Showing posts with label ಕೇಶವ ಚರಣವಭಜಿಪ ಭಕ್ತಿಯಲೀ others. Show all posts
Showing posts with label ಕೇಶವ ಚರಣವಭಜಿಪ ಭಕ್ತಿಯಲೀ others. Show all posts

Friday, 27 December 2019

ಕೇಶವ ಚರಣವಭಜಿಪ ಭಕ್ತಿಯಲೀ others

by  ಕರ್ಕಿ ಕೇಶವದಾಸ
ಕೇಶವ ಚರಣವಭಜಿಪ ಭಕ್ತಿಯಲೀ ಪ

ಶ್ರೀಹರಿ ಕಥೆಗಳ ಲಾಲಿಸುವೆನು ನಿತ್ಯ
ಶ್ರೀಹರಿ ಕೀರ್ತನೆ ಮಾಡುವೆ ನಿತ್ಯ
ಶ್ರೀಹರಿ ಸ್ಮರಣೆಯ ಗೈಯುತಿಪ್ಪೆನು ನಿತ್ಯ
ನಿತ್ಯ 1

ಶ್ರೀಹರಿ ರೂಪವ ಪೂಜಿಸುವೆನು ನಿತ್ಯ
ಶ್ರೀಹರಿ ಚರಣವ ವಂದಿಪೆ ನಿತ್ಯ
ಶ್ರೀಹರಿ ದಾಸ್ಯತ್ವ ವಹಿಸುವೆನೂ ನಿತ್ಯ
ನಿತ್ಯ 2

ಶ್ರೀಹರಿಗಾತ್ಮವನರ್ಪಿಸುವೆನು ನಿತ್ಯ
ಶ್ರೀಹರಿ ಚರಣದೊಳುರುಳುವೆ ನಿತ್ಯ
ಭವ ಭಯ
ಶ್ರೀಹರಿ ಚನ್ನಕೇಶವನೆ ಗತಿಯೆಂಬೇ 3
******