Showing posts with label ನೀ ಕೊಡೆ ನಾ ಬಿಡೆ ಕೇಳಯ್ಯ ರಂಗ ಗೋಕುಲಪತಿ ಗೋವಿಂದಯ್ಯ purandara vittala NEE KODE NAA BIDE KELAYYA RANGA GOKULAPATI GOVINDAYYA. Show all posts
Showing posts with label ನೀ ಕೊಡೆ ನಾ ಬಿಡೆ ಕೇಳಯ್ಯ ರಂಗ ಗೋಕುಲಪತಿ ಗೋವಿಂದಯ್ಯ purandara vittala NEE KODE NAA BIDE KELAYYA RANGA GOKULAPATI GOVINDAYYA. Show all posts

Sunday, 5 December 2021

ನೀ ಕೊಡೆ ನಾ ಬಿಡೆ ಕೇಳಯ್ಯ ರಂಗ ಗೋಕುಲಪತಿ ಗೋವಿಂದಯ್ಯ purandara vittala NEE KODE NAA BIDE KELAYYA RANGA GOKULAPATI GOVINDAYYA



ಪುರಂದರದಾಸರು

ನೀ ಕೊಡೆ ನಾ ಬಿಡೆ ಕೇಳಯ್ಯ ರಂಗ
ಗೋಕುಲಪತಿ ಗೋವಿಂದಯ್ಯ ||ಪ||

ನೋಡುವೆ ನಿನ್ನನು ಪಾಡುವೆ ಗುಣಗಳ
ಬೇಡುವೆ ಕಾಡುವೆ ನಾಡೊಳಗೆ
ಮೋಡಿಯ ಬಿಡು ಬಿಡು ಮೊದಲಿಗ ಬಡ್ಡಿಯ
ಕಾಡಲಿ ತುರುಗಳ ಕಾಯ್ದ ರನ್ನ ||

ಎಂಟಕ್ಷರವಿದೆ ಹೃದಯಸಾಕ್ಷಿಗಳಿವೆ
ಗಂಟೆಗೆ ಮೋಸವೆ ದಾಸನಿಗೆ
ಎಂಟೆಟೆನಿಸುವ ಬಂಟನ ಕೈಯಲಿ
ತುಂಟತನವ ಬಿಡೊ ತುಡುಗರಸೊ ||

ಅಪ್ಪ ಶ್ರೀ ಕೃಷ್ಣನೆ ಅಮರರಿಗೊಲಿದನೆ
ಸರ್ಪನ ಮೇಲೊರಗಿಪ್ಪವನೆ
ಒಪ್ಪಿಸಿ ಕೊಟ್ಟರೆ ಪುರಂದರವಿಠಲನ
ಒಪ್ಪುತ ಪಾಡುವೆ ನಡೆ ಮನೆಗೆ ||
***

ಈಗಲೆ ಕೊಡೆನಗೆ ಮುಕ್ತಿಯನು
ನಾಗಶಯನ ಶ್ರೀಪುರಂದರವಿಠಲನೆ
***


pallavi

nI koDe nA biDe kELayya ranga gOkulapati gOvindayya

caraNam 1

nODuve ninnanu pADuve guNagaLa bEDuve kADuve nADoLage
mODiya biDu biDu modaliga baDDiya kADali durugaLa kAidaranna

caraNam 2

eNtakSaravide hrdaya sAkSigaLive gaNDage mOsave dAsanige
eNTeTenisuva baNDana kaiyali tuNTatanava biDo tuDugaraso

caraNam 3

appa shrI krSNane amararigolidane sarpana mEloragippavane
oppisi koTTare purandara viTTalana opputa pADuve naDe manege
***

ನೀ ಕೊಡೆ ನಾ ಬಿಡೆ ಕೇಳಯ್ಯ-ಹರಿ-|
ಗೋಕುಲಪತಿಗೋವಿಂದಯ್ಯ ಪ

ನೋಡುವೆ ನಿನ್ನನು ಪಾಡುವೆ ಗುಣಗಳ |ಕಾಡುವೆ ಬೇಡುವೆ ನಾಡೊಳಗೆ ||ಮೋಡಿಯ ಬಿಡು ಕೊಡು ಮೊದಲಿಗೆ ಬಡ್ಡಿಯ |ಕಾಡೊಳು ತುರುಗಳ ಕಾಯ್ದರಸನೆಹರಿ1

ಎಂಟಕ್ಷರವಿವೆ ದ್ವಯಸಾಕ್ಷಿಗಳಿವೆ |ಗಂಟಿಗೆ ಮೋಸವೆ ದಾಸರಿಗೆ ||ಎಂಟುಂಟೆನಿಸುವೆ ಬಂಟರ ಬಾಯಲಿ |ತುಂಟತನವ ಬಿಡು ತುಡುಗರರಸೆ 2

ಅಪ್ಪನೆ ಅಯ್ಯನೆ ಅಮರರಿಗೊಲಿದನೆ |ಸರ್ಪನೆ ಮೇಲೆ ಮಲಗಿಪ್ಪವನೆ |ಒಪ್ಪಿಸಿಕೊಟ್ಟರೆಪುರಂದರವಿಠಲನೆ |ಒಪ್ಪವ ತೋರುವೆ ಒಡೆಯನಿಗೆ 3
*******