ಅಡವಿ ನಿಲಯ ಇನ್ನಡಿಗೆರಗುವೆ
..
ಅಡವಿನಿಲಯ ನಿನ್ನಡಿಗೆರಗುವೆ ಕರ
ಪಿಡಿದು ಪಾಲಿಸಯ್ಯ ಪ
ಧೃಡನುತ ಭಾರತಿ ಒಡೆಯನೆ ಪ್ರಾರ್ಥಿಪೆ |
ಬಿಡಿಸು ಭವದ ಮಾಯಾ ಅ.ಪ
ನಿನ್ನ ದರುಶನದಿ ಎನ್ನ ಜನ್ಮ ಪಾ |
ವನ್ನ ವಾಯಿತಯ್ಯ |
ನಿನ್ನನುಗ್ರಹಪಡೆದ ಸಂ |
ಪನ್ನರೊಳಿಡು ಜೀಯಾ 1
ತರುಚರನರದ್ವಿಜ | ವರರೂಪತ್ರಯ |
ಧರಿಸಿದಂಥ ದೇವ ||
ದುರುಳ ದೈತ್ಯ ಪರಿವಾರ ಗರ್ವಹರ
ಶರಣರ ಸಂಜೀವಾ 2
ಸೃಷ್ಟಿಯೊಳಗೆ ಅತಿ ಶ್ರೇಷ್ಟನೆಂದೆನಿಸಿದ |
ಕುಷ್ಟಗಿ ಮೂರುತಿ ಪುರವಾಸ
ಧಿಟ್ಟ ಮೂರುತಿ ಶಾಮಸುಂದರ
ವಿಠಲ ಪ್ರಿಯದಾಸ 3
***