Showing posts with label ದಯದಿ ವರಗಳ ನೀಡು ಮಮಸ್ವಾಮಿ ಸರ್ವಂತರ್ಯಾಮಿ kamalanabha vittala. Show all posts
Showing posts with label ದಯದಿ ವರಗಳ ನೀಡು ಮಮಸ್ವಾಮಿ ಸರ್ವಂತರ್ಯಾಮಿ kamalanabha vittala. Show all posts

Thursday, 5 August 2021

ದಯದಿ ವರಗಳ ನೀಡು ಮಮಸ್ವಾಮಿ ಸರ್ವಂತರ್ಯಾಮಿ ankita kamalanabha vittala

 ..

kruti by Nidaguruki Jeevubai


ದಯದಿ ವರಗಳ ನೀಡು ಮಮಸ್ವಾಮಿ ಸರ್ವಂತರ್ಯಾಮಿ

ನಯದಿ ಬೇಡುವೆ ಭಕುತಜನ ಪ್ರೇಮಿ ಮಮ ಸರ್ವಸ್ವಾಮಿ ಪ


ಸವಿನಯದಿ ಪ್ರಾರ್ಥಿಸುತ ಬೇಡುವೆ

ಸುಮನರಸರ ಪ್ರಿಯ ಚಿತ್ಸುಖಪ್ರದ

ಅಮಿತ ವಿಕ್ರಮ ಅಪ್ರಮೇಯನೆ

ರಮೆಯರಮಣನೆ ರಕ್ಷಿಸೆನ್ನನು ಅ.ಪ


ತೀರ್ಥ ಕ್ಷೇತ್ರಗಳನು ಚರಿಸುತಲೆ ಶ್ರೀ ಹರಿಯಗುಣ ಸ-

ತ್ಪಾತ್ರರಿಂದನವರತ ತಿಳಿಯುತಲೆ

ಶ್ರೋತ್ರಿಯನ ಸಂಗದೊಳು ನಲಿಯುತ್ತಾ

ಮನನಲಿದು ನಿನ್ನಯ

ಕೀರ್ತನೆಗಳನುದಿÀನದಿ ಕೀರ್ತಿಸುತ

ಪಾರ್ಥಸಾರಥೆ ನಿನ್ನ ಪೊಗಳುತ

ರಾತ್ರಿ ಹಗಲೆಡಬಿಡದೆ ಸ್ತುತಿಪರ

ಗಾತ್ರಮರೆಯುತಲವರ ಸೇವಿಪ

ಸಾರ್ಥಕದ ಸೇವೆಯನೆ ನೀಡೈ 1


ಗೋಕುಲಾಪತಿ ಹರಿಯೆ ಗೋವಿಂದ ನೀ ಕಡಿಯೋ ಬಂಧ

ನೂಕಿ ಉದ್ಧರಿಸೆನ್ನ ಭವದಿಂದ

ಕಾಕುಮತಿಗಳ ಬಿಡಿಸು ದಯದಿಂದ ನೀ ಪೊರೆಯದಿರಲು

ಯಾತಕೀ ನರದೇಹ ಮುಕುಂದ

ಮಾತುಮಾತಿಗೆ ನಿನ್ನ ಸ್ಮರಿಸದ

ಮಾತುಗಳ ಫಲವೇನು ಕೇಶವ

ಮಾತುಳಾಂತಕ ಮದನ ಜನಕ

ಮಾಧವ ಮುರಮರ್ದನ ಹರೇ 2


ಕರುಣಿಗಳೊಳು ದೇವನಿನಗೆಣೆಯೆ ದಯ ಮಾಡು ಹರಿಯೆ

ಕರಿಯ ಪೊರೆದವನಲ್ಲೆ ನರಹರಿಯೆ

ಕರೆಕರೆಯ ಸಂಸಾರ ಇದು ಖರೆಯ ಇದರೊಳಗೆ ಬಳಲಿದೆ

ಕರೆದು ರಕ್ಷಿಪುದೆಂದು ಮೊರೆ ಇಡುವೆ

ಕಮಲ ಮುಖಿ ಶ್ರೀ ಭೂಮಿ ಸಹಿತದಿ

ಕಮಲನಾಭ ವಿಠ್ಠಲನೆ ಭಕುತರÀ

ಮಮತೆಯಲಿ ಕೈ ಪಿಡಿದು ಪೊರೆಯುವ

ಮನ್ಮಥನ ಪಿತ ಮನ್ನಿಸುತ ಪೊರೆ 3

***