..
ಮಾಯಾವ್ಯಾತಕೋ ಮಾಧವನೆ ಮಾಯಾವ್ಯಾತಕೋ ಪ
ಮಾಯವ್ಯಾತಕೆ ಎನ್ನ | ಪ್ರೀಯ ಸಖನೆ ಲೋಕನಾಯಕ ನೀನಿರೆ ಕಾಯೆ ಕಂಡವರಾ ಅ.ಪ.
ಆರು ವರ್ಗಗಳೆಂಬ ಕ್ರೂರರಿಗೊಪ್ಪಿಸಿದೂರಾ ನೋಡುವದು ಉದಾರ ಉಚಿತವೆ 1
ಇಂದಿರೆಯರಸ ಗೋವಿಂದ ನಿನ್ನಯ ಪಾದದ್ವಂದ್ವ ನಂಬಿದವನ ಕುಂದೆಣಿಸುವರೇ 2
ಪನ್ನಂಗ ಶಯನ ಸುಪರ್ಣ ಗಿರೀಶಾ ಸು-ಪರ್ಣ ವಾಹನ ಮೋಹನ್ನ ವಿಠ್ಠಲನೇ 3
***