ಕಾಖಂಡಕಿ ಶ್ರೀ ಮಹಿಪತಿರಾಯರು
ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಶ್ರೀಗುರುನಾಥ ತ್ರಾಹಿ ತ್ರಾಹಿ ಎಂದವನಪರಾಧ ನೋಡದೆ ನೀ ಕಾಯಿ pa
ಪತಿತಪಾವನೆಂಬ ಬಿರುದು ನಿನಗೆ ಎಚ್ಚರಿಲ್ಲೆ ಪ್ರತಿದಿನ ಮೊರೆ ಇಡಲಿಕ್ಕೆ ಮತ್ತಿದೆ ಸೋಜಿಗವಲ್ಲೆ ಅತಿ ಸೂಕ್ಷ್ಮ ಸುಪಥವರಿಯಲಿಕ್ಕೆ ನಾ ಏನು ಬಲ್ಲೆ ಹಿತದಾಯಕ ನನ್ನ ದೀನ ದಯಾಳು ನೀನೆವೆ ಅಲ್ಲೆ 1
ತಪ್ಪಿಲ್ಲದೆ ನಿನ್ನ ಮೊರೆಯ ಹೋಗುವರೇನೊ ಏ ಶ್ರೀಪತಿ ಒಪ್ಪಿಸಿಕೊಳ್ಳದಿದ್ದರಹುದೆ ಜಗದೊಳು ನಿನ್ನ ಖ್ಯಾತಿ ಕೃಪೆಯುಳ್ಳ ಸ್ವಾಮಿ ನಿನ್ನದೆ ಸಕಲ ಸಹಕಾರ ಸ್ಥಿತಿ ಅಪರಾಧ ಕ್ಷಮೆ ಮಾಡಿ ಸಲಹಬೇಕೆನ್ನ ಶ್ರೀಗುರುಮೂರ್ತಿ 2
ಅನಾಥ ಬಂಧು ನೀ ಎಂದಾಡುತಿರಲಿ ಅನಾದಿಯಿಂದ ನ್ಯೂನಾರಿಸದೆ ಬಾರÀದೆ ಬಿರುದಿಗೆ ತಾ ಕುಂದು ಅನುದಿನ ಅನುಕೂಲ ಮುನಿಜನರಿಗೆ ನೀ ಬ್ರಹ್ಮಾನಂದ ದೀನ ಮಹಿಪತಿ ಸ್ವಾಮಿ ಭಾನುಕೋಟಿತೇಜ ನೀ ಪ್ರಸಿದ್ಧ 3
****