ರಾಗ ಆರಭಿ ಖಂಡಛಾಪುತಾಳ
ಶ್ರೀ ಪುರಂದರದಾಸರ ಕೃತಿ
ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ।
ಪಾಮರರು ತಾವೇನು ಬಲ್ಲರಯ್ಯ ॥ ಪ ॥
ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ ।
ಆ ಅಸ್ಥಿತಗತವಾದ ಅತಿ ಪಾಪವನ್ನು ॥
ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ ।
ದಾಯವನು ವಾಲ್ಮೀಕಿ ಮುನಿರಾಯ ಬಲ್ಲ ॥ 1 ॥
ಮತ್ತೆ ಮ ಎಂದೆನಲು ಹೊರಬಿದ್ದ ಪಾಪಗಳು ।
ಒತ್ತಿ ಒಳ ಪೊಗದಂತೆ ಕವಾಟವಾಗಿ ॥
ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ ।
ಭಕ್ತವರ ಹನುಮಂತನೊಬ್ಬ ತಾ ಬಲ್ಲ ॥ 2 ॥
ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದು ।
ಪರಮ ವೇದಗಳೆಲ್ಲ ಪೊಗಳುತಿಹವು ॥
ಸಿರಿಯರಸ ಶ್ರೀಪುರಂದರವಿಠಲನ ನಾಮವನು ।
ಸಿರಿ ಕಾಶಿಯೊಳಗಿಪ್ಪ ಶಿವನು ತಾ ಬಲ್ಲ ॥ 3 ॥
***
ರಾಗ ಕಾಂಭೋಜ ಝಂಪೆತಾಳ (raga tala may differ in audio)
Rama embuva eradu aksharada mahimeyanu
Pamararu tavenu ballirayya ||pa||
Ra enda matradolu rakta mansadolidda
Ayasthitagatavada ati papavannu
Mayavanu madi maharaya muktiya koduva
Dayavanu valmiki muniraya balla ||1||
Matte ma emdenalu horabidda papagalu
Otti ola pogadamte kavatavagi
Citta kayagala pavitra maduva pariya
Baktavara hanumantanobba ta balla ||2||
Dhareyoli namakke sarimigilu illendu
Parama vedagalella pogalutihavu
Siriyarasa sanskrita namavanu
Siri kasiyolagippa Sivanu ta balla ||3||
***
pallavi
rAma embuva eraDu akSarada mahimeyanu pAmararu tAvEnu ballarayya
caraNam 1
rA enda mAtradoLu rakta mAmsadoLidda AyasthitagatavAda ati pApavannu
mAyavanu mADi maharAya muktiya koDuva dAyavanu vAlmIki munirAya balla
caraNam 2
matte ma endenalu hora bidda pApagaLu otti oLa pogadante kavATavAgi
citta kAyagaLa pavitra mADuva pariya bhakta vara hanumantanebba tA balla
caraNam 3
dhareyoLI nAmakke sarimigilu illendu parama vEdagaLella pogaLutihavu
siriyarasa shrI purandara viTTalana nAmavanu siri kAshyoLagippa shivanu tA balla
***
ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು
ಪಾಮರರು ತಾವೇನು ಬಲ್ಲರಯ್ಯ ||ಪ||
ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ
ಆಯಸ್ಥಿತಗತವಾದ ಅತಿ ಪಾಪವನ್ನು
ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ
ದಾಯವನು ವಾಲ್ಮೀಕಿ ಮುನಿರಾಯ ಬಲ್ಲ ||
ಮತ್ತೆ ಮಾ ಎಂದೆನಲು ಹೊರಬಿದ್ದ ಪಾಪಗಳು
ಒತ್ತಿ ಒಳ ಪೊಗದಂತೆ ಕವಾಟವಾಗಿ
ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ
ಭಕ್ತವರ ಹನುಮಂತನೊಬ್ಬ ತಾ ಬಲ್ಲ ||
ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದು
ಪರಮ ವೇದಗಳೆಲ್ಲ ಪೊಗಳುತಿಹವು
ಸಿರಿಯರಸ ಶ್ರೀಪುರಂದರವಿಠಲನ ನಾಮವನು
ಸಿರಿ ಕಾಶಿಯೊಳಗಿಪ್ಪ ಶಿವನು ತಾ ಬಲ್ಲ ||
*********
ರಾಗ : ನಾಟಕುರುಂಜಿ ತಾಳ : ರೂಪಕ
ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು
ಪಾಮರರು ತಾವೇನು ಬಲ್ಲಿರಯ್ಯ ||ಪ||
ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ
ಆಯಸ್ಥಿತಗತವಾದ ಅತಿ ಪಾಪವನ್ನು
ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ
ದಾಯವನು ವಾಲ್ಮೀಕಿ ಮುನಿರಾಯ ಬಲ್ಲ ||೧||
ಮತ್ತೆ ಮಾ ಎಂದೆನಲು ಹೊರಬಿದ್ದ ಪಾಪಗಳು
ಒತ್ತಿ ಒಳ ಪೋಗದಂತೆ ಕವಾಟವಾಗಿ
ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ
ಭಕ್ತವರ ಹನುಮಂತನೊಬ್ಬ ತಾ ಬಲ್ಲ ||೨||
ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದು
ಪರಮ ವೇದಗಳೆಲ್ಲ ಪೊಗಳುತಿಹವು
ಸಿರಿಯರಸ ಸನ್ಸ್ಕ್ರಿತ ನಾಮವನು
ಸಿರಿ ಕಾಶಿಯೊಳಗಿಪ್ಪ ಶಿವನು ತಾ ಬಲ್ಲ ||೩||
***
ರಾಮ ಎನ್ನುವ ಎರಡು ಅಕ್ಷರದ ಮಹಿಮೆಯನು |
ಪಾಮರರು ತಾವೇನ ಬಲ್ಲರಯ್ಯ
ಪರಾಯೆಂದ ಮಾತ್ರದೊಳು ರಕ್ತ ಮಾಂಸದೊಳಿದ್ದ
ಆಯಸ್ಥಿಗತವಾದ ಅತಿಪಾಪವನ್ನುಮಾಯವನು
ಮಾಡಿ ಮಹಾರಾಯ ಮುಕ್ತಿಯ
ಕೊಡುವದಾಯವನು ವಾಲ್ಮೀಕಿ ಮುನಿರಾಯ ಬಲ್ಲ 1
ಮತ್ತೆ ಮ ಎಂದೆನಲು ಹೊರಬಿದ್ದ ಪಾಪಗಳುಒತ್ತಿ
ಒಳ ಪೊಗದಂತೆಯೆ ಕವಾಟವಾಗಿಚಿತ್ತ ಕಾಯಗಳ
ಸುಪವಿತ್ರ ಮಾಡುವ ಪರಿಯಭಕ್ತವರ
ಹನುಮಂತ ತಾನೊಬ್ಬ ಬಲ್ಲ 2
ಧರೆಯೊಳೀ ನಾಮಕ್ಕೆ ಸರಿಮಿಗಿಲು
ಇಲ್ಲೆಂದುಪರಮವೇದಗಳೆಲ್ಲ
ಪೊಗಳುತಿಹವುಸಿರಿಯರಸ ಶ್ರೀಪುರಂದರ ವಿಠಲ
ರಾಮನನುವರಕಾಶಿಯೊಳಗಿಪ್ಪ ಶಿವನು ತಾ ಬಲ್ಲ 3
***