Showing posts with label ಎಂತು ವರ್ಣಿಸಲಮ್ಮ ಈ ಗುರುಗಳ ಯಂತ್ರೋದ್ಧಾರ ನಾಗಿ vijaya vittala ENTU VARNISALAMMA EE GURUGALA YANTRODDHAARANAAGI. Show all posts
Showing posts with label ಎಂತು ವರ್ಣಿಸಲಮ್ಮ ಈ ಗುರುಗಳ ಯಂತ್ರೋದ್ಧಾರ ನಾಗಿ vijaya vittala ENTU VARNISALAMMA EE GURUGALA YANTRODDHAARANAAGI. Show all posts

Wednesday 3 November 2021

ಎಂತು ವರ್ಣಿಸಲಮ್ಮ ಈ ಗುರುಗಳ ಯಂತ್ರೋದ್ಧಾರ ನಾಗಿ ankita vijaya vittala ENTU VARNISALAMMA EE GURUGALA YANTRODDHAARANAAGI

ರಾಗ ಬಿಲಹರಿ  ತಾಳ ಮಿಶ್ರ ಛಾಪು



ಎಂತು ವರ್ಣಿಸಲಮ್ಮ ಈ ಗುರುಗಳ |
ಯಂತ್ರೋದ್ಧಾರ ನಾಗಿ | ಇಂತು ಮೆರೆವ ಯತಿಯಾ ಪ

ಕೋತಿ ರೂಪದಿ ಬಂದು | ಭೂತಳಕ್ಕೆ ಬೆಡಗು ತೋರಿ ||
ಈ ತುಂಗ ಭದ್ರೆಯಲಿ | ಖ್ಯಾತನಾಗಿಪ್ಪ ಯತಿಯೊ 1

ಸುತ್ತು ವಾನರ ಬಂಧ | ಮತ್ತೆ ಮಲೆಯಾಕಾರ || ಮಧ್ಯ
ಚಿತ್ರಕೋಣ ಅದರೊಳು | ನಿತ್ಯದಲಿ ಮೆರೆವಾ ಯತಿಯಾ 2

ವ್ಯಾಸರಾಯರಿಂದ ಬಂದು | ಈ ಶಿಲೆಯಾಳು ನಿಂತು ||
ಶ್ರೀಶ ವಿಜಯವಿಠ್ಠಲನ್ನ | ಯೇಸು ಬಗೆ ವರ್ಣಿಪೆ ಯತಿಯಾ3
****