Showing posts with label ದೇವ ಬಂದ ದೇವಕಿ ಕಂದ mahipati. Show all posts
Showing posts with label ದೇವ ಬಂದ ದೇವಕಿ ಕಂದ mahipati. Show all posts

Wednesday, 11 December 2019

ದೇವ ಬಂದ ದೇವಕಿ ಕಂದ ankita mahipati

ರಾಗ ಮಿಶ್ರಪೀಲೂ , ತ್ರಿತಾಳ

ದೇವ ಬಂದ ದೇವಕಿ ಕಂದ ||ಧ್ರುವ||

ದೇವ ಬಂದ ದೇವತೆಗಳ ಪ್ರಿಯ
ಭುವನತ್ರಯಕಾಗಿಹ ಆಶ್ರಯ ||ಪ||

ಮಾಮನೋಹರ ಮಾಧವ ಮುರಾರಿ
ಸಾಮಜವರದ ಸದಾ ಸಹಕಾರಿ ||೧||

ಉರಗಶಯನ ಹರಿ ಕರುಣಾನಂದ
ಗರುಡವಾಹನ ಗೋಪಾಲ ಗೋವಿಂದ ||೨||

ಸರ್ವಾನಂದ ಶ್ರೀಹರಿ ಸಿರಿಲೋಲ
ಸಾರ್ವಭೌಮ ಸದಾ ಕೃಪಾಲ ||೩||

ಲೇಸಿಲೆ ಹೊರೆವ ಮಹಿಪತಿ ಪ್ರಾಣೇಶ
ಭಾಸ್ಕರಕೋಟಿ ಸುತೇಜಪ್ರಕಾಶ ||೪||
***

ಕಾಖಂಡಕಿ ಶ್ರೀ ಮಹಿಪತಿರಾಯರು

ದೇವ ಬಂದ ದೇವಕಿ ಕಂದ ಪ 


ದೇವ ಬಂದ ದೇವತಿಗಳ ಪ್ರಿಯ ಭುವನತ್ರಯಕಾಗಿಹ್ಯಾಶ್ರಯ 1 

ಮಾಧವ ಮುರಾರಿ ಸಾಮಜ ವರದ ಸದಾ ಸಹಕಾರಿ 2 

ಉರಗ ಶಯನ ಹರಿಕರುಣಾನಂz ಗರಡುವಾಹನ ಗೋಪಾಲ ಗೋವಿಂದ 3 

ಸರ್ವಾನಂದ ಶ್ರೀ ಹರಿ ಸಿರಿಲೋಲ ಸಾರ್ವಭೌಮ ಸದಾ ಕೃಪಾಲ 4 ಲೇಸಿಲೆ ಹೊರೆವ ಮಹಿಪತಿ ಪ್ರಾಣೇಶ ಭಾಸ್ಕರ ಕೋಟಿ ಸುತೇಜ ಪ್ರಕಾಶ 5

****