Showing posts with label ಆನಂದಮಹುದೆನೆಗೆ ನಿನ್ನ ನಾಮಸ್ಮರಣೆ raghunayaka. Show all posts
Showing posts with label ಆನಂದಮಹುದೆನೆಗೆ ನಿನ್ನ ನಾಮಸ್ಮರಣೆ raghunayaka. Show all posts

Monday, 6 September 2021

ಆನಂದಮಹುದೆನೆಗೆ ನಿನ್ನ ನಾಮಸ್ಮರಣೆ ankita raghunayaka

 ankita ರಘುನಾಯಕ/ರಘುರಾಮ (ಅನೇಕ)

ರಾಗ: ಆನಂದಭೈರವಿ ತಾಳ: [ಆದಿ]


ಆನಂದಮಹುದೆನೆಗೆ ನಿನ್ನ ನಾಮಸ್ಮರಣೆ 


ಮಾನನಿಧಿ ಗುರುವರ್ಯ ರಾಘವೇಂದ್ರ  ಅ. ಪ


ನೀ ನುಡಿದುದೇ ವೇದ ನೀ ನಡೆದುದೇ ಧರ್ಮ

ಮಾನವರ್ಗದೆ ಮಾರ್ಗ ಚರಿತಾರ್ಥವು

ಮೌನಿಮಣಿ ನಿನ್ನಮೃತವಾಣಿಯೊಂದೇ ಸಾಕು

ಕಾಣಿಪುದು ಮುಕ್ತಿಯನು ನಿತ್ಯ ಸತ್ಯ  1

ಅನವರತ ಭಕ್ತಿಯಿಂ ಭಜಿಸುವರ ಕರುಣದಿಂ

ಕನಸಿನಲಿ ಪೋಷಿಸುವೆ ತಂದೆ ಗುರುವೆ

ಮುನಿಸು ನಿನಗಿನಿಸಿಲ್ಲ ಎಲ್ಲಿರಲಿ ಎಂತಿರಲಿ 

ಮುನಿರಾಯ ಬಂದೊದಗಿ ಕಾಪಾಡುವೆ  2

ಅದುವೆ ಭೂವೈಕುಂಠ ಅಲ್ಲಿರುವ ರಘುರಾಮ

ಅದೆಕೊ ಮಂತ್ರಾಲಯಂ ಪುಣ್ಯನೆಲೆಯು

ಅದುವೆ ಶ್ರೀ ರಾಘವೇಂದ್ರರು ನಿಂದ ನೆಲೆವೀಡು

ಒದಗಿ ಭಜಿಸೈ ಮನುಜ ಗುರುರಾಯರ  3

***