ಕುಂತಿಯ ಮಕ್ಕಳು ನಿಂತಾರು ದ್ವಾರದಿ
ಕಾಂತೆಯರುತುಂಬಿದ ನಗರಿಯಲಿ
ಎಂಥ ಸೊಗಸಮ್ಮ ಬಾಹೋದೆಂಥ ಸೊಗಸಮ್ಮ ಪ.
ಗಂಧ ಕಸ್ತೂರಿ ಧರಿಸಿರಾಯರು
ಚಂದಾಗಿ ನಿಂತಿರಲು ಮೇಲೆ
ಮಂದ ಮಾರುತ ಸುಳಿದು
ಪರಿಮಳ ತುಂಬಿದ ನಗರಿಯಲಿ ಎನುತ 1
ರಾಶಿ ಮಲ್ಲಿಗೆ ಸಂಪಿಗೆ ಮುಡಿದು
ಸೋಸಿಲೈವರು ಇರಲು ಮೇಲೆ
ಬೀಸಿ ಮಾರುತ ಪರಿಮಳ ತಂದು
ಸೂಸಿದ ನಗರಿಯಲಿ ಎನುತ 2
ಮಿತಿ ಇಲ್ಲದೆ ಹಗಲು ಬತ್ತಿ
ಶತ ಕೋಟಿ ದೀವಟಿಗಿ ದೀಪ
ಅತಿಶಯ ಬೆಳಗೊ ನಗರಿಗೆ
ಪ್ರತಿಯಿಲ್ಲ ತಾಯಿ 3
ಹಾದಿ ಬೀದಿ ದ್ವಾರ ಜಗಲಿ
ಹಂದರ ಅಂದದ ತೋರಣಗಳು
ಸಾದಿನಥಳಿ ಕೊಟ್ಟಾವಮ್ಮ
ಮಾಧವ ಬರಲಿಕ್ಕೆ ಎನುತ 4
ಚಿತ್ರ ಬರೆದ ಮನೆಗÀಳ ಮುಂದೆ
ವಿಸ್ತರಿಸಿದ ರಂಗವಲ್ಲಿ
ಉತ್ತತ್ತಿ ಬಾಳೆಯ ಗಿಡಗಳು
ಜತ್ತಾಗಿ ತೋರುವವು ಎನುತ 5
ಕೇರಿ ಕೇರಿ ನಾರಿಯರೆಲ್ಲ
ಸೀರೆ ಕುಪ್ಪಸ ವಸ್ತಗಳಿಟ್ಟು
ಏರಿ ಗೋಪುರ ಅಟ್ಟಾಲಗಳ
ವೀರರ ನೋಡಲು ಎನುತ 6
ಎತ್ತೆತ್ತ ನೋಡಿದರೂ ಜನರು
ಮುತ್ತುರತ್ನದ ವಸ್ತಗಳಿಟ್ಟು
ಹತ್ತಿಗೋಪುರ ಅಟ್ಟಾಲಗಳ
ಧಿಟ್ಟೆಯರು ನಿಂತಾರೆ ಎನುತ 7
ಅಲ್ಲಲ್ಲಿ ನಿಂತಿದ್ದು ಬಾಲೆಯರು
ಝಲ್ಲೆ ಮುತ್ತಿನ ವಸ್ತಗಳಿಟ್ಟು
ಅಲ್ಲೆಲ್ಲೆ ಉಪ್ಪರಿಗೆ ಏರಿ
ಚಲ್ವರ ನೋಡಲು ಎನುತ 8
ಅಲ್ಲಲ್ಲೆ ತುಂಬಿದ ಜನರು
ಮಲ್ಲಿಗೆ ಸಂಪಿಗೆ ಫಲಗಳ ಹಿಡಿದು
ಚೆಲ್ಲಾಡಬೇಕೆಂದು ಐವರಿಗೆ
ಅಲ್ಲೇ ನಿಂತಾರೆ ಎನುತ 9
ಕೃಷ್ಣರಾಯ ಪಾಂಡವರ
ಭೆಟ್ಟಿಯ ಸೌಭಾಗ್ಯ ನೋಡಿ
ಎಷ್ಟು ಹರುಷ ಬಟ್ಟೇವೆಂದು
ಧಿಟ್ಟೆಯರು ನಿಂತಾರೆ ಬೀದಿಲಿ10
ಮಹಲಮ್ಯಾಲೆ ನಿಂತು ಜನರು
ಸಾಲಾಗಿ ಆರತಿಯ ಹಿಡಿದು
ಶ್ರೀ ಲೋಲ ರಾಮೇಶನ ಭಕ್ತರು
ವಾಲಗೈಸೋರಮ್ಮ ಎನುತ 11
****