ಶ್ರೀ ಗುರು ಶ್ಯಾಮಸುಂದರಾಂಕಿತ ಶ್ರೀ ರಿತ್ತಿ ಸುಶೀಲೇಂದ್ರಾಚಾರ್ಯರು ".
ಅರವಿಂದನಾಭ ಶ್ರೀ
ಗುರುವೆ । ನಿಮ್ಮ ।
ಚರಣಾರವಿಂದವ
ಸ್ಮರಿಸುತ ಸುಖಿಪೆ ।। ಪಲ್ಲವಿ ।।
ಮರುತ ಮತೋದ್ಧಾರ
ಆನಂದತೀರ್ಥ ।
ನಿರುತದಿ ನೆನೆಯುವ
ಭಾಗ್ಯವ ನೀಡೆಂದು ।। ಅ ಪ ।।
ಉರಗಾಧಿಪನ ಅವ-
ತಾರದಿ ಜನಿಸುತ ।
ಪರಮ ವೈಷ್ಣವನಾಗಿ
ಮೆರೆದ ಶ್ರೀ ಯತಿವರ ।। ಚರಣ ।।
ಶುಭವನು ಕೊಡು
ಸುಶೋಭನ ನಾಮಕನೆ ।
ಅಭಯವ ನೀಡೆಂದು
ಭಕುತಿಲಿ ಬೇಡುವೆ ।। ಚರಣ ।
।ಗುರು ನಿಮ್ಮ ಚರಣವ
ನೆನೆಯುವ ಮನುಜಗೆ ।
ಸಿರಿ ಗುರು ಶ್ಯಾಮಸುಂದರನು
ವಲಿಯುತಿಹ ।। ಚರಣ ।।
****
No comments:
Post a Comment