Showing posts with label ಆರುತಿಯ ಬೆಳಗ ಬನ್ನಿರೆ ಆರತಿಯ bheemesha krishna SAMPRADAYA AARATIYA BELAGA BANNIRE AARATIYA SMPRADAYA. Show all posts
Showing posts with label ಆರುತಿಯ ಬೆಳಗ ಬನ್ನಿರೆ ಆರತಿಯ bheemesha krishna SAMPRADAYA AARATIYA BELAGA BANNIRE AARATIYA SMPRADAYA. Show all posts

Tuesday, 2 November 2021

ಆರುತಿಯ ಬೆಳಗ ಬನ್ನಿರೆ ಆರತಿಯ ankita bheemesha krishna SAMPRADAYA AARATIYA BELAGA BANNIRE AARATIYA SMPRADAYA

ರಾಗ ಕುಂತಲವರಾಳಿ


ಆರತಿಯ ಬೆಳಗಬನ್ನಿರೆ ಆರತಿಯ ಬೆಳಗಬನ್ನಿರೆ
ಪಾರ್ವತಿದೇವಿಯರಿಗೆ
ಕೀರುತಿ ಕೊಂಡಾಡುತಲಿ ಪರ್ವತರಾಜನ ಮಗಳಿಗೆ
ಆರತಿಯ ಬೆಳಗಬನ್ನಿರೆ ||ಪ||

ವಾಲೆ ಕಠಾಣಿ ಚಿಂತಾಕು ಮ್ಯಾಲೆ ಸರಿಗೆ ಸರ ಮುತ್ತುಗಳು
ಕಾಲಗೆಜ್ಜೆಸರಪಳಿನಿಟ್ಟ ಫಾಲಾಕ್ಷನ ಮಡದಿಗೆ ||1||

ರಂಗುಮಾಣಿಕ್ಯದ ಹೆರಳು ಬಂಗಾರದಾಭರಣವಿಟ್ಟು
ದುಂಡುಮಲ್ಲಿಗೆ ಮುಡಿದು ಕುಳಿತ ಮಂಗಳಾದೇವಿಯರಿಗೆ ||2||

ದುಂಡುಮುತ್ತಿನ ಮುಕುರ್ಯವು ಚಂದ್ರ ಬಾಳ್ಯಬುಗುಡಿನಿಟ್ಟು
ದುಂಡು ಹರಡಿ ಕಂಕಣಕಮಲ ದ್ವಾರ್ಯನಿಟ್ಟ ವಾರಿಜಾಕ್ಷಿಗೆ ||3||

ಜಾತಿಮಾಣಿಕ್ಯದ ವಂಕಿ ನೂತನಾದ ನಾಗಮುರಿಗೆ
ಪ್ರೀತಿಯಲಿ ಪೀತಾಂಬ್ರನುಟ್ಟು ಜ್ಯೋತಿಯಂತೆ ಹೊಳೆವೊ ಗೌರಿಗೆ ||4||

ನೀಲವರ್ಣ ಭೀಮೇಶಕೃಷ್ಣ ಧ್ಯಾನಮಾಡುತ ಕೃಷ್ಣನ
ನೀಲಕಂಠನ ಸಹಿತ ಕುಳಿತ್ವಿಶಾಲನೇತ್ರೆ ಪಾರ್ವತಿಗೆ||5||
***

Arathiya belagabannire parvati deviyarige
Kiruti kondadutali parvatarajana magalige
Aratiya belagabannire ||pa||

Vale kathani cintaku myale sarige sara muttugalu
Kalagejjesarapalinitta palakshana madadige ||1||

Rangumanikyada heralu bangaradabaranavittu
Dundumallige mudidu kulita mangaladeviyarige||2||

Dundumuttina mukuryavu camdra balyabugudinittu
Dundu haradi kankanakamala dvaryanitta varijakshige ||3||

Jatimanikyada vanki nutanada nagamurige
Pritiyali pitambranuttu jyotiyamte holevo gaurige ||4||

Nilavarna bimesakrushna dhyanamaduta krushnana
Nilakanthana sahita kulitvisalanetre parvatige 5
***