೀಳಿ

ಭೂಪರ ಬಲದೊಳಗೆ ಜರೆಜರೆದು ಕರೆದವನ ll 2 ll


ಕಲಿಯುಗದಲಿ ತುರೀಯಾಶ್ರಮವನೆ ಧರಿಸಿ

ಕಲುಷದ ಮಾಯಿಗಳನು ಸೋಲಿಸಿ

ಖಿಲವಾದ ಮಧ್ವಮತವನೆ ನಿಲಿಸಿ ಕಾಗಿ-

ನೆಲೆಯಾದಿಕೇಶವ ಪರದೈವನೆಂದೆನಿಸುವನ ll - ಶ್ರೀಕನಕದಾಸರು

***