ಮುದ್ದು ಬಾಲಕ ತವನಿದ್ದೆ ಬಂದಿದೆ ಕಣ್ಣುಎದ್ದು ಮುಚ್ಚುತಲಿಹುದು ಪದ್ಮ ಪತ್ರಾಕ್ಷ ಪ
ಬಾರೋ ಮಲಗು ಎನ್ನ ಏರುಪೊಟ್ಟೆಯ ಮೇಲೆಸಾರಸಾಕ್ಷನೆ ಚುಕ್ಕಭೂರಿ ತಟ್ಟುವೆನು 1
ಕರಗಳ ಹೆಗಲಲ್ಲಿ ಚರಣಗಳನೆ ಚಾಚುಸರಳ ಮಲಗೋ ಪಾದಾಭರಣ ಒತ್ತುವುದುಕಂಠಾಭರಣ ಒತ್ತುವುದು 2
ಕೇಶ ಬರುವುದೆನ್ನ ಆಶದೊಳಗೆಇಂದಿರೇಶ ಟೊಪ್ಪಿಗೆ ಕಟ್ಟು ಕೂಸು ಮಸ್ತಕದಿ 3
****