ಕಾರುಣ್ಯಮೂರುತಿಯೆ ಕಂಗಳು ಮೂರುಳ್ಳ ದೊರೆಯೆ ||ಪ||
ಧಾರಿಣಿಯೊಳು ನಿನಗೆಣೆಯೆ ಗುರುದೇವ ಶಿಖಾಮಣಿಯೆ ||ಅ||
ಗುಹಾಸುರ ಮರ್ದನನೆ ದೇವ ಖಗ ವೃಷವಾಹನನೆ
ಗಜಚರ್ಮ ಪೀತಾಂಬರನೆ ಮಹಾದೇವ ಮಾಧವನೆ ||
ತ್ರಿಪುರಾವಳಿ ಸಂಹಾರನೆ ತ್ರೈಲೋಕ್ಯ ಪಾವನನೆ
ಅಪಾರಮಹಿಮನೆ ಪ್ರಸನ್ನ ಶ್ರೀಹರಿಹರನೆ ||
ತುಂಗಭದ್ರದಡಿಯ ತಾಳಿಪೆ ಗಂಗೆಯ ಜಡೆಯ
ಪುರಂದರವಿಠಲನ ಪ್ರಿಯ ನೀ ಸಲಹಯ್ಯ ಎನ್ನೊಡೆಯ ||
*******
ರಾಗ ಮುಖಾರಿ ಆದಿತಾಳ (raga, taala may differ in audio)
Karunya muriteye kangalu murulla doreye ||pa||
Dhariniyolage ninage eneye gurudeva sikamaniye ||a.pa||
Guhasura mardanane kavrusha vahanane
Gajacharma pitambarane mahadeva madhavne ||1||
Tripuravali sangarane trailokya pavanane
Apara mahimane prasanna sri hariharane ||2||
Tunga badradadiya talippe gangeya jadeya
Purandaravithalana priya ni salahayya ennodeya ||3||
***pallavi
kAruNya mUrutiye kangaLu mUruLLa doreye
anupallavi
dhAriNiyoLu ninageNeyE gurudEva doreye
caraNam 1
guhAsura mardanane dEva khaga vruSa vAhanane gaja carma pItAmbarane mahAdEva mAdhavanE
caraNam 2
tripurAvaLi samhArane trailOkya pAvanane apAra mahimane prasanna shrI hariharane
caraNam 3
tungabhadraDiya tALipape gangeya oDeya purandara viTTalana priya nI salahayya ennoDeya
***
ಕಾರುಣ್ಯ ಮೂರಿತೆಯೆ ಕಂಗಳು ಮೂರುಳ್ಳ ದೊರೆಯೆ ||ಪ||
ಧಾರಿಣಿಯೊಳಗೆ ನಿನಗೆ ಎಣೆಯೆ ಗುರುದೇವ ಶಿಖಾಮಣಿಯೆ ||ಅ.ಪ||
ಗುಹಾಸುರ ಮರ್ದನನೆ ಖವೃಷ ವಾಹನನೆ
ಗಜಚರ್ಮ ಪೀತಾಂಬರನೆ ಮಹಾದೇವ ಮಾಧವ್ನೆ ||೧||
ತ್ರಿಪುರಾವಳಿ ಸಂಗರನೆ ತ್ರೈಲೋಕ್ಯ ಪಾವನನೆ
ಅಪಾರ ಮಹಿಮನೆ ಪ್ರಸನ್ನ ಶ್ರೀ ಹರಿಹರನೆ ||೨||
ತುಂಘಾ ಭದ್ರದಡಿಯ ತಾಳಿಪ್ಪೆ ಗಂಗೆಯ ಜಡೆಯ
ಪುರಂದರವಿಠಲನ ಪ್ರಿಯ ನೀ ಸಲಹಯ್ಯ ಎನ್ನೊಡೆಯ ||೩||
***