Showing posts with label ಸ್ಮರಿಸುವೆ ನಾ ನಿಮ್ಮ ಚರಣ ಕಮಲ gopala vittala SMARISUVE NA NIMMA CHARANA KAMALA VIJAYA DASA STUTIH. Show all posts
Showing posts with label ಸ್ಮರಿಸುವೆ ನಾ ನಿಮ್ಮ ಚರಣ ಕಮಲ gopala vittala SMARISUVE NA NIMMA CHARANA KAMALA VIJAYA DASA STUTIH. Show all posts

Sunday 19 December 2021

ಸ್ಮರಿಸುವೆ ನಾ ನಿಮ್ಮ ಚರಣ ಕಮಲ ankita gopala vittala SMARISUVE NA NIMMA CHARANA KAMALA VIJAYA DASA STUTIH

 ರಾಗ ಸೌರಾಷ್ಟ್ರ  ರೂಪಕತಾಳ 
1st Audio by Mrs. Nandini Sripad



2nd Audio by Nagarathna Madam, Mysuru

ಶ್ರೀ ಗೋಪಾಲದಾಸರ ಕೃತಿ 

ಶ್ರೀವಿಜಯರಾಯರ ಕರುಣಾಕವಚಸ್ತೋತ್ರ


ಸ್ಮರಿಸುವೆ ನಾ ನಿಮ್ಮ ಚರಣಕಮಲ 
ಗುರೋ ವಿಜಯರಾಯಾ । ಅಯ್ಯ ।
ಶರಣಜನರಪ್ರಿಯ ಪರಮಕರುಣಾನಿಧಿ 
ವಿಜಯರಾಯಾ॥ ಪ ॥

ಜನ್ಮಾರಭ್ಯದಿ ನಿಮ್ಮಗುಣಕರ್ಮಂಗಳೆಲ್ಲ 
ವಿಜಯರಾಯಾ । ಅಯ್ಯ ।
ಇನ್ನು ನಾ ವರ್ಣಿಸಲೆಷ್ಟರವನೊ 
ಗುರು ವಿಜಯರಾಯ ॥ 1 ॥

ದಿವಿಜರಾವೇಷದಿಂದವನಿಯೊಳುದಿಸಿದ್ಯೊ 
ವಿಜಯರಾಯಾ । ಅಯ್ಯ ।
ದಿವಿಜರಿಂದಲಿ ಪ್ರತಿದಿವಸ ಬಿಡದಲಿದ್ಯೋ 
ವಿಜಯರಾಯಾ ॥ 2 ॥

ಭಾಗವತಧರ್ಮ ವಹಿಸಿ ತ್ರಿರಾವರ್ತಿ 
ವಿಜಯರಾಯಾ । ಅಯ್ಯ ।
ಭಾಗೀರಥಿಯ ಚನ್ನಾಗಿ ಸೇವಿಸಿದಯ್ಯಾ
ವಿಜಯರಾಯಾ ॥ 3 ॥

ಕಂಚಿಕಾಳ್ಹಸ್ತಿ ಶ್ರೀರಂಗಸೇತುಯಾತ್ರೆ 
ವಿಜಯರಾಯಾ । ಅಯ್ಯ ।
ಪಂಚವಾರವು ಸಂಚರಿಸಿ ಸೇವಿಸಿದಯ್ಯಾ 
ವಿಜಯರಾಯಾ ॥ 4 ॥

ಮರಿಯಾದೆಯಿಲ್ಲ ದೇವಗಿರಿಯಾತ್ರೆಯು
ವಿಜಯರಾಯಾ । ಅಯ್ಯ ।
ಪರಿಪರಿಕ್ಷೇತ್ರಕ್ಕೆ ಪೋಗಿ ಪೂಜಿಸಿದಯ್ಯಾ
ವಿಜಯರಾಯಾ ॥ 5 ॥

ಮಹಿಯಲ್ಲ ತಿರುಗಿ ಸರ್ವಕ್ಷೇತ್ರದ ಮೂರ್ತಿಮಹಿಮೆ
ತುತಿಸಿದೆಯೋ ರಾಯಾ । ಅಯ್ಯ ।
ವಹಿಸಿ ದಾಸತ್ವ ವೈಷ್ಣವ ಸಿದ್ಧಾಂತವನೆಲ್ಲ 
ಒರೆದ್ಯೋ ನೀ ವಿಜಯರಾಯಾ ॥ 6 ॥

ಗುರೂಪದಿಷ್ಟರಾಗ್ವ್ಯಾಸಕಾಶಿಯಲ್ಲಿ ಇರುತಿದ್ಯೋ 
ವಿಜಯರಾಯಾ । ಅಯ್ಯ ।
ದುರ್ಯೋನಿ ಬಂದ ವಂಶಸ್ಥನುದ್ಧರಿಸಿದ್ಯೋ ಕರುಣಿ
ಶ್ರೀ ವಿಜಯರಾಯಾ ॥ 7 ॥

ಸ್ವಚ್ಛವಾಗಿ ಗಂಗಾತೀರ ವಾಸವ ಮಾಡಿ ನಿಚ್ಚ 
ಶ್ರೀ ವಿಜಯರಾಯಾ । ಅಯ್ಯ ।
ಹೆಚ್ಚಾದ ಪರ್ವಣಿ ಮತ್ಸ್ಯೋದರಿಯ ತೋರ್ದ್ಯೋ ವಿಚಿತ್ರ 
ವಿಜಯರಾಯಾ ॥ 8 ॥

ತುಂಗಾತೀರದಲ್ಲಿ ಕುಳಿತು ಮೇಲಕೆ ಗಂಗೆ 
ಉಕ್ಕಿಸಿದೆಯೋ ರಾಯಾ । ಅಯ್ಯ ।
ಅಂಗದ ಮುಸುಕು ತೆಗೆಯಲು ಕ್ಷೇತ್ರದಿ ಪಾಂಡುರಂಗನೋ 
ವಿಜಯರಾಯಾ ॥ 9 ॥

ಮಧ್ವಮತಕೆ ಅವಿರುದ್ಧವಾಗಿ ಕವನಬದ್ಧದಿ
ವಿಜಯರಾಯಾ । ಅಯ್ಯ ।
ಶಬ್ದಸಂಗತಿಯಿಂದ ಸಿದ್ಧಾಂತತತ್ವದ ಮುದ್ದಿ
ಮಾಡಿದಿಯೋ ರಾಯಾ ॥ 10 ॥

ತಿದ್ದಿ ತತ್ವಸಾರ ಸುಳಾದಿ ಪದಗಳು ಬುದ್ಧಿಲಿ
ವಿಜಯರಾಯಾ । ಅಯ್ಯ ।
ತದ್ಧಿಮಿ ಧಿಮಿಕೆಂದು ಹೃದ್ಗುಹದಿ ಹರಿಯ ಎದ್ದು 
ಕುಣಿಸಿದಿ ರಾಯ ॥ 11 ॥

ಸದಾಚಾರಸಂಪತ್ತು ಮಧುಕರವೃತ್ತಿಯು ವಿಧಿಯಲ್ಲಿ
ವಿಜಯರಾಯಾ । ಅಯ್ಯ ।
ಕದನ್ನ ಉಂಡರಿಯೆವೊ ಶಿಷ್ಯಜನಸಂಘ ಸದಕಾಲ
ವಿಜಯರಾಯಾ ॥ 12 ॥

ಭಕ್ತರ್ಗೆ ಬಂದಪಮೃತ್ಯು ಹರಿಸಿ ಆಯುವಿತ್ತೆ 
ಶ್ರೀ ವಿಜಯರಾಯಾ । ಅಯ್ಯ ।
ಪ್ರತ್ಯಕ್ಷವಲ್ಲದೆ ಮನವೆ ಇದಕೆ ಸಾಕ್ಷಿ ಅತ್ಯಂತ
ಮಹಿಮ ರಾಯ ॥ 13 ॥

ನಿತ್ಯನ್ನದಾನ ಪುತ್ರೋತ್ಸಹಗಳನಿತ್ತಿ ಸತ್ಯ 
ಶ್ರೀ ವಿಜಯರಾಯಾ । ಅಯ್ಯ ।
ಹತ್ತೆಂಟು ಮದುವೆ ಮುಂಜಿಗಳ ಮಾಡಿಸಿ ನಿನ್ನ ಭೃತ್ಯರ
ಪೊರೆದ್ಯೋ ರಾಯ ॥ 14 ॥

ಪ್ರತ್ಯಕ್ಷವಾಗಿ ಹತ್ತಿಪ್ಪತ್ತು ಜನರಿಗೆ ತತ್ವೋಪದೇಶ 
ಮಾಡಿ । ಅಯ್ಯ ।
ಹೃತ್ಕಮಲದಿ ಹರಿಯ ತುತಿಸಿ ಸದ್ಗತಿಗಭಯವಿತ್ತೆ
ಶ್ರೀ ವಿಜಯರಾಯಾ ॥ 15 ॥

ಎಲ್ಲರಲ್ಲಿ ಸಿರಿವಲ್ಲಭನಂಶವ ನಿಲ್ಲಿಸಿ
ವಿಜಯರಾಯಾ । ಅಯ್ಯ ।
ಎಲ್ಲ ಬಗೆಯ ಸೇವೆಗೊಂಬೆ ನಿನ್ನಯ ನೆಲೆಯ ಬಲ್ಲವರಾರೋ ರಾಯಾ ॥ 16 ॥

ಎನ್ನಿಂದಲೇನೇನೋ ಆಗೋ ಸಾಧನವೆಲ್ಲ ನಿನ್ನದೆ
ವಿಜಯರಾಯಾ । ಅಯ್ಯ ।
ಎನ್ನ ಸಾಮರ್ಥ್ಯವೆ ಜನ್ಮಜನ್ಮಾಂತರಕೆ
ನಿನ್ನ ಬಿಡೆವೊ ರಾಯಾ ॥ 17 ॥

ಈಗ ಈ ಯುಗದೊಳು ಸಾಧನವೆಂಬುದು ನಾ ಕಾಣೆ ವಿಜಯರಾಯಾ । ಅಯ್ಯ ।
ಯೋಗಿ ನಿನ್ನಯ ಕರುಣವಾದವಗೆಲ್ಲ
ಸಾಗಿ ಬರುವುದೋ ರಾಯ ॥ 18 ॥

ಬಲ್ಲಿದ ನೀನೊಂದು ರೂಪವ ಎನ್ನಲ್ಲಿ 
ನಿಲ್ಲಿಸಿ ಇರಲಾಗಿ । ಅಯ್ಯ ।
ಎಲ್ಲ ಜನರು ಬಂದು ಇಲ್ಲಿ ವಾಲ್ಗೈಸಿನ್ನು
ಎಲ್ಲ ವರವ ಬೇಡೋರೋ ॥ 19 ॥

ನಿಮ್ಮ ಪುಣ್ಯದ ಶೇಷವಿನ್ನು ಉಂಬೆವು ನಾವು
ಬಣ್ಣಿಪೆ ವಿಜಯರಾಯಾ । ಅಯ್ಯ ।
ಎಮ್ಮ ಪೊಂದಿದವರು ನಿನ್ನ ಪೊಂದಿದವರು 
ಇನ್ನು ಕೇಳ್ವಿಜಯರಾಯ ॥ 20 ॥

ಪರಮಪುರುಷ ನಿಮ್ಮ ಕರುಣಕವಚಸ್ತೋತ್ರ
ನಿರುತ ಮಾಡುವ ಭಕುತರ್ಗೆ । ಅಯ್ಯ ।
ಸಿರಿಮಹರಾಜ ಗೋಪಾಲವಿಠ್ಠಲರೇಯ 
ಕರೆದು ಕೈಪಿಡಿವನಯ್ಯಾ ॥ 21 ॥
***

Smarisuve na nimma charana kamala guru vijayaraya |
Saranajanapriya parama karunanidhi vijayaraya || pa ||

Janmarabyavu nimmagunakarmagalella vijayaraya |
Innu na varnisaleshtaravanu guru vijayaraya || 1 ||

Divijara veshadindavaniyoludusidyo vijayaraya |
Divijarindali pratidivasa bidadalidyo vijayaraya || 2 ||

Baghavata dharmavahisi triravarti vijayaraya |
Bagirathiya channagi sevisidyo vijayaraya || 3 ||

Kanchikalhasti sriranga setu yatre vijayaraya |
Panchavaravu sancharisi sevisidayya vijayaraya || 4 ||

Mariyadeyillade varagiriyatreya vijayaraya |
Pariparikshetrakke pogi pujisidayya vijayaraya || 5 ||

Mahiyalli tirugi sarva kshetradi vijayaraya |
Vahisidasatva vaishnava siddhanta vijayaraya || 6 ||

Gurupadesakanagi vyasakasiyallidyo vijayaraya |
Duyoniyalli banda vamsa uddharisidyo vijayaraya || 7 ||

Svaccavagi gamgatira vasamadi vijayaraya |
Hecchada parvaniyolu matsyodaritorde vijayaraya || 8 ||

Tungatiradi kulitu gange pecchisidi vijayaraya |
Angada musukili panduranganna kandyo vijayaraya || 9 ||

Madhvamatada sara kavanadi rachisidyo vijayaraya |
Advaita siddhantabaddhavenisidyo vijayaraya || 10 ||

Suddha tatvasara suladi padamadi vijayaraya |
Hrudyadi dhimikendu hariya kunisidyo vijayaraya || 11 ||

Sadacharasampattu madhukaravruttiyu vijayaraya |
Kadanna undariyaru sishyajanasanga vijayaraya || 12 ||

Baktara apamrutyubidisi Ayuvitte vijayaraya |
Pratyakshyavallave manave idake sakshi vijayaraya || 13 ||

Nityanna putrotsavagalu brutyarige vijayaraya |
Matte dharma mumji maduvegala madisidyo vijayaraya || 14 ||

Baktajanarige tatva upadesava madi vijayaraya |
Hrutkamaladi hariya tilisi sadgatigabaya ittyoni vijayaraya || 15 ||

Ellaralli sirinallana amsava vijayaraya |
Nillisideyo ninna bageya ballavayaro vijayaraya || 16 ||

Ballida ninondu rupadi ennalli vijayaraya |
Nilli siddare ella janaru olaisoru vijayaraya || 17 ||

Nimma punyada seshavinnu umbevo navu vijayaraya |
Namma samarthyavu nimmadendigu vijayaraya || 18 ||

Enninda ago sadhanavella ninnado vijayaraya |
Enna pondiharella ninna dasaro guru vijayaraya || 19 ||

Iga I yugadi sadhanavembudu kane vijayaraya |
Yogi ninnavarige bega odaguvudo vijayaraya || 20 ||

Guru ninna karunakavachatotta Bakutarge vijayaraya |
Sirivara gopalavithalareya kaipidivano vijayaraya || 21 ||
***

ಸ್ಮರಿಸುವೆ ನಾ ನಿಮ್ಮ ಚರಣಕಮಲ
ಗುರುವಿಜಯರಾಯಜನ್ಮಾರಭ್ಯವು ನಿಮ್ಮ ಗುಣಕರ್ಮಗಳೆಲ್ಲ ವಿಜಯರಾಯದಿವಿಜರ ವೇಷದಿಂದವನಿಯೊಳುದಿಸಿದ್ಯೊ ವಿಜಯರಾಯಭಾಗವತಧರ್ಮವಹಿಸಿ ತ್ರಿರಾವರ್ತಿ ವಿಜಯರಾಯಕಂಚಿಕಾಳ್ಹಸ್ತಿ ಶ್ರೀರಂಗ ಸೇತುಯಾತ್ರೆ ವಿಜಯರಾಯಮರಿಯಾದೆಯಿಲ್ಲದೆ ವರಗಿರಿಯಾತ್ರೆಯ ವಿಜಯರಾಯಮಹಿಯಲ್ಲಿ ತಿರುಗಿ ಸರ್ವಕ್ಷೇತ್ರದಿ ವಿಜಯರಾಯಗುರೂಪದೇಶಕನಾಗಿ ವ್ಯಾಸಕಾಶಿಯಲ್ಲಿದ್ಯೊ ವಿಜಯರಾಯಸ್ವಚ್ಛವಾಗಿ ಗಂಗಾತೀರ ವಾಸಮಾಡಿ ವಿಜಯರಾಯತುಂಗಾತೀರದಿ ಕುಳಿತು ಗಂಗೆ ಪೆಚ್ಚಿಸಿದಿ ವಿಜಯರಾಯಮಧ್ವಮತದಸಾರಕವನದಿ ರಚಿಸಿದ್ಯೊ ವಿಜಯರಾಯಶುದ್ಧ ತತ್ವಸಾರ ಸುಳಾದಿ ಪದಮಾಡಿ ವಿಜಯರಾಯಸದಾಚಾರಸಂಪತ್ತು ಮಧುಕರವೃತ್ತಿಯು ವಿಜಯರಾಯಭಕ್ತರ ಅಪಮ್ಯತ್ಯುಬಿಡಿಸಿ ಆಯುನಿತ್ತೆ ವಿಜಯರಾಯನಿತ್ಯಾನ್ನ ಪುತ್ರೋತ್ಸವಗಳು ಭೃತ್ಯರಿಗೆ ವಿಜಯರಾಯಭಕ್ತಜನರಿಗೆ ತತ್ವೋಪದೇಶವ ಮಾಡಿ ವಿಜಯರಾಯಎಲ್ಲರಲಿ ಸಿರಿನಲ್ಲನ ಅಂಶವ ವಿಜಯರಾಯಬಲ್ಲಿದನೀನೊಂದುರೂಪದಿ ಎನ್ನಲ್ಲಿ ವಿಜಯರಾಯನಿಮ್ಮ ಪುಣ್ಯದ ಶೇಷವಿನ್ನು ಉಂಬೆವೊ ನಾವು ವಿಜಯರಾಯಎನ್ನಿಂದ ಆಗೋ ಸಾಧನವೆಲ್ಲ ನಿನ್ನದೊ ವಿಜಯರಾಯಈಗ ಈ ಯುಗದಿ ಸಾಧನವೆಂಬುದು ಕಾಣೆ ವಿಜಯರಾಯಗುರುನಿನ್ನ ಕರುಣಕವಚತೊಟ್ಟ ಭಕುತರ್ಗೆ ವಿಜಯರಾಯ
******