Showing posts with label ಗುರುಪ್ರಜ್ಞಾನಿಧಿ ತೀರ್ಥ ಚರಣಾಬ್ಜ uragadrivasa vittala prajnanidhi teertha stutih. Show all posts
Showing posts with label ಗುರುಪ್ರಜ್ಞಾನಿಧಿ ತೀರ್ಥ ಚರಣಾಬ್ಜ uragadrivasa vittala prajnanidhi teertha stutih. Show all posts

Monday, 2 August 2021

ಗುರುಪ್ರಜ್ಞಾನಿಧಿ ತೀರ್ಥ ಚರಣಾಬ್ಜ ankita uragadrivasa vittala prajnanidhi teertha stutih

brindAvana: muLabAgilu town in prEkshAnidhi tIrthara maTa

aradhana ashwija bahula saptami


ಗುರು ಪ್ರಜ್ಞಾನಿಧಿ ತೀರ್ಥ ಚರಣಾಬ್ಜ ಸೇವೆಯ

ನಿರುತ ನೀಡಯ್ಯ ಯತಿವರ್ಯ ಯತಿವರ್ಯ

ಪೂರ್ಣಪ್ರಜ್ಞಾರ್ಯರ ತತ್ತ್ವವರುಹಯ್ಯ ಅರುಹಯ್ಯ 1


ಕರುಣಾನಿಧಿಯೆ ನಿನ್ನ ಕಾರುಣ್ಯಕೆಣೆಯೆ ಶ್ರೀ

ಕಾರುಣ್ಯ ವಿಠಲನಾ ದಯಾಪಾತ್ರ ದಯಾಪಾತ್ರ

ಎನ್ನ ತಾಪತ್ರಯವ ಎನ್ನ ತಾಪತ್ರಯವ ಹರಿಸಿ ಸಲಹಯ್ಯ 2


ಘೋರ ಸಂಸಾರದ ಶರಧಿ ದಾಟಿದ ಧೀರಾ

ಮಾರುತ ಮತಾಬ್ಧಿಯೊಳು ಚರಿಸುವೆ ಚರಿಸುವೆ

ಗುರುತೂರ್ಯ ಶ್ರಮವಹಿಸಿ ಮೆರೆಯುವೆ ಮೆರೆಯುವೆ 3


ಮಾರ್ಗದೊಳು ಬರುತಿಹ ದುರ್ಮಾರ್ಗವನು ಜರಿದು ಸ

ನ್ಮಾರ್ಗವನ್ನು ತೋರುವ ಯತಿವರ್ಯ

ಯತಿವರ್ಯ ಎನ್ನ ಭವ

ದುರ್ಗವನೆ ಹರಿಸಿ ಸಲಹಯ್ಯ ಸಲಹಯ್ಯ 4


ಗುರುವೆ ನಿನ್ನಯ ಕರುಣ ಕವಚವನೆ ತೊಡಿಸಯ್ಯ

ಕಾರುಣ್ಯ ವಿಠಲನ ಅರ್ಚಿಪೆ ಅರ್ಚಿಪಾ ನಿನ್ನೊಳು

ಕರುಣಾರಸಕೆ ಕುಂದುಂಟೆ ಕುಂದುಂಟೆ 5


ಹಿಂದಿಲ್ಲ ಮುಂದಿಲ್ಲ ಒಂದು ಬೋಧಿಪೋರಿಲ್ಲ

ಮುಂದೆ ಬಾ ಎನ್ನುವರು ಮೊದಲಿಲ್ಲ ಮೊದಲಿಲ್ಲ

ಇಂದು ನಾ ಮಂದನಾಗಿಹೆ ಎನ್ನ ಕರುಣಿಸೋ ಕರುಣಿಸೋ 6


ಬಂದುದಾಯಿತು ಜನ್ಮ ಸಂದು ಹೋಯಿತು ಆಯು

ಕುಂದಿತೆನ್ನಯ ಕರಣ ಇಂದಿನಾ ಇಂದಿನಾ ಪರಿ

ಯಂತಾಗಿರಲಿ ಮುಂದಿನಾ

ಪಥವೆನಗೆ ತೋರಯ್ಯ ತೋರಯ್ಯ7


ಮಂಕು ಮಾನವನ ಮನ ಡೊಂಕವನೆ ತಿದ್ದಿ ಶ್ರೀ

ವೇಂಕಟೇಶನ ಭಕ್ತನೆನಿಸಯ್ಯ ಎನಿಸಯ್ಯ ನಿನ್ನಾ

ಕಿಂಕರೊಳಗೆ ಕಿಂಕರನೆನಿಸಯ್ಯ 8


ಕಾರುಣ್ಯವಿಠಲಾಭಿನ್ನ ಶ್ರೀ

ಉರಗಾದ್ರಿವಾಸವಿಠಲನ ನಿಜದಾಸ ನಿಜದಾಸ ನೀ

ಪರಮೋದಾರ ಗುರುವರ್ಯ ಯತಿವರ್ಯ 9

****