raga mohana
ಅಧಿಕ ಮಾಸದ ಹಾಡು
ಅಧಿಕ ಮಾಸ ಬಂದು ಅಧಿಕಾನಂದ ತಂದು
ಅಗಣಿತ ಮಹಿಮನ ಆರಾಧಿ ಸಲೆಂದು
ಅಧಿಕ ಅಧಿಕವಾಗಿ ಅನುಗ್ರಹ ಪೊಂದ ಲು
ಅಪೂಪ ದಾನಗಳ ನೀಡೆ ನ್ನಲು
ಪಲ್ಲವಿ
ಅಷ್ಟ ವಸುಗಳು ಏಕಾದಶ ರುದ್ರರು
ದ್ವಾದಶ ಆದಿತ್ಯ ರ ಸಹಿತವಾಗಿ
ವಷಟ್ ಕಾರ ಮತ್ತು ಭಗಧಾತು ಎಂದು ಮುವತ್ತ ಮೂರು ರಂಗೋಲಿ ಹಾಕಿ IIಅಧಿಕ II
ಅಧಿಕ ಮಾಸದಲ್ಲಿ ಮುದಮನ ದಿಂದ
ಭಕ್ತರಿಗೆ ದಾನವ ಮಾಡಲು
ಅಧಿಕ ಕವಾಗಿ ಫಲ ಬರುವುದೆಂದು
ಪದುಮನಾಭನ ದಯೆ ಸಿಗುವುದೆಂದೂ IIಅಧಿಕ II
ವ್ರತ ನೇಮ ಉಪವಾಸ ದಂಪತ್ತು ಭೋಜನ
ಲಕ್ಷ ಬತ್ತಿ ಲಕ್ಷ ನಮಸ್ಕಾರಾವು
ಏಕ ಭುಕ್ತಿ ದಿಕ್ಕು ಬದಲಿಸಿ ಊಟ
ಧಾರಣೆ ಪಾರಣೆ ವಿಷ್ಣುಪಂಚಕವು II ಅಧಿಕ II
ಲಕ್ಷ ಪುಷ್ಪಾರ್ಚನೆ ಮೌನವ್ರತವು ಬಳಿಕ
ಅರಿಸಿನ ಕುಂಕುಮ ಮರದ ಬಾಗಿನವು
ವಸ್ತ್ರಗಳ ದಾನ ಭಾಗವತ ಶ್ರವಣ
ಪುರಾಣಾದಿಗಳ ಮನನವು II ಅಧಿಕ II
ನಿತ್ಯ ದಾನಗಳ ದಾನ ವಿವಿಧ ಫಲಗಳ ದಾನ
ನಿತ್ಯ ಗೆಜ್ಜೆವಸ್ತ್ರದ ದಾನವು
ನಾರೀಕೇಳದ ದಾನ ಕಲ್ಲು ಸಕ್ಕರೆ ದಾನಖರ್ಜೂರದಾ ದಾನಗಳು, II ಅಧಿಕ II
ಹಾಲು ಮೊಸರಿನ ದಾನ ಅಡಿಕೆ ವಿಳೆದೆಲೆ ದಾನ
ಸಾಲಿಗ್ರಾಮದ ದಾನಗಳು
ಭಾಗವತ ಗ್ರಂಥದ ದಾನವು
ಮುವ್ವತ್ತ ಮೂರು ದಾಸರ ಪದ ಗಾಯನವು II ಅಧಿಕ II
ದಿನದಿನವು ಮನೆಯಲ್ಲಿ ಶಾಂತಿಯು ನೆಲೆಸುವುದು
ಅನುದಿನ ಆನಂದವಾಗುವುದು
ಸಚ್ಚಿದಾನಂದ ನ ದಯೆ ಸಿಗಲೆಂದು
ಮಧ್ವೇಶ ಕೃಷ್ಣನಲಿ ಬೇಡುವುದು
, IIಅಧಿಕ II
*******
ಅಂಕಿತ : ಮಧ್ವೇಶ ವಿಠಲ
ಅಂಕಿತ : ಮಧ್ವೇಶ ವಿಠಲ
**********