Showing posts with label ಕಂಡೆ ಗುರುರಾಯನಾ ಸುರಮನೋಪ್ರಿಯನಾ gurujagannatha vittala. Show all posts
Showing posts with label ಕಂಡೆ ಗುರುರಾಯನಾ ಸುರಮನೋಪ್ರಿಯನಾ gurujagannatha vittala. Show all posts

Friday, 27 December 2019

ಕಂಡೆ ಗುರುರಾಯನಾ ಸುರಮನೋಪ್ರಿಯನಾ ankita gurujagannatha vittala



ಕಂಡೆ ಗುರುರಾಯನಾ ಸುರಮನೋಪ್ರಿಯನಾ   ||ಪ||
ತೊಂಡವತ್ಸಲ ಧರ - ದಂಡ ಕಮಂಡಲ
ಪಂಡಿತಾಗ್ರಣಿಗಳೊಳು - ದ್ದಂಡ ಮಹಿಮನ ||ಅ.ಪ||

ಯತಿಕುಲಾಧಿಪನ ಸುಫಾಲವ ಶರಾ - 
ಕ್ಷತಜಾಕ್ಷತಿ - ಮಣಿ ವಿಭವಾ
ವ್ರತತಿಜೋಪಮ ಯುಗನಯನ ಸಂಪಿಗಿನಾಸವಾ
ಗಂಡಯುಗಲ ವಿಕಾಸವಾ ಕಪೋಲ ಯುಗ ಭಾಸವಾ
ವದನಾಬ್ಜದೊಳೊಪ್ಪುವ ಕಿರಿಹಾಸವಾ ಹಾ-ಹಾ- ಹಾ ||1||

ಕುಂದ - ಕುಟ್ಮಿಲ - ದಂತ ಪಂಕ್ತಿಯಾ ಅರುಣ
ಪೊಂದಿ ಪೊಳೆವೊದದರ ಛವಿಯಾ
ಸುಂದರ ದರೋಪಮ ಕಂಧರಾಂಕಿತ ಬಾಹುದಂಡವಾ
ಭುಜದಳೊಪ್ಪುವ ಮುದ್ರನಾಮವ
ಹೃದಯ - ಮಂಡಲ ಮುದ್ರನಾಮವ ಹಾ-ಹಾ-ಹಾ ||2||

ಲಲಿತ ಶ್ರೀತುಳಸೀ ಜಲಜಾಕ್ಷಿಯಾ ಮಾಲಾ 
ವಳಿಯ ವಕ್ಷದ ರೋಮಾವಳಿಯಾ 
ಚಲುವ ಸುಳಿನಾಭೀ ಪುಳಿನ ಪೋಲುವೊ ನಿತಂಬವಾ
ಊರು ಕದಳಿ ಸ್ತಂಭವಾ
ಜಾನುಗಾಳು ಮುಕುರಬಿಂಬವ 
ಮಾಡುವ ಚರ್ಯ ವಿಡಂಬವಾ ಹಾ - ಹಾ - ಹಾ ||3||

ಕರಿರದೋಪಮ ಜಂಘೆಗಳಾ - ಗುಲ್ಫ
ವರರತ್ನ ಪಾದಾಂಗುಲಿ ಸಂಫಗಳ
ಸ್ಮರಿಸುವೊ ಜನರಿಗೆ ಸುರವರತರು ಪೋಲುವಾ
ತರಿವೋನು ದುರಿತ ಸಂಘವಾ 
ನಿರುತ ನೀಡುವೋ ನಭೀಷ್ಟವಾ
ಭಕುತರೊಳಗೆ ತಾನಾಡುವಾ ಹಾ - ಹಾ - ಹಾ ||4||

ನೀತ ಗುರುಜಗನ್ನಾಥಾ ವಿಠಲಪಾದ
ಪ್ರೀತಿಪೂರ್ವಕ ಭಜಿಸುತ
ಭೂತ ಪ್ರೇತದ ಭಾಧೆಗಳನೆಲ್ಲ ಕಳೆಯುವಾ
ಸಕಲ ಸೌಖ್ಯನೀಡುವಾ
ನಂಬಿದರೀತ ಪೊರೆಯುವಾ
ತೋರಿಪನಾಗಯ್ಯ ಮಹಿಮವಾ ಹಾ - ಹಾ - ಹಾ ||5||
********

ಕಂಡೆ ಗುರುರಾಯನಾ ಸುರಮನೋಪ್ರಿಯನಾ ankita gurujagannatha vittala

ಕಂಡೆ ಗುರುರಾಯನಾ ಸುರಮನೋಪ್ರಿಯನಾ   ||ಪ||
ತೊಂಡವತ್ಸಲ ಧರ - ದಂಡ ಕಮಂಡಲ
ಪಂಡಿತಾಗ್ರಣಿಗಳೊಳು - ದ್ದಂಡ ಮಹಿಮನ ||ಅ.ಪ||

ಯತಿಕುಲಾಧಿಪನ ಸುಫಾಲವ ಶರಾ - 
ಕ್ಷತಜಾಕ್ಷತಿ - ಮಣಿ ವಿಭವಾ
ವ್ರತತಿಜೋಪಮ ಯುಗನಯನ ಸಂಪಿಗಿನಾಸವಾ
ಗಂಡಯುಗಲ ವಿಕಾಸವಾ ಕಪೋಲ ಯುಗ ಭಾಸವಾ
ವದನಾಬ್ಜದೊಳೊಪ್ಪುವ ಕಿರಿಹಾಸವಾ ಹಾ-ಹಾ- ಹಾ ||1||

ಕುಂದ - ಕುಟ್ಮಿಲ - ದಂತ ಪಂಕ್ತಿಯಾ ಅರುಣ
ಪೊಂದಿ ಪೊಳೆವೊದದರ ಛವಿಯಾ
ಸುಂದರ ದರೋಪಮ ಕಂಧರಾಂಕಿತ ಬಾಹುದಂಡವಾ
ಭುಜದಳೊಪ್ಪುವ ಮುದ್ರನಾಮವ
ಹೃದಯ - ಮಂಡಲ ಮುದ್ರನಾಮವ ಹಾ-ಹಾ-ಹಾ ||2||

ಲಲಿತ ಶ್ರೀತುಳಸೀ ಜಲಜಾಕ್ಷಿಯಾ ಮಾಲಾ 
ವಳಿಯ ವಕ್ಷದ ರೋಮಾವಳಿಯಾ 
ಚಲುವ ಸುಳಿನಾಭೀ ಪುಳಿನ ಪೋಲುವೊ ನಿತಂಬವಾ
ಊರು ಕದಳಿ ಸ್ತಂಭವಾ
ಜಾನುಗಾಳು ಮುಕುರಬಿಂಬವ 
ಮಾಡುವ ಚರ್ಯ ವಿಡಂಬವಾ ಹಾ - ಹಾ - ಹಾ ||3||

ಕರಿರದೋಪಮ ಜಂಘೆಗಳಾ - ಗುಲ್ಫ
ವರರತ್ನ ಪಾದಾಂಗುಲಿ ಸಂಫಗಳ
ಸ್ಮರಿಸುವೊ ಜನರಿಗೆ ಸುರವರತರು ಪೋಲುವಾ
ತರಿವೋನು ದುರಿತ ಸಂಘವಾ 
ನಿರುತ ನೀಡುವೋ ನಭೀಷ್ಟವಾ
ಭಕುತರೊಳಗೆ ತಾನಾಡುವಾ ಹಾ - ಹಾ - ಹಾ ||4||

ನೀತ ಗುರುಜಗನ್ನಾಥಾ ವಿಠಲಪಾದ
ಪ್ರೀತಿಪೂರ್ವಕ ಭಜಿಸುತ
ಭೂತ ಪ್ರೇತದ ಭಾಧೆಗಳನೆಲ್ಲ ಕಳೆಯುವಾ
ಸಕಲ ಸೌಖ್ಯನೀಡುವಾ
ನಂಬಿದರೀತ ಪೊರೆಯುವಾ
ತೋರಿಪನಾಗಯ್ಯ ಮಹಿಮವಾ ಹಾ - ಹಾ - ಹಾ ||5||
********