Showing posts with label ಇರಬೇಕು ಇರದಿರಬೇಕು ಶ್ರೀ purandara vittala. Show all posts
Showing posts with label ಇರಬೇಕು ಇರದಿರಬೇಕು ಶ್ರೀ purandara vittala. Show all posts

Tuesday, 3 December 2019

ಇರಬೇಕು ಇರದಿರಬೇಕು ಶ್ರೀ purandara vittala

ಪುರಂದರದಾಸರು
ರಾಗ ಪೂರ್ವಿ ಆದಿತಾಳ)

ಇರಬೇಕು ಇರದಿರಬೇಕು ||ಪ||
ಸಂಸಾರದಿ ಜನಕಾದಿ ರಾಜಋಷಿಗಳಂತೆ ||ಅ||

ಮಿಥಿಲಾಪಟ್ಟಣವು ದಹಿಸಿತೆಂಬುದ ಕೇಳಿ
ಮಿಥಿಲೇಶ "ಮಮ ಕಿಂಚಿನ್ನ ದಹ್ಯತೇ" ಎಂಬಂತೆ ಇರಬೇಕು ||

ದಧೀಚಿ ಋಷಿ ತನ್ನ ಅಸ್ಥಿ ಸುರರಿಗಿತ್ತು
ಮಧುವೈರಿ ವೈಕುಂಠಪುರವಿತ್ತ ತೆರದಂತೆ ಇರಬೇಕು ||

ಪುರಂದರವಿಠಲನ್ನ ದಾಸರ ಸಂಗಡ
ಪುತ್ರ ಮಿತ್ರ ಕಳತ್ರ ಬಂಧುಗಳಂತೆ ಇರಬೇಕು ||
***

pallavi

irabEku iradira bEku

anupallavi

samsAradi janakAdi rAja rSigaLante

caraNam 1

mithilA paTTaNavu dahisidembuda kELi mithilEsha "mama kincinna dahyate" embande

caraNam 2

dadhIci rSi tanna asti surarigittu madhuvairi vaikuNTha puravitta teradante

caraNam 3

purandara viTTalanna dAsara sangaDa putra mitra kaLatra bandhugaLante
***

ಇರಬೇಕು ಇರದಿರಬೇಕು ಶ್ರೀ - |
ಹರಿದಾಸರು ಸಂಸಾರದೊಳು ಪ.

ಕುಲಸತಿಯಾದರೆ ಕೂಡಿರಬೇಕು |
ಸುಲಭದಿಂದ ಸ್ವರ್ಗ ಸೂರಾಡಬೇಕು ||
ಕಲಹ ಗಂಟಿಸತಿ ಕರ್ಕಶೆಯಾದರೆ |
ಹಲವು ಪರಿಯಿಂದಲಿ ಹೊರಗಾಗಬೇಕು 1

ಮಕ್ಕಳು ತಾವು - ಮತಿವಂತರಾದರೆ |
ಅಕ್ಕರೆಯಿಂದಲಿ ಕೂಡಿರಬೇಕು ||
ಚಿಕ್ಕತನದಿ ಬುಧ್ಧಿ ತೇರುಂಡರಾದರೆ |
ಗಕ್ಕನೆ ಅಲ್ಲಿಂದ ಹೊರಗಾಗಬೇಕು 2

ದುಷ್ಟರ ಕಂಡರೆ ದೂರವಿರಬೇಕು |
ಶಿಷ್ಟರ ಕಂಡರೆ ಕೈಮುಗಿಯಬೇಕು ||
ದಿಟ್ಟ ಶ್ರೀ ಪುರಂದರವಿಠಲರಾಯನ |
ಗಟ್ಟಿಯಾಗಿ ಆತನ ನೆರೆನಂಬಬೇಕು 3
*******