ರಾಗ ತೋಡಿ ಆದಿತಾಳ
1st audio by Mrs. Nandini Sripad
ಶ್ರೀಗೋಪಾಲದಾಸರ ಕೃತಿ
ಕಾಯೋ ಶ್ರೀನಾರಸಿಂಹ ಕಾಯೋ ॥ ಪ ॥
ಕಾಯೋ ಶ್ರೀನಾರಸಿಂಹ ತ್ರಿಯಂಬಕಾದ್ಯಮರೇಶಾ ।
ಭಯ ಅಂಧಂತಿಮಿರ ಮಾರ್ತಾಂಡ ॥ ಅ ಪ ॥
ಘೋರ ಅಕಾಲಮೃತ್ಯು । ಮೀರಿ ಬರಲು ಕಂಡು ।
ಧೀರಾ ನೀ ಬಿಡಿಸದಿನ್ಯಾರೋ ಶ್ರೀ ನಾರಸಿಂಹ ॥ 1 ॥
ಪ್ರಬಲೋತ್ತಮಾನೆನಿಸಿ ಅಬಲಾರ ಕಾಯದಿರೇ ।
ಸುಬಲಾರು ಕಂಡು ಮೆಚ್ಚುವರೇ ಶ್ರೀ ನಾರಸಿಂಹ ॥ 2 ॥
ಜ್ಞಾನರಹಿತನಾಗಿ ನಾ ನಿನ್ನ ಮರೆತರೇ
ನೀನೂ ಮರತದ್ಯಾಕೋ ಪೇಳೋ ಶ್ರೀ ನಾರಸಿಂಹ ॥ 3 ॥
ಧಿಷಣಾನೆ ಸುಭದ್ರ ದೋಷಾ ಮೃತ್ಯುಗೆ ಮೃತ್ಯು
ಸುಷುಮ್ನಾ ನಾಡೀಸ್ಥಿತ ವಿಭುವೇ ಶ್ರೀ ನಾರಸಿಂಹ ॥ 4 ॥
ಪಾಲಮುನ್ನಿರಾಗಾರ ಪದುಮೇ ಮನೋಹರ
ಗೋಪಾಲವಿಠಲ ಜಗತ್ಪಾಲಾ ಶ್ರೀ ನಾರಸಿಂಹ ॥ 5 ॥
***
Kaayo shreenaarasimha | kaayo jaya Naarasimha Kaayo || pa ||
Kaayo shreenaarasimha trayambakaadyamaresha |
Bhayaandhatimira maartaanda jaya naarasimha kaayo || a. Pa. ||
Ghora akaalamrutyu meeri baralu kandu |
Dheera nee bidisadinyaaro jaya naarasimha kaayo ||1 ||
Bheeshanane subhadra dosha mrutyuge mrutyu |
Sushumnaanaadisthita vibhuve jaya naarasimha || 2 ||
J~jaana rahitanaagi naa ninna maretare |
Neenu maretaddeko pelo jaya naarasimha kaayo || 3 ||
Prabalottamanenisi abalara kaayadiralu |
Subalaru kandu macchuvarenu jaya naarasimha kaayo|| 4 ||
Paalamunniragaara padumemanohara |
Gopaalaviththala jagatpaala shree naarasimha kaayo || 5 ||
***
pallavi
kAyO shrI nArasimha kAyO
anupallavi
kAyO shrI naarasiMha triyambakAdyamarEsha bhaya andhantimira mArtANDa shrI nArasimha
caraNam 1
ghOra akAlamrutyu mIribaralu kaNDu dhIra nI biDisadinyAro shrI nArasimha
caraNam 2
bhISaNane subhadra dOSa mrutyuge mrutyu suSumnAnADi sthita vibhuve shrI nArasimha
caraNam 3
jnAnarahitanAgi nA ninna maretare nInU maretadyAke pELo shrI nArasimha
caraNam 4
prabalOttamanenisi abalara kAyadire sabalaru kaNDu meccuvare shrI nArasimha
caraNam 5
pAlamunnIrAgara padumemanOhara gOpAlaviThala jagatpAla shrI nArasimha
***
ಕಾಯೋ ಶ್ರೀ ನಾರಸಿಂಹ .....
- ಶ್ರೀ ಪರಶುರಾಂ ಬೆಟಗೇರಿ
ಹಸುಳೆ ಪ್ರಹ್ಲಾದನ ಭಕ್ತಿಗೆ ಮೆಚ್ಚಿದ ಪರಮಾತ್ಮನು ನರಸಿಂಹದೇವನಾಗಿ ಅವತರಿಸಿ ಬಂದನು. ನರಸಿಂಹದೇವರ ಪ್ರಾದುರ್ಭಾವವು ದಶಾವತಾರಗಳಲ್ಲಿನ ಒಂದು ಅವತಾರವಾಗಿದೆ. ಅನೇಕ ಪುರಾಣಗಳಲ್ಲಿ ವಿಶೇಷವಾಗಿ ಭಾಗವತವು ಶ್ರೀ ನರಸಿಂಹದೇವರ ಪ್ರಾದುರ್ಭಾವವನ್ನು ಬಹುವಾಗಿ ವರ್ಣಿಸುತ್ತದೆ. ಮಗನಾದ ಪ್ರಹ್ಲಾದನಿಗೆ ತೊಂದರೆಯನ್ನು ಕೊಡುತ್ತಿದ್ದ ಹಿರಣ್ಯಕಶ್ಯಪುವನ್ನು ಸಂಹರಿಸಿ ಜಗತ್ತನ್ನು ಉದ್ಧಾರ ಮಾಡಿದ ನರಸಿಂಹದೇವರನ್ನು ನಾವು ನಮ್ಮ ಸಂಸಾರ ಸಾಗರದಿಂದ ಬಿಡುಗಡೆ ಹೊಂದಲು ಪ್ರಾರ್ಥಿಸಬೇಕು. ಸಂಸಾರದಲ್ಲಿ ಬರುವ ಅನಂತ ಅಡೆತಡೆಗಳನ್ನು ನಿವಾರಿಸೆಂದು ಬೇಡಬೇಕು. ವಾಯು ಸ್ತುತಿಯನ್ನು ರಚಿಸಿರುವ ತ್ರಿವಿಕ್ರಮಪಂಡಿತಾಚಾರ್ಯರನ್ನು ಅನುಗ್ರಹಿಸುತ್ತಾ ಶ್ರೀಮನ್ ಮಧ್ವಾಚಾರ್ಯರು "ಪಾಂತ್ವಸ್ಮಾನ್ ಪುರುಹೂತ ವೈರಿಬಲವನ್ ಮಾತಂಗಮಾಧ್ಯದ್ ಘಟಾ....." ಎಂದು ಶ್ರೀನರಸಿಂಹ ದೇವರ ನಖದ ಸ್ತುತಿಯನ್ನು ಎರಡು ಶ್ಲೋಕದಲ್ಲಿ ಮಾಡಿ ಅದನ್ನು ವಾಯುಸ್ತುತಿಯೊಂದಿಗೆ ಸಂಪುಟಾಕಾರದಲ್ಲಿ ಪಾರಾಯಣ ಮಾಡಬೇಕೆಂದು ಆದೇಶಿಸಿದರು. ನಂತರದಲ್ಲಿ ಅದು ಹರಿವಾಯುಸ್ತುತಿಯೆಂದೇ ಪ್ರಸಿದ್ಧವಾಯಿತು.
ಕಾಯೋ ಶ್ರೀ ನಾರಸಿಂಹ ಕಾಯೋ ಶ್ರೀ ಜಯ ನಾರಸಿಂಹ ll ಪ ll
ಕಾಯೋ ಶ್ರೀ ನಾರಸಿಂಹ ತ್ರ್ಯಂಬಕಾದ್ಯಮರೇಶ l
ಭಯಾಂಧತಿಮಿರ ಮಾರ್ತಾಂಡ ಶ್ರೀ ನಾರಸಿಂಹ ll ಅ ಪ ll
ಶ್ರೀ ನಾರಸಿಂಹದೇವನೇ ನೀನು ನಮ್ಮನ್ನು ಕಾಪಾಡು. ಜಯನಾರಸಿಂಹದೇವನೇ ನಮ್ಮನ್ನು ಕಾಪಾಡು. ತ್ರಿನೇತ್ರನಾದ (ತ್ರ್ಯಂಬಕ = ಮೂರು ಕಣ್ಣುಳ್ಳವನಾದ ರುದ್ರದೇವನು) ರುದ್ರಾದಿದೇವತೆಗಳಿಗೆ ಒಡೆಯನಾಗಿರುವ, ಭಯವೆಂಬ ಗಾಢವಾದ ಅಂಧಕಾರಕ್ಕೆ (ಅಂಧಂತಿಮಿರ = ಗಾಢವಾದ ಕತ್ತಲೆ) ಸೂರ್ಯನಂತಿರುವ (ಮಾರ್ತಾಂಡ = ಸೂರ್ಯ) ಶ್ರೀನಾರಸಿಂಹನೇ ನಮ್ಮನ್ನು ಕಾಪಾಡು. ಜೊತೆಗೆ ಜ್ಞಾನವೆಂಬ ಸೂರ್ಯನು ನಮ್ಮೊಳಗೆ ಉದಯಿಸುವಂತಾಗಿಸು.
ಘೋರ ಅಕಾಲ ಮೃತ್ಯು ಮೀರಿ ಬರಲು ಕಂಡು
ಧೀರ ನೀ ಬಿಡಿಸದಿನ್ಯಾರೋ ಶ್ರೀ ನಾರಸಿಂಹ ll1 ll
ಭಯಂಕರವಾದ (ಘೋರ = ಭಯಂಕರ) ಅಕಾಲ ಮರಣವು ನಮಗೆ ಸತ್ಕರ್ಮವನ್ನಾಚರಿಸಲು ಬೇಕಾಗಿರುವ ಆಯುಷ್ಯವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ನಾವು ಮಾಡಬೇಕಾಗಿರುವ ಸತ್ಕರ್ಮಗಳನ್ನು ಪೂರ್ಣವಾಗಿ ಮಾಡಲು ಅಕಾಲಮರಣದಿಂದ ಸಾಧ್ಯವಾಗುವುದಿಲ್ಲ. ನಮ್ಮ ಪೂರ್ಣ ಆಯುಷ್ಯವನ್ನು ಮೀರಿ ಬರುತ್ತಿರುವ ಅಕಾಲ ಮೃತ್ಯುವನ್ನು ಪರಿಹರಿಸಲು ನೀನೇ ಸಮರ್ಥನು. ಶ್ರೀಮದಾಚಾರ್ಯರು ತಮ್ಮ ತಂತ್ರಸಾರದಲ್ಲಿ 'ಮೃತ್ಯುಮ್ ನಮಾಮ್ಯಹಂ' ಎಂದಿರುವರು. ಮೃತ್ಯುವಿಗೇ ಮೃತ್ಯುವೆನ್ನಿಸಿದ ನಾರಸಿಂಹನು ಮರ್ತ್ಯರಾದ ನಮ್ಮ ಮೃತ್ಯು ಎಂಬ ಅನಿಷ್ಠವನ್ನು ಪರಿಹರಿಸುವ ಪರದೈವನಾಗಿರುವ. ನಮ್ಮನ್ನು ಕಾಯೋ ನಾರಸಿಂಹ.
ಧೀಷಣನೆ ಸುಭದ್ರ ಘೋರ ಮೃತ್ಯುಗೆ ಮೃತ್ಯು l
ಸುಷುಮ್ನಾ ನಾಡಿಸ್ಥಿತ ವಿಭುವೆ ಶ್ರೀ ನಾರಸಿಂಹ ll 2 ll
ಸರ್ವಜ್ಞನೆ (ಧೀಷಣನೆ = ಸರ್ವಜ್ಞನೆ) ; ಬಹಳ ಶುಭದಾಯಕನೆ (ಸುಭದ್ರ = ಪರಮ ಶುಭದಾಯಕನು) ; ಘೋರವಾದ ಮೃತ್ಯುವಿಗೆ ಮೃತ್ಯುವಾದವನೇ (ಮೃತ್ಯುದೇವತೆ, ಯಮ, ರುದ್ರಾದಿಗಳೆಲ್ಲರನ್ನು ಪ್ರಳಯದಲ್ಲಿ ಸಂಹರಿಸುವ ಪರಮಾತ್ಮನು), ಸುಷುಮ್ನಾ ನಾಡಿಯಲ್ಲಿ ಅಂತರ್ಗತನಾಗಿ ಇರುವವನೇ, ಸರ್ವವ್ಯಾಪ್ತಿಯಾದಂತಹ ಪರಮಾತ್ಮನೇ ನಮ್ಮನ್ನು ಕಾಯಬೇಕು. ಸರ್ವ ಜೀವರ ಬಿಂಬಮೂರುತಿಯಾದ ನಾರಸಿಂಹನು ಜಗದ್ರಾಕ್ಷಕನಾಗಿ ಕಡೆಗೆ ಜಗದ್ಭಕ್ಷಕನೂ ಆಗಿರುವ. ಅಂತ್ಯಕಾಲದಲ್ಲಿ ದೇಹಸ್ಥ ಸುಷುಮ್ನಾ ನಾಡಿಯಿಂದ ಜೀವನನ್ನು ವಾಯುದೇವರೊಂದಿಗೆ ಕರೆದೊಯ್ಯುವ ಶ್ರೀಹರಿಯು ವಿಭು (ಸರ್ವವ್ಯಾಪ್ತ)ವಾಗಿ ಭಯನಾಶಕನಾಗಿರುವ.
ಜ್ಞಾನರಹಿತನಾಗಿ ನಾ ನಿನ್ನ ಮರೆತರೆ l
ನೀನು ಮರೆತದ್ದೇಕೋ ಪೇಳೋ ಶ್ರೀ ನಾರಸಿಂಹ ll 3 ll
ಅಲ್ಪಜೀವಿಯಾದ ನನಗೆ ಪರಿಪೂರ್ಣ ಜ್ಞಾನವಿರುವುದಿಲ್ಲ. ಜ್ಞಾನರಹಿತನಾಗಿ ಇರುವಂತಹ ನಾನು ನಿನ್ನನ್ನು ಮರೆಯುವುದು ಸಾಮಾನ್ಯವೇ. ಆದರೆ ನೀನು ಸರ್ವಜ್ಞನಾಗಿದ್ದುದರಿಂದ ನಮ್ಮನ್ನು ಏಕೆ ಮರೆತಿರುವೆ ದೇವಾ. ನನ್ನನ್ನು ನೀನು ಯಾವ ಕಾಲದಲ್ಲೂ ಉಪೇಕ್ಷಿಸಬಾರದು ಎನ್ನುವ ಭಾವ. ಶ್ರೀಮದಾಚಾರ್ಯರು 'ನರಸಿಂಹೋ ಅಖಿಲಜ್ಞಾನ ಮತಧ್ವಾಂತ ದಿವಾಕರಃ' ಎಂದಿರುವರು. ಅಜ್ಞಾನವನ್ನು ಕಳೆದು ಸುಜ್ಞಾನವನ್ನು ಕೊಡುವ ಪ್ರಭುವು ಶ್ರೀನರಸಿಂಹದೇವರು ಎಂದಿರುವರು.
ಪ್ರಬಲೋತ್ತಮನೆನಿಸಿ ಅಬಲರ ಕಾಯದಿರೆ l
ಸುಬಲರು ಕಂಡು ಮೆಚ್ಚುವರೆ ಶ್ರೀ ನಾರಸಿಂಹ ll 4 ll
ಹೇ ಸರ್ವಶಕ್ತರಲ್ಲಿ ಅತ್ಯಂತ ಶಕ್ತನಾಗಿರುವವನೇ (ಪ್ರಬಲೋತ್ತಮ, ಸರ್ವಜ್ಞ), ಅಶಕ್ತರಾದ (ಅಬಲರನ್ನು) ನಮ್ಮನ್ನು ರಕ್ಷಿಸದಿದ್ದರೆ ನಿನ್ನನ್ನು ಬಲವುಳ್ಳವರು (ಜ್ಞಾನಿಗಳು) ಒಪ್ಪುವುದಿಲ್ಲ. ಅಲ್ಪಜ್ಞಾನವುಳ್ಳವರಾದ ನಮ್ಮ ರಕ್ಷಣೆಯನ್ನು ನೀನು ಮಾಡಬೇಕು. ಏಕೆಂದರೆ ಜ್ಞಾನಿಗಳು ನಿನ್ನನ್ನು ಸರ್ವಶಕ್ತನೆಂದು ಕರೆಯುತ್ತಾರೆಂದು ಭಾವ.
ಪಾಲ ಮುನ್ನೀರಾಗರ ಪದುಮ ಮನೋಹರ l
ಗೋಪಾಲವಿಟ್ಠಲ ಜಗತ್ಪಾಲ ಶ್ರೀ ನಾರಸಿಂಹ ll 5 ll
ಕ್ಷೀರಸಾಗರದಲ್ಲಿರುವವನೇ (ಪಾಲ ಮುನ್ನೀರ = ಕ್ಷೀರಸಾಗರ ; ಆಗರ = ಮನೆ)
ಶ್ರೀ ಲಕ್ಷ್ಮೀದೇವಿಗೆ (ಪದುಮೆ = ಲಕ್ಷ್ಮೀ) ಮನೋಹರನಾದವನೆ, ಈ ಸಮಸ್ತ ಜಗವನ್ನು ಪಾಲನೆ ಮಾಡುವ ಶ್ರೀನಾರಸಿಂಹದೇವನೇ ನಮ್ಮನ್ನು ಕಾಯಬೇಕು. ಬಾಲ ಪ್ರಹ್ಲಾದನಿಗೆ ತೋರಿದ ನರಸಿಂಹ ರೂಪವೇ ಶ್ರೀಹರಿಯು ಸ್ವತಂತ್ರ, ಸರ್ವವ್ಯಾಪ್ತ, ಸರ್ವನಿಯಾಮಕ, ಸೃಷ್ತ್ಯಾದಿ ಅಷ್ಟಕರ್ತ ಎಂಬೆಲ್ಲಾ ಗುಣಗಳನ್ನು ಪ್ರತಿಪಾದಿಸುವ ಅದ್ಭುತ ಅವತಾರವಾಗಿದೆ. ಇದರಿಂದ ಅವನಿಲ್ಲದ ಸ್ಥಳವಿಲ್ಲ. ನಿಯಮ್ಯವಲ್ಲದ ವಸ್ತುವಿಲ್ಲವೆಂದು ತಿಳಿಯುತ್ತದೆ. ಅದಕ್ಕೆಂದೇ ಶ್ರೀಗೋಪಾಲದಾಸರು ನೀನೇ ಸರ್ವಸ್ವವೆಂದು ಪ್ರಾರ್ಥಿಸಿರುವರು.
ವಿಶೇಷ :
(1) ನಾರಸಿಂಹ ಸ್ವರೂಪದೇಹದೊಳಗೆ ಶರೀರನಾಮದಿ ಕರೆಸುವನು.
(,ಹರಿಕಥಾಮೃತಸಾರ ಉದಾತ್ತಾನುದಾತ್ತ ಸಂಧಿ - 26ನೇ ನುಡಿ)
ಸ್ವರೂಪದೇಹದಲ್ಲಿ ಶ್ರೀ ನರಸಿಂಹದೇವರು ಶರೀರನಾಮದಿಂದ ಕರೆಯಲ್ಪಡುತ್ತಾರೆ.
(2) ಮತ್ತೇ ಚಿದ್ದೇಹದ ಒಳಗೆ ಎಂಭತ್ತು ಸಾವಿರದೇಳುನೂರಿಪ್ಪತ್ತೈದು ನೃಸಿಂಹ ರೂಪದಲ್ಲಿದ್ದು ಜೀವರಿಗೆ ll ನಿತ್ಯದಲಿ ಹಗಲಿರುಳು ಬಪ್ಪಮೃತ್ಯುವಿಗೆ ತಾ ಮೃತ್ಯುವೆನಿಸುವ ಭೃತ್ಯವತ್ಸಲ ಭಯವಿನಾಶನ ಭಾಗ್ಯ ಸಂಪನ್ನ (ಹರಿಕಥಾಮೃತಸಾರ - ಪಂಚತನ್ಮಾತ್ರಾ ಸಂಧಿ - 15ನೇ ನುಡಿ.)
ಸ್ವರೂಪದೇಹದಲ್ಲಿ ಶ್ರೀ ನರಸಿಂಹದೇವರು 80725 ರೂಪಗಳಿಂದಿದ್ದು ಹಗಲಿರುಳು ಬರುವ ಅಪಮೃತ್ಯುವನ್ನು ಪರಿಹರಿಸುತ್ತ ಭಯವಿನಾಶಕ ಭೃತ್ಯವತ್ಸಲ ಭಾಗ್ಯ ಸಂಪನ್ನನೆಂಬ ಹೆಸರುಗಳಿಂದ ಪ್ರಸಿದ್ಧನಾಗಿರುವನು.
(3) ಜ್ವರದೊಳಿಪ್ಪತ್ತೇಳು ಹರನೊಳಗಿರುವನಿಪ್ಪತ್ತೆಂಟು ರೂಪದಿ ಎರಡು ಸಾವಿರದೆಂಟು ನೂರಿಪ್ಪತ್ತು ಏಳೆನಿಪ ll ಜ್ವರಹರಾಹ್ವಯ ನಾರಸಿಂಹನ ಸ್ಮರಣೆ ಮಾತ್ರದಿ ದುರಿತರಾಶಿಗಳಿರದೆ ಪೋಪುವು ತರಣಿ ಬಿಂಬವ ಕಂಡ ಹಿಮದಂತೆ ll (ಹರಿಕಥಾಮೃತಸಾರ - ಪಂಚತನ್ಮಾತ್ರಾ ಸಂಧಿ - 16ನೇ ನುಡಿ)
ಜ್ವರದಲ್ಲಿ 27 ರೂಪಗಳಿಂದ ಅದನ್ನು ಸೃಷ್ಟಿಸಿದ ಹರನಲ್ಲಿ 28 ರೂಪಗಳಿಂದಿದ್ದು ಜ್ವರವನ್ನು ನಾಶಮಾಡುವ ಜ್ವರಹರನೆಂಬ ಹೆಸರಿನಿಂದ 2827 ರೂಪಗಳಿಂದ ಇರುವ ಶ್ರೀನರಸಿಂಹನನ್ನು ಸ್ಮರಿಸಿದರೆ ಸೂರ್ಯನನ್ನು ಕಂಡ ಹಿಮರಾಶಿಯು ಮಾಯವಾಗುವಂತೆ ದುರಿತರಾಶಿಗಳು ಓಡಿ ಹೋಗುತ್ತವೆ.
(4) ಮಾಸಪರಿಯಂತರವು ಬಿಡದೆ ನೃಕೇಸರಿಯು ಶುಭನಾಮ ಮಂತ್ರ ಜಿತಾಸನದ ಲೇಕಾಗ್ರಚಿತ್ತದಿ ನಿಷ್ಕಪಟದಿಂದ ll ಬೇಸರದೆ ಜಪಿಸಲು ವೃಜಿನಗಳ ನಾಶಗೈಸಿ ಮನೋರಥಗಳ ಪರೇಶ ಪೂರ್ತಿಯ ಮಾಡಿಕೊಡುವನು ಕಡೆಗೆ ಪರಗತಿಯ ll (ಹರಿಕಥಾಮೃತಸಾರ - ಪಂಚತನ್ಮಾತ್ರಾ ಸಂಧಿ - 17ನೆಯ ನುಡಿ)
ಸ್ಥಿರಾಸನದಲ್ಲಿ ಕುಳಿತು ಒಂದೇ ಮನಸ್ಸಿನಿಂದ ಒಂದು ತಿಂಗಳ ಕಾಲ ಎಡಬಿಡದೆ ಬೇಸರಿಸದೆ ನಾರಸಿಂಹ ಮಂತ್ರವನ್ನು ಭಕ್ತಿಯಿಂದ ಜಪಿಸುವವರ ಪಾಪರಾಶಿಗಳನ್ನು ನಾಶಗೊಳಿಸಿ ಇಷ್ಟಾರ್ಥಗಳನ್ನೂ ದಯಪಾಲಿಸಿ ಕೊನೆಗೆ ಮೋಕ್ಷವನ್ನು ನೀಡುತ್ತಾನೆ.
"ಉಗ್ರಂ ವೀರಂ ಮಹಾವಿಷ್ಣುಮ್ ಜ್ವಲಂತಂ ಸರ್ವತೋಮುಖಂ l ನೃಸಿಂಹಂ ಭೀಷಣಂ ಭದ್ರಂ ಮೃತ್ಯೋರ್ಮೃತ್ಯುಮ್ ನಮಾಮ್ಯಹಂ" - ಇದುವೇ ಶ್ರೀ ನಾರಸಿಂಹ ಮಂತ್ರವು.
*
ಪರಮದಯಾನಿಧೆ ಗೋಪಾಲವಿಟ್ಠಲ ಇರುಳು ಹಗಲು ನಿನ್ನ ಸ್ಮರಣೆ ನೀಯೋ - ಶ್ರೀ ಗೋ.
ಹರಿಯರ್ಪಣ ಇಲ್ಲದವ ಕರ್ಮಮಾಡಲು ಹುರಿದು ಬಿತ್ತಿದ ಬೀಜ - ಶ್ರೀಗೋ.
ಬಾಡಿಗೆ ಮನೆ ದೇಹ ಬಿಡಾರ ಸ್ಥಿರವಲ್ಲ - ಶ್ರೀಗೋ.
ನಿನ್ನ ಸ್ಮೃತಿಯೆ ವಿಧಿ, ವಿಸ್ಮೃತಿ ನಿಷೇಧ - ಶ್ರೀಗೋ.
**
ಹರಿದಾಸ ತರಂಗ
ಹರಿದಾಸರ ಸಾವಿರ ಪದಗಳ ಅನುವಾದ ಮಾಲಿಕೆ
ಸಂಪುಟ - 1
ಸಂಪಾದಕರು : ಎ.ಬಿ. ಶ್ಯಾಮಾಚಾರ್ಯ
ಪರಶುರಾಂ ಬೆಟಗೇರಿ
ವ್ಯಾಸಾನಂದದಾಸ ಪ್ರತಿಷ್ಠಾನ (ರಿ.)
ಭಾರತೀಯ ಹರಿದಾಸಸಾಹಿತ್ಯ ವಿದ್ಯಾಲಯ
ಬೆಂಗಳೂರು
***
ಕಾಯೋ ಶ್ರೀ ನಾರಸಿಂಹ
ಕಾಯೋ ಜಯ ನಾರಸಿಂಹ ।ಪ।
ಕಾಯೋ ಶ್ರೀ ನಾರಸಿಂಹ ತ್ರಿಯಂಬಕಾದ್ಯಮರೇಶ
ಭಯಾಂಧತಿಮಿರಮಾರ್ತಾಂಡ ಶ್ರೀನಾರಸಿಂಹ ।ಅ ಪ।
ಘೋರ ಅಕಾಲಮೃತ್ಯು ಮೀರಿ ಬರಲು ಕಂಡು
ಧೀರ ನೀ ಬಿಡಿಸದಿನ್ಯಾರೋ ಶ್ರೀ ನಾರಸಿಂಹ ।।೧।।
ಧೀಷಣನೆ ಸುಭದ್ರ ದೋಷ ಮೃತ್ಯುಗೆ ಮೃತ್ಯು
ಸುಷಮ್ನಾನಾಡಿಸ್ಥಿತವಿಭುವೆ ಶ್ರೀನಾರಸಿಂಹ ।।೨।।
ಜ್ಞಾನರಹಿತನಾಗಿ ನಾ ನಿನ್ನ ಮರೆತರೆ
ನೀನೂ ಮರೆತದ್ಯಾಕೆ ಪೇಳೋ ಶ್ರೀ ನಾರಸಿಂಹ ।।೩।।
ಪ್ರಬಲೋತ್ತಮನೆನಿಸಿ ಅಬಲರ ಕಾಯದಿರೆ
ಸುಬಲರು ಕಂಡು ಮೆಚ್ಚುವರೆ ಶ್ರೀ ನಾರಸಿಂಹ ।।೪।।
ಪಾಲಮುನ್ನೀರಾಗರ ಪದುಮಮನೋಹರ
ಗೋಪಾಲ ವಿಠಲ ಜಗತ್ಪಾಲ ಶ್ರೀ ನಾರಸಿಂಹ ।।೫।।
***
ಕಾಯೋ ಜಯ ನಾರಸಿಂಹ ।ಪ।
ಕಾಯೋ ಶ್ರೀ ನಾರಸಿಂಹ ತ್ರಿಯಂಬಕಾದ್ಯಮರೇಶ
ಭಯಾಂಧತಿಮಿರಮಾರ್ತಾಂಡ ಶ್ರೀನಾರಸಿಂಹ ।ಅ ಪ।
ಘೋರ ಅಕಾಲಮೃತ್ಯು ಮೀರಿ ಬರಲು ಕಂಡು
ಧೀರ ನೀ ಬಿಡಿಸದಿನ್ಯಾರೋ ಶ್ರೀ ನಾರಸಿಂಹ ।।೧।।
ಧೀಷಣನೆ ಸುಭದ್ರ ದೋಷ ಮೃತ್ಯುಗೆ ಮೃತ್ಯು
ಸುಷಮ್ನಾನಾಡಿಸ್ಥಿತವಿಭುವೆ ಶ್ರೀನಾರಸಿಂಹ ।।೨।।
ಜ್ಞಾನರಹಿತನಾಗಿ ನಾ ನಿನ್ನ ಮರೆತರೆ
ನೀನೂ ಮರೆತದ್ಯಾಕೆ ಪೇಳೋ ಶ್ರೀ ನಾರಸಿಂಹ ।।೩।।
ಪ್ರಬಲೋತ್ತಮನೆನಿಸಿ ಅಬಲರ ಕಾಯದಿರೆ
ಸುಬಲರು ಕಂಡು ಮೆಚ್ಚುವರೆ ಶ್ರೀ ನಾರಸಿಂಹ ।।೪।।
ಪಾಲಮುನ್ನೀರಾಗರ ಪದುಮಮನೋಹರ
ಗೋಪಾಲ ವಿಠಲ ಜಗತ್ಪಾಲ ಶ್ರೀ ನಾರಸಿಂಹ ।।೫।।
***