Showing posts with label ಗುರುನಿಮ್ಮ ದಯವೆನಗಾನಂದೋದಯ ಸರಿಸೌಖ್ಯಕರನೀವ mahipati. Show all posts
Showing posts with label ಗುರುನಿಮ್ಮ ದಯವೆನಗಾನಂದೋದಯ ಸರಿಸೌಖ್ಯಕರನೀವ mahipati. Show all posts

Wednesday, 1 September 2021

ಗುರುನಿಮ್ಮ ದಯವೆನಗಾನಂದೋದಯ ಸರಿಸೌಖ್ಯಕರನೀವ ankita mahipati

 ಗುರು ನಿಮ್ಮ ದಯವೆನಗಾನಂದೋದಯ ಸರಿಸೌಖ್ಯಕರನೀವÀ ಮಹದಾಶ್ರಯ ಪ  


ಗುರುನಿಮ್ಮ ಕೃಪೆನೋಟ ಎನಗನುಭವದೂಟ ಸುರಸಯೋಗದ ಆಟ ಪರಮನೀಟ ಗುರು ಸುಬೋಧದ ಕೂಡಿ ಎನಗೆ ನಿಜ ಘನ ಪ್ರಗಟ ಕರಕಮಲ ಭಯದಮಾಟ ವರಮುಗುಟ 1 

ಗುರುನಿಮ್ಮ ದಯಕರುಣ ಎನಗೆ ಸಕಲಾಭರಣ ವರ ಪ್ರತಾಪದೆ ವಿಜಯಾನಂದಘನ ಗುರು ನಿಮ್ಮ ಶ್ರೀ ಚರಣ ಎನಗೆ ಬಳಗವು ಪೂರ್ಣ ಹರುಷಗತಿ ಸಾಧನ ಪರಮಘನ 2 

ಗುರು ನಿಮ್ಮ ಬಲವೆ ಬಲ ಎನಗನುದಿನ ದೆಲ್ಯಚಲ ಹೊರುಹುತಿಹ ನಾಮನಿಜ ಸರ್ವಕಾಲ ತರಳ ಮಹಿಪತಿಗೆ ನೀಮಾಡುತಿಹ್ಯ ಪ್ರತಿಪಾಲ ಗುರು ಭಾನುಕೋಟಿತೇಜನೆ ಕೃಪಾಲ 3

***