Showing posts with label ಸಾಕು ನರಹರಿ ಭವದ ಬವಣಿಂದ್ಯಾಕ ಬಳಲಿ bheemesha krishna SAAKU NARAHARI BHAVADA BAVANINDYAAKA BALALI. Show all posts
Showing posts with label ಸಾಕು ನರಹರಿ ಭವದ ಬವಣಿಂದ್ಯಾಕ ಬಳಲಿ bheemesha krishna SAAKU NARAHARI BHAVADA BAVANINDYAAKA BALALI. Show all posts

Thursday, 2 December 2021

ಸಾಕು ನರಹರಿ ಭವದ ಬವಣಿಂದ್ಯಾಕ ಬಳಲಿ ankita bheemesha krishna SAAKU NARAHARI BHAVADA BAVANINDYAAKA BALALI

ಸಾಕು ನರಹರಿ ಭವದ ಬವಣಿಂ

ದ್ಯಾಕÉ ಬಳಲಿಸುವೆ ಹರಿ ಹರಿ

ಶ್ರೀಕಮಲಾಪತಿ ಶರಣ ಜನರೊಳ-

ಗ್ಹಾಕಿ ಪೊರೆಯೆನ್ನ್ಹರಿ ಹರಿ ಪ

ದೊರೆಯೆ ನೀನಿರಲನ್ಯರಿಗೆ ಬಾಯಿ

ತೆರೆಯಲ್ಯಾಕಿನ್ನ ್ಹರಿ ಹರಿ

ಪರಮ ಆಪ್ತ ನೀನಿರಲು ಕಾಣದೆ

ಪÀರರಿಗೆ ಆಲ್ಪರಿದ್ದರಿಹರಿ1

ಪುತ್ಥಳಿ ಮನೆಯಲೆ ಇರಲು

ಹಿತ್ತಾಳೆ ಬಯಸುವೆನ್ಹರಿಹರಿ

ಬಿಟ್ಟು ನಿನ್ನೀಗನ್ಯ ವಿಷಯದಿಂ

ದ್ದುಟ್ಟುವುದೆ ಸುಖ ಹರಿಹರಿ 2

ಬೇಡಿದ್ವರಗಳ ಕೊಡುವೊ ಭೀ-

ಮೇಶ ಕೃಷ್ಣ ನೀನಿರಲ್ಹರಿಹರಿ

ನೋಡಿ ಸುಖಿಸದೆ ಬಿಟ್ಟು ಕನ್ನಡಿ

ಗೋಡೆಗಡರುವೆನ್ಹರಿಹರಿ 3

***