Showing posts with label ಶ್ರೀಮಧ್ವಮತವೆಂಬಕ್ಷೀರಪಾರಾವಾರ pranesha vittala. Show all posts
Showing posts with label ಶ್ರೀಮಧ್ವಮತವೆಂಬಕ್ಷೀರಪಾರಾವಾರ pranesha vittala. Show all posts

Sunday, 17 November 2019

ಶ್ರೀಮಧ್ವಮತವೆಂಬಕ್ಷೀರಪಾರಾವಾರ ankita pranesha vittala

by ಪ್ರಾಣೇಶದಾಸರು
ಶ್ರೀ ಮಧ್ವಮತವೆಂಬಕ್ಷೀರಪಾರಾವಾರ|ಸೋಮನೆನಿಸುತಿಹ ವರದೇಂದ್ರ ಕರಸಂಜಾತ |ನೀ ಮಹಿಯೊಳಾವಾವಪರಿಕಾಣಿಸುವ ನೋಡಿರಾಮ ಪದ ಜಲಜ ಭೃಂಗ ಪ

ಕುಂಡಲಿಯೊ ಭಾರತಿಯೊ ಈಶನೊ ಎಂದುದ್ವಿಜ|ಷಂಡ ತುತಿಸುವುದು ಶ್ರೀ ಭುವನೇಂದ್ರ ರಾಯರಾ |ಕಂಡು ಪದಯುಕ್ತ ಪುರುಷಾಕಾರ ಶಿಖಾರಹಿತ ಕೂಡದಿದುಯೆನಲು ಪೇಳ್ವೆ ||ದಂಡಧರ ಯೋಗದಾಢ್ರ್ಯದೊಳು ತಾ ಅಹಿಯಂತೆ |ಪಂಡಿತೇಶನು ವಾಗ್ಬಲದಲಿ ಭಾರತಿಯಂತೆ |ರುಂಡಮಾಲಿಯ ತೆರದಿ ತೋರುವರು ವೈರಾಗ್ಯದಲಿ ನಿರುತ ಭಜಿಸುವರಿಗೆ 1

ವಿಧಿಯೊ ಅರ್ಕನೊ ಇಂದ್ರನೋ ಎಂಬ ತೆರದಿಂದ |ಬುಧಜನಕೆ ತೋರ್ವನಾಲ್ಮೊಗಖಗಸಹಸ್ರಾಕ್ಷ |ಇದು ಯೆಂತು ಸಾಮ್ಯವೆನೆ ಸರ್ವಜನ ಯೋಗ್ಯತೆಯನರಿವಂತೆ ಧಾತನಂತೇ ||ಮದಡಜ್ಞಾನಾಖ್ಯ ತಮವಳಿವಲ್ಲಿ ರವಿಯಂತೆ |ಪದುಮೇಶನ ಗುಣವ ವಿಚಾರಿಸಲನೇಕಾಕ್ಷ |ಚದುರನೆನುವ ಬಗೆಯಿಂದೊಪ್ಪುತಿಹ ನಮ್ಮ ಗುರುವ ತುತಿಸುವೊದಕ್ಕೆನ್ನ ವಶವೆ 2

ಕಡಲೊ ಸುರಧೇನವೊ ಹಂಸನೋ ಯೆಂಬಂತೆ |ಪೊಡವಿಗೆ ವಿರಾಜಿಸುವ ಉದಕಮಯವಾಗಿಹದು |ಕಡು ಚತುಷ್ಪಾದಿಅಂಡಜಜಂತು ಈ ಸಾಮ್ಯ ಸಲ್ಲದೆನೆ ಸಲ್ವ ವಿವರ ||ಒಡಲಿನೊಳು ಪ್ರಾಣೇಶ ವಿಠಲಮಣಿಪೊಳೆವುತಿದೆ |ಕೊಡುವ ಬೇಡಿದ ವರವ ಅಮರರಾಕಳಿನಂತೆ |ಕುಡಿವಂತೆ ಹಂಸ ಪಯ ಜಲವುಳಿದು ದೋಷವೆಣಿಸದೆ ಬಿನ್ನಪವ ಲಾಲಿಪ 3
*******