Showing posts with label ಅರವಿಂದನಾಭ ಶ್ರೀ ಗುರುವೆ ನಿಮ್ಮ ಚರಣಾರವಿಂದವ gurushyamasundara padmanabha teertha stutih. Show all posts
Showing posts with label ಅರವಿಂದನಾಭ ಶ್ರೀ ಗುರುವೆ ನಿಮ್ಮ ಚರಣಾರವಿಂದವ gurushyamasundara padmanabha teertha stutih. Show all posts

Saturday, 1 May 2021

ಅರವಿಂದನಾಭ ಶ್ರೀ ಗುರುವೆ ನಿಮ್ಮ ಚರಣಾರವಿಂದವ ankita gurushyamasundara padmanabha teertha stutih

ಶ್ರೀ ಗುರು ಶ್ಯಾಮಸುಂದರಾಂಕಿತ ಶ್ರೀ ರಿತ್ತಿ ಸುಶೀಲೇಂದ್ರಾಚಾರ್ಯರು ".

ಅರವಿಂದನಾಭ ಶ್ರೀ 

ಗುರುವೆ  । ನಿಮ್ಮ ।

ಚರಣಾರವಿಂದವ 

ಸ್ಮರಿಸುತ ಸುಖಿಪೆ ।। ಪಲ್ಲವಿ ।।

ಮರುತ ಮತೋದ್ಧಾರ 

ಆನಂದತೀರ್ಥ ।

ನಿರುತದಿ ನೆನೆಯುವ 

ಭಾಗ್ಯವ ನೀಡೆಂದು ।। ಅ ಪ ।।

ಉರಗಾಧಿಪನ ಅವ-

ತಾರದಿ ಜನಿಸುತ ।

ಪರಮ ವೈಷ್ಣವನಾಗಿ 

ಮೆರೆದ ಶ್ರೀ ಯತಿವರ ।। ಚರಣ ।।

ಶುಭವನು ಕೊಡು 

ಸುಶೋಭನ ನಾಮಕನೆ ।

ಅಭಯವ ನೀಡೆಂದು 

ಭಕುತಿಲಿ ಬೇಡುವೆ ।। ಚರಣ ।

।ಗುರು ನಿಮ್ಮ ಚರಣವ 

ನೆನೆಯುವ ಮನುಜಗೆ ।

ಸಿರಿ ಗುರು ಶ್ಯಾಮಸುಂದರನು 

ವಲಿಯುತಿಹ ।। ಚರಣ ।।

****