Showing posts with label ನಂಬಿದವರಿಗೆ ಇಂಬುದೋರುವ govinda. Show all posts
Showing posts with label ನಂಬಿದವರಿಗೆ ಇಂಬುದೋರುವ govinda. Show all posts

Tuesday, 12 November 2019

ನಂಬಿದವರಿಗೆ ಇಂಬುದೋರುವ ankita govinda

by ಗೋವಿಂದದಾಸ
ನಂಬಿದವರಿಗೆ ಇಂಬುದೋರುವ |ಲಂಬೋದರ ಗಣನಾಯಕ ಪ

ಶಂಭು ಶಂಕರಸುತನೆ ಭಕ್ತಕುಟುಂಬಿ ವಿಘ್ನನಾಯಕ ಅ.ಪ

ಏಕದಂತ ವಿವೇಕದಾತನೆ | ಲೋಕನಾಥ ಪ್ರಖ್ಯಾತನೆಶೋಕಹರಹೇರಂಬಗಜಮುಖಕಾಕುಜನಸಂಹಾರಕನೆ ಜಯತು ಜಯತು 1

ಕುಂಕುಮಾಂಕಿತ ದೇವದೇವನೆ | ಕಿಂಕರನ ನುತಿಪಾತ್ರನೆಶಂಕರಿಯ ಸುಕುಮಾರ ಮಧುಪುರಪಂಕಜಾದಳನೇತ್ರನೆ ಜಯತು ಜಯತು 2

ವಿಘ್ನಘನಕಾಂತಾರಕ ನಲನೆ | ವಿಘ್ನ ಮೇಘಕೆ ಅನಿಲನೆವಿಘ್ನಕರ ಯಾಮಿನಿಗೆಭಾಸ್ಕರವಿಘ್ನಸಾಮಜಕೇಸರಿಜಯತು ಜಯತು 3

ಗಂಧಚಂದನ ಪುಷ್ಪಫಲಗ | ಳಿಂದ ನಿನ್ನನು ಪೂಜಿಸಿವಂದಿಸುವೆ ನಿನ್ನಂಘ್ರಿ ಕಮಲಕೆ ಸಲಹೊಸಲಹೊ ಗೋವಿಂದದಾಸನ ಜಯತು ಜಯತು 4
******