Showing posts with label ಬಂದೆ ಬಂದೆ ಸ್ವಾಮಿಯೆ ಬಂದೆ ಬಂದೆ gopala vittala BANDE BANDE SWAMIYE BANDE BANDE. Show all posts
Showing posts with label ಬಂದೆ ಬಂದೆ ಸ್ವಾಮಿಯೆ ಬಂದೆ ಬಂದೆ gopala vittala BANDE BANDE SWAMIYE BANDE BANDE. Show all posts

Wednesday, 6 October 2021

ಬಂದೆ ಬಂದೆ ಸ್ವಾಮಿಯೆ ಬಂದೆ ಬಂದೆ ankita gopala vittala BANDE BANDE SWAMIYE BANDE BANDE

 


ಶ್ರೀ ಗೋಪಾಲದಾಸರ ಕೃತಿ* 


ಬಂದೆ ಬಂದೆ ಸ್ವಾಮಿಯೆ ಬಂದೆ ಬಂದೆ ಪ.


ಬಂದೆ ಬಂದೆ ಗೋವಿಂದ ಗೋವಳ ಬಾಂಧವ ಭಕ್ತವತ್ಸಲಇಂದಿರೇಶ ಶ್ರೀ ವೆಂಕಟ ನಿನ್ನ ಸಂದರುಶದಕೆ ಸಾಗಿ ನಾನಿಲ್ಲಿ ಅ.ಪ.


ನಡೆದು ನಡೆಸುತ ನುಡಿದು ನುಡಿಸುತಅಡಿಗಡಿಗೆ ಕಾಪಾಡುತಒಡನೆ ಆಡುತ ಬಿಡದೆ ಕ್ಷಣವನುಸಡಗರದಿ ಕರೆತರಲು ನಾನಿಲ್ಲಿ 1


ಆಪ್ತ ಅನಿಮಿತ್ತ ವ್ಯಾಪ್ತ ಸರ್ವತ್ರಗುಪ್ತ ಗುಣಗಣಪೂರ್ಣನೆಪ್ರಾಪ್ತ ನೀನೆನಗಾಗಬೇಕೆಂದುವ್ಯಾಪ್ತಿ ನಿನ್ನದು ಹುಡುಕುತಲಿ ನಾ2


ಒಂದು ರೂಪದಿ ನಿಂದು ಎನ್ನಲ್ಲಿಚೆಂದದಿಂ ಕರೆತಂದೆ ಇಲ್ಲಿಒಂದರಿಯೆ ನಿನ್ನ ವಂದಿಸುವ ಬಗೆಬಂದೊದಗೊ ನೀನೆನ್ನ ವದನಕೆ 3


ಬಂದೆ ಬಂದೆ ನೀ ಬಂದಂತೆ ಕರ-ತಂದುದಕೆ ಫಲ ನೀನೆ ಬಲ್ಲೆಸಂದರುಶನ ನಿನಗೆ ನೀ ಮಾಳ್ಪಂದವನು ನೋಳ್ಪಾತುರದಿ ನಾ 4


ಏನು ಕೊಡಲಿಲ್ಲ ಏನು ಬೇಡಲಿಲ್ಲಏನು ಪಡೆಯಲೊ ಕರುಣಿಯೆನೀನು ಕೊಟ್ಟ ಸ್ವಾತಂತ್ರ್ಯದ ಫಲನಿನಗೆ ಅರ್ಪಿಸಬೇಕೆನುತ ಇಲ್ಲಿ 5


ರಕ್ಷಶಿಕ್ಷಕ ಮೋಕ್ಷದಾಯಕಸೂಕ್ಷ್ಮ ಘನ ಮಹಾವ್ಯಾಪಕಕುಕ್ಷಿಯೊಳು ಜಗದ್ಭರಿತ ಪೂರಿತಅಕ್ಷಯಫಲದಾಯಕ 6


ನಮೋ ನಮೋ ನಾಗಾರಿವಾಹನನಮೋ ನಮೋ ಸುರಸುಪ್ರಸನ್ನನೆನಮೋ ನಮೋ ಗೋಪಾಲವಿಠಲನಮಿಪ ಭಕ್ತರ ಸಲಹುವನೆಂದು 7

***


pallavi


bandE bandE svamiyE bande bandE bandE gOvindA?govala bhandhavA


anupallavi


bhaktavatsalA indirEshA shrI venkaTa ninna sandarushanake sAgi nAnilli


caraNam


namO namO nagarivAhana namO namO surasuprasannA

namO namO gOpalaviTTala namipa? bhaktara salahuvanendu

***


ಬಂದೆ ಬಂದೆ ಸ್ವಾಮಿಯೇ ಬಂದೆ ಬಂದೆ  ! ಪ !


ಬಂದೆ ಬಂದೆ ಗೋವಿಂದ ಗೋವಳ 

ಬಾಂಧವ ಭಕ್ತವತ್ಸಲ 

ಇಂದಿರೇಶ ಶ್ರೀ ವೆಂಕಟೇಶ ನಿನ್ನ 

ಸಂದರುಶನಕೆ ಸಾಗಿ ನಾನಿಲ್ಲಿ   ! ಅ.ಪ!


ನಡೆದು ನಡೆಸುತ ನುಡಿದು ನುಡಿಸುತ 

ಅಡಿಗಡಿಗೆ ಕಾಪಾಡುತ 

ಒಡನೆ ಆಡುತ ಬಿಡದೆ 

ಕ್ಷಣವನು ಸಡಗರದಿ ಕರೆತರಲು ನಾನಿಲ್ಲಿ. ! ‌೧ !


ಆಪ್ತ ಅನಿಮಿತ್ತ ವ್ಯಾಪ್ತ

ಸರ್ವತ್ರ ಗುಪ್ತ ಗುಣಗಳ ಪೂರ್ಣನೆ 

ವ್ಯಾಪ್ತ ನೀನೆನಗಾಗಬೇಕೆಂದು

ವ್ಯಾಪ್ತಿ ನಿನ್ನಲಿ ಹುಡುಕುತಲಿ ನಾ ! ೨ ! 


ಒಂದು ರೂಪದಿ ನಿಂದು ಎನ್ನಲಿ 

ಚೆಂದದಿ ಕರೆತಂದೆ ಇಲ್ಲಿ 

ಒಂದರಿಯೆ ನಿನ್ನ ವಂದಿಸುವ ಬಗೆ 

ಬಂದೊದಗೊ ನೀನೆನ್ನ ವದನಕೆ ! ೩ !


ರಕ್ಷ ಶಿಕ್ಷಕ ಮೋಕ್ಷದಾಯಕ 

ಸೂಕ್ಷ್ಮ ಘನ ಮಹಾವ್ಯಾಪಕ 

ಕುಕ್ಷಿಯೊಳು ಜಗದ್ಭರಿತ 

ಪೂರಿತ ಅಕ್ಷಯ ಫಲದಾಯಕ !೪ !


ನಮೋ ನಮೋ ನಾಗಾರಿವಾಹನ 

ನಮೋ ನಮೋ ಸುರಸುಪ್ರಸನ್ನನೆ 

ನಮೋ ನಮೋ ಗೋಪಾಲ ವಿಠಲ 

ನಮಿಪ ಭಕ್ತರ ಸಲಹುವೆನೆಂದು !೫ !


ಬಂದೆ ಬಂದೆ ಸ್ವಾಮಿಯೇ ಬಂದೆ ಬಂದೆ !!

***