Showing posts with label ಯಾವ ಹೆಸರಿನಿಂದೆ ಕರೆದರೇನು ಪಾವನಾತ್ಮನೆ ಬರನೆಸ್ವಾ ಸರ್ವೋತ್ತಮನು gadugina veeranarayana. Show all posts
Showing posts with label ಯಾವ ಹೆಸರಿನಿಂದೆ ಕರೆದರೇನು ಪಾವನಾತ್ಮನೆ ಬರನೆಸ್ವಾ ಸರ್ವೋತ್ತಮನು gadugina veeranarayana. Show all posts

Wednesday, 1 September 2021

ಯಾವ ಹೆಸರಿನಿಂದೆ ಕರೆದರೇನು ಪಾವನಾತ್ಮನೆ ಬರನೆಸ್ವಾ ಸರ್ವೋತ್ತಮನು ankita gadugina veeranarayana

 ..

kruti by ವೀರನಾರಾಯಣ Veeranarayana 


ಯಾವ ಹೆಸರಿನಿಂದೆ ಕರೆದರೇನು ಪಾವನಾತ್ಮನೆ ಬರನೆಸ್ವಾ ಸರ್ವೋತ್ತಮನು ಪ


ಸಾವಿರ ಹೆಸರುಳ್ಳ ಅವನಿಗೆ ಹೆಸರಿಂದೇನುದೇವನೊಬ್ಬನೆ ಜಗಕೆ ಎಂಬ ನುಡಿ ಸುಳ್ಳೇನುಭಾವಭಕುತಿಗಳಿಂದ ಕರೆದೊಡನೆ ಬರುವನುಠಾವು ಕಾಲಗಳಿಲ್ಲಿ ಆತನಿಗೆ ಬಹಳೇನು 1


ಅಲ್ಲಾ ಎಂದರೆ ಬರುವ ಶಿವನೇ ಎಂದರೂ ಬರುವಾಗೊಲ್ಲ ಕೃಷ್ಣನೆ ಬಾರ ಎಂದರಾತನೆ ಬರುವಅಲ್ಲಿ ಇವ ಇಲ್ಲಿ ಅವ ಎಂದು ಬಡಿದಾಡಿದರೆಖುಲ್ಲರೆಂದರೇನು ಬಲ್ಲವರು ಮರುಳಾ 2


ವಿಧವಿಧ ನುಡಿಗಳಲಿ ಬೇರೆ ಶಬುದಗಳಿರಲುಅದು ಪರಾರ್ಥವೆ ಬೇರೆ ತಾನಾಗುವದೇನುಹದಿನಾರು ಪಥಗಳನೆ ಹಿಡಿದೊಂದು ಹೋದೊಡನೆ ಅದರಿಂದಲಾ ಊರು ಸೇರಿಸುವುದಿಲ್ಲವೇನು 3


ಹೃದಯದಲಿ ನಿಜವಾದ ಭಕುತಿಯನು ಬೇಡುವನುಇದನರಿತು ಪ್ರತಿದಿನದಿ ಭಜಿಸುವರು ಮುನಿಜನರುಗದುಗಿನಲಿ ವಾಸಿಸುವ ಶ್ರೀ ವೀರನಾರಾಯಣನುಮುದದಿಂದ ಸಲಹುವನು ಸಂದೇಹವೇನು 4

***