ವೆಂಕಟಪತಿ ಶರಣು ಹಾ ಹಾ ವೆಂಕಟಪತಿ ಶರಣು ll ಪ ll
ಕಮಲಸಂಭವನುತ ಚರಣ ಶುಭಕಮಲಾರಿಕುಲಭರಣ
ಕಮಲಸಖ ಸಂತಾರುಣ ಕಿರಣ ಕರುಣಾಸಂಪೂರ್ಣ ll 1 ll
ಸಿರಿ ಭೂದೇವಿಯರ ರಮಣ ದಿವ್ಯಸರಸಾಕ್ಷ ಖಗವರಗಮನ
ಸುರರಿಪುಗಣಾಸುರದಮನ ಭವಹರ ಸುರವರಸಮ ನಾಮ ನಮೋ ll 2 ll
ಶೇಷಗಿರಿಯತಟನಿಲಯ ಫಣಶೇಷಭೂಷಣ ಮಣಿ ನಿಲಯ
ಪ್ರಸನ್ವೆಂಕಟ ತಿರುಮಲೆಯೊಳಿಹ ಚೆಲುವ ಸ್ವಸುಖ ಭೋಕ್ತ ಭಕ್ತರಾಶ್ರಯ ll 3 ll
***