Showing posts with label ಸಂತತ ನಿಮ್ಮ ಸ್ಮರಣೆ ಉಳ್ಳವರಿಗೆ prasannavenkata. Show all posts
Showing posts with label ಸಂತತ ನಿಮ್ಮ ಸ್ಮರಣೆ ಉಳ್ಳವರಿಗೆ prasannavenkata. Show all posts

Monday, 18 November 2019

ಸಂತತ ನಿಮ್ಮ ಸ್ಮರಣೆ ಉಳ್ಳವರಿಗೆ ankita prasannavenkata

by ಪ್ರಸನ್ನವೆಂಕಟದಾಸರು
ಸಂತತ ನಿಮ್ಮ ಸ್ಮರಣೆ ಉಳ್ಳವರಿಗೆಅಂತರ್ಬಾಹ್ಯಾರ್ಥವು ತೋರುವುದೊಂದರಿದೆ ಪ.

ಅಂತ್ಯಜಾತಿಯಳಂಗಸಂಗದಿ ಮತಿಗೆಟ್ಟುಅಂತ್ಯವಸಾನದೊಳೊಯ್ಯ ಬಂದಅಂತಕನವರ್ಗಂಜಿಅಣುಗನಾರಾಯಣನೆಂತೆಂದಜಾಮಿಳನ ಕಾಯ್ದೆ ಕರುಣಾಬ್ಧಿ 1

ಕಾಂತಾರತಿರುಗಿ ಕ್ರೀಡೆಗೆ ಜಲದೊಳು ಪೊಕ್ಕದಂತಿಅಂಘ್ರಿಯನಕ್ರನುಂಗೆಳೆಯೆಚಿಂತಿಸಿ ತುದಿಯಲ್ಲೆ ಹರಿಯೆಂದು ಕೂಗಲನಂತಾಸನವ ಬಿಟ್ಟು ಬಂದೆತ್ತಿ ಹೊರೆದೆ 2

ಕಂತುವೈರಿಯ ಭಕ್ತ ಸೊಕ್ಕಿ ನೃಪರನೌಸೆಕಾಂತ ನಿಮ್ಮಡಿಗೆ ಬಿನ್ನಹ ಕಳುಹೆಕುಂತಿಯ ತನುಜನಿಂದವನ ಕೊಲ್ಲಿಸಿ ಭೂಕಾಂತರಿಗೊಲಿದ್ಯೊ ಪ್ರಸನ್ನವೆಂಕಟಕೃಷ್ಣ 3
*******